Short News

ರೈತನ ಹೊಲ ಕಾಯತ್ತಿದ್ದಾಳೆ ನಟಿ ಸನ್ನಿ ಲಿಯೋನ್!

ರೈತನ ಹೊಲ ಕಾಯತ್ತಿದ್ದಾಳೆ ನಟಿ ಸನ್ನಿ ಲಿಯೋನ್!

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬಂದಕಿಂಡಿ ಪಲ್ಲೆ ಗ್ರಾಮದ 45 ವರ್ಷದ ರೈತ ಚೆಂಚು ರೆಡ್ಡಿ ತನ್ನ ಬೆಳೆಯನ್ನು ಕಾಪಾಡಿಕೊಳ್ಳಲು ನಟಿ ಸನ್ನಿ ಲಿಯೋನ್ ಫೋಟೋ ಬಳಸಿಕೊಂಡಿದ್ದಾನೆ. 10 ಎಕರೆ ಜಾಗದಲ್ಲಿ ತಾವು ಬೆಳೆದ ಬೆಳೆಗಳಿಗೆ ಅಲ್ಲಿ ಓಡಾಡುವವರ ಗ್ರಾಮಸ್ಥರ ಕೆಟ್ಟ ದೃಷ್ಟಿ ಬೀಳದಂತೆ ದೃಷ್ಟಿ ಬೊಂಬೆಯಾಗಿ ಕೆಂಪು ಬಿಕಿನಿಯಲ್ಲಿರೋ ಸನ್ನಿಯ ಫೋಟೋವನ್ನು ಹೊಲದ ಮುಂದೆ ಹಾಕಿದ್ದಾರೆ. ಹೀಗಾಗಿ ದಾರಿಹೋಕರ ದೃಷ್ಟಿ ಸನ್ನಿ ಮೇಲೆ ಬೀಳ್ತಿದೆಯೇ ಹೊರತು, ಬೆಳೆಯ ಮೇಲೆ ಯಾರ ಕಣ್ಣು ಹೋಗುತ್ತಿಲ್ಲ.
ಜಿಯೋ ಗೆ ಹೊಡೆತ, 300 ಮಿಲಿಯನ್ ಬಳಕೆದಾರರನ್ನು ಹೊಂದಿದ ಏರ್ಟೆಲ್

ಜಿಯೋ ಗೆ ಹೊಡೆತ, 300 ಮಿಲಿಯನ್ ಬಳಕೆದಾರರನ್ನು ಹೊಂದಿದ ಏರ್ಟೆಲ್

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್‌ಟೆಲ್, ಜಿಯೋ ಆರಂಭದ ನಂತರದಲ್ಲಿಯೂ ತನ್ನ ಅಧಿಪತ್ಯವನ್ನು ಮುಂದುವರೆಸಿಕೊಂಡು ಹೋಗಿದೆ. ಏರ್‌ಟೆಲ್ ಸದ್ದಿಲ್ಲದೇ 300 ಮಿಲಿಯನ್ ಬಳಕೆದಾರರನ್ನು ತನ್ನ ಕುಟುಂಬದಲ್ಲಿ ಸೇರಿಕೊಳ್ಳಲು ಯಶಸ್ವಿಯಾಗಿದೆ. 2018ರ ಮಾರ್ಚ್ 31ರ ವರೆಗಿನ ಟೆಲಿಕಾಂ ವರದಿಯೂ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತದಲ್ಲಿ ಒಟ್ಟು 300ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ. ಒಟ್ಟು 16ರ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏರ್‌ಟೆಲ್‌ಗೆ ಭಾರತವೇ ಅತೀ ದೊಡ್ಡ ಮಾರುಕಟ್ಟೆ. 16ದೇಶಗಳಲ್ಲಿ ಒಟ್ಟು 413ಮಿಲಿಯನ್ ಬಳಕೆದಾರರನ್ನು ಏರ್‌ಟೆಲ್ ಹೊಂದಿದೆ.
ಶ್ರೀರೆಡ್ಡಿಗೆ ಆಫರ್ ಕೊಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಶ್ರೀರೆಡ್ಡಿಗೆ ಆಫರ್ ಕೊಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಸ್ಟಿಂಗ್ ಕೌಚ್ ವಿರುದ್ಧ ನಟಿ ಶ್ರೀರೆಡ್ಡಿಗೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ತೀವ್ರ ಟೀಕೆ ಮತ್ತು ವಿರೋಧಕ್ಕೆ ಗುರಿಯಾಗಿದ್ದರು. ಈಗ ಮತ್ತೆ ಶ್ರೀರೆಡ್ಡಿ ಪರವಾಗಿ ಮಾತನಾಡಿರುವ ಆರ್ ಜಿವಿ, ಸೂಕ್ತ ಪಾತ್ರ ದೊರೆತಲ್ಲಿ ಶ್ರೀರೆಡ್ಡಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಶ್ರೀರೆಡ್ಡಿ ಜೊತೆ ಕೆಲಸ ಮಾಡಲು ನಾನು ಸಿದ್ದನಿದ್ದೇನೆ ಎಂದಿದ್ದಾರೆ. ಮೇ ತಿಂಗಳಲ್ಲಿ ಆರ್ ಜಿವಿಯವರ ಆಫೀಸರ್ ಸಿನೆಮಾ ರಿಲೀಸ್ ಆಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ವಿಷ್ಯವನ್ನು ತಳ್ಳಿ ಹಾಕಿರುವ ಆರ್ ಜಿವಿ ಆ ರೀತಿಯ ಯಾವುದೇ ಕರೆಗಳು ನನಗೆ ಬಂದಿಲ್ಲ ಎಂದಿದ್ದಾರೆ.
aadhar

aadhar

  • ಬ್ಯಾಂಕು ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯ ಎನ್ನುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಹೇಳಿದೆ.ಈಗಾಗಲೇ ಹಲವು ಬ್ಯಾಂಕು ಗಳು ಆಧಾರ್ ಲಿಂಕ್ ಮಾಡಿಸದಿದ್ದರೆ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಸಂದೇಶವನ್ನು ಗ್ರಾಹಕರಿಗೆ ರವಾನಿಸಿವೆ. ಜತೆಗೆ ನಿರಂತರವಾಗಿ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಿ ಆಧಾರ್ ಲಿಂಕ್ ಮಾಡುವಂತೆ ಸೂಚನೆ ನೀಡುತ್ತಿವೆ.
  • ಆದರೆ, ಬ್ಯಾಂಕು ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬುದರ ಕುರಿತಾಗಿ ಆರ್ಬಿಐ ಯಾವುದೇ ಸೂಚನೆಯನ್ನು ಬ್ಯಾಂಕುಗಳಿಗೆ ನೀಡಿಲ್ಲ.