Short News

ಪ್ರೇಮಿಗಳ ದಿನದಂದು ರಜೆ ಘೋಷಿಸಿ: ವಾಟಾಳ್ ನಾಗರಾಜ್

ಪ್ರೇಮಿಗಳ ದಿನದಂದು ರಜೆ ಘೋಷಿಸಿ: ವಾಟಾಳ್ ನಾಗರಾಜ್

ಪ್ರೇಮಿಗಳೇ ಭಯ ಬಿಡಿ ನಿಮ್ಮ ಬೆಂಬಲಕ್ಕೆ ವಾಟಾಳ್ ನಾಗರಾಜ್ ಇದ್ದಾರೆ. ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪ್ರೇಮಿಗಳ ದಿನಕ್ಕೆ ಬೆಂಬಲ ಘೋಷಿಸಿ ಪ್ರೇಮಿಗಳಿಗೆ ವಿಶೇಷ ಯೋಜನೆಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.

ತಮ್ಮ ಚಿತ್ರ ವಿಚಿತ್ರ ಪ್ರತಿಭಟನೆಗಳು ಆತುರದ ಹೇಳಿಕೆಗಳಿಂದ ಪ್ರಸಿದ್ಧವಾಗಿರುವ ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನದಂದೂ ಸಹ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಆದರೆ ಅದು ಪ್ರೇಮಿಗಳ ಪರ ಪ್ರತಿಭಟನೆ.

ಜಿಯೋ ಗೆ ಹೊಡೆತ, 300 ಮಿಲಿಯನ್ ಬಳಕೆದಾರರನ್ನು ಹೊಂದಿದ ಏರ್ಟೆಲ್

ಜಿಯೋ ಗೆ ಹೊಡೆತ, 300 ಮಿಲಿಯನ್ ಬಳಕೆದಾರರನ್ನು ಹೊಂದಿದ ಏರ್ಟೆಲ್

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್‌ಟೆಲ್, ಜಿಯೋ ಆರಂಭದ ನಂತರದಲ್ಲಿಯೂ ತನ್ನ ಅಧಿಪತ್ಯವನ್ನು ಮುಂದುವರೆಸಿಕೊಂಡು ಹೋಗಿದೆ. ಏರ್‌ಟೆಲ್ ಸದ್ದಿಲ್ಲದೇ 300 ಮಿಲಿಯನ್ ಬಳಕೆದಾರರನ್ನು ತನ್ನ ಕುಟುಂಬದಲ್ಲಿ ಸೇರಿಕೊಳ್ಳಲು ಯಶಸ್ವಿಯಾಗಿದೆ. 2018ರ ಮಾರ್ಚ್ 31ರ ವರೆಗಿನ ಟೆಲಿಕಾಂ ವರದಿಯೂ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತದಲ್ಲಿ ಒಟ್ಟು 300ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ. ಒಟ್ಟು 16ರ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏರ್‌ಟೆಲ್‌ಗೆ ಭಾರತವೇ ಅತೀ ದೊಡ್ಡ ಮಾರುಕಟ್ಟೆ. 16ದೇಶಗಳಲ್ಲಿ ಒಟ್ಟು 413ಮಿಲಿಯನ್ ಬಳಕೆದಾರರನ್ನು ಏರ್‌ಟೆಲ್ ಹೊಂದಿದೆ.
ಶ್ರೀರೆಡ್ಡಿಗೆ ಆಫರ್ ಕೊಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಶ್ರೀರೆಡ್ಡಿಗೆ ಆಫರ್ ಕೊಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಸ್ಟಿಂಗ್ ಕೌಚ್ ವಿರುದ್ಧ ನಟಿ ಶ್ರೀರೆಡ್ಡಿಗೆ ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ತೀವ್ರ ಟೀಕೆ ಮತ್ತು ವಿರೋಧಕ್ಕೆ ಗುರಿಯಾಗಿದ್ದರು. ಈಗ ಮತ್ತೆ ಶ್ರೀರೆಡ್ಡಿ ಪರವಾಗಿ ಮಾತನಾಡಿರುವ ಆರ್ ಜಿವಿ, ಸೂಕ್ತ ಪಾತ್ರ ದೊರೆತಲ್ಲಿ ಶ್ರೀರೆಡ್ಡಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಶ್ರೀರೆಡ್ಡಿ ಜೊತೆ ಕೆಲಸ ಮಾಡಲು ನಾನು ಸಿದ್ದನಿದ್ದೇನೆ ಎಂದಿದ್ದಾರೆ. ಮೇ ತಿಂಗಳಲ್ಲಿ ಆರ್ ಜಿವಿಯವರ ಆಫೀಸರ್ ಸಿನೆಮಾ ರಿಲೀಸ್ ಆಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ವಿಷ್ಯವನ್ನು ತಳ್ಳಿ ಹಾಕಿರುವ ಆರ್ ಜಿವಿ ಆ ರೀತಿಯ ಯಾವುದೇ ಕರೆಗಳು ನನಗೆ ಬಂದಿಲ್ಲ ಎಂದಿದ್ದಾರೆ.
ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಜಾಗತಿಕವಾಗಿ ಸೈಬರ್ ದಾಳಿ ಮತ್ತು ಇಂಟರ್‌ನೆಟ್‌ ಹ್ಯಾಕಿಂಗ್ ಕುರಿತು ಅಧ್ಯಯನ ನಡೆಸುವ ಸೈಮಂಟಿಕ್ ಸಂಸ್ಥೆ ವರದಿಯ ಪ್ರಕಾರ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ. ಸೈಬರ್ ದಾಳಿ ಬೆದರಿಕೆಯಲ್ಲಿ ಅಮೆರಿಕ ಮೊದಲ ಸ್ಥಾನ ಹಾಗೂ ಚೀನಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ಟೆಕ್ ದೈತ್ಯ ರಾಷ್ಟ್ರ ಅಮೆರಿಕಾದಲ್ಲಿಯೇ ಸೈಬರ್ ದಾಳಿ ಬೆದರಿಕೆ ಹೆಚ್ಚಾಗಿದೆ ಎಂದು ಸೈಮಂಟಿಕ್ ಏಷ್ಯಾ ಪೆಸಿಫಿಕ್‌ ವಿಭಾಗದ ಮಾರುಕಟ್ಟೆ ಮುಖ್ಯಸ್ಥ ತರುಣ್ ಕೌರ ಅವರು ತಿಳಿಸಿದ್ದಾರೆ. ಸುಲಭವಾಗಿ ನೆನಪಿನಲ್ಲಿರಲಿ ಎನ್ನೋ ಕಾರಣಕ್ಕೆ ಬಹಳ ಸುಲಭವಾದ ಪಾಸ್‌ವರ್ಡ್‌ನ್ನು ಬಳಸುವವರೇ ಹೆಚ್ಚಿದ್ದು ಇದು ಹ್ಯಾಕ್ ಮಾಡಲು ಸುಲಭವಾಗಿದೆ.