Short News

ಐಎಎಸ್ ಟಾಪರ್ ಟೀನಾ-ಅಮೀರ್ ಆರತಕ್ಷತೆ, ಉಪರಾಷ್ಟ್ರಪತಿ ಸೇರಿ ಹಲವು ಗಣ್ಯರ ಉಪಸ್ಥಿತಿ

ಐಎಎಸ್ ಟಾಪರ್ ಟೀನಾ-ಅಮೀರ್ ಆರತಕ್ಷತೆ, ಉಪರಾಷ್ಟ್ರಪತಿ ಸೇರಿ ಹಲವು ಗಣ್ಯರ ಉಪಸ್ಥಿತಿ

ಐಎಎಸ್‌‌ ಟಾಪರ್‌‌ಗಳಾದ ಟೀನಾ ದಬಿ ಮತ್ತು ಅಥರ್‌ ಅಮೀರ್‌ ಖಾನ್‌ ವಿವಾಹ ಆರತಕ್ಷತೆ ಸಮಾರಂಭ ಶನಿವಾರ ನಡೆದಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಸೇರಿದಂತೆ ಹಲವು ಗಣ್ಯರು ನವ ದಂಪತಿಗೆ ಶುಭ ಹಾರೈಸಿದ್ದಾರೆ. 2015ರ ಐಎಎಸ್‌‌ ಮೊದಲ ಟಾಪರ್‌‌ ಟೀನಾ ಹಾಗೂ ಎರಡನೇ ಟಾಪರ್‌‌ ಅಮೀರ್‌ ಖಾನ್‌ ರಾಜಸ್ಥಾನದ ಜೈಪುರ್‌ ಕೋರ್ಟ್‌ನಲ್ಲಿ ಏ.9ರಂದು ಸರಳ ವಿವಾಹ ಆಗಿದ್ದರು. ನಂತರ ವರ ಅಮೀರ್‌ ಖಾನ್‌ ತವರು ಕಾಶ್ಮೀರದಲ್ಲಿ ಮದುವೆ ಸಮಾರಂಭ ನೆರವೇರಿತ್ತು. ಅಂತರ್ ಧರ್ಮೀಯ ವಿವಾಹವಾದ ಇವರ ಮದುವೆ ಟೀಕೆಗೆ ಗುರಿಯಾಗಿತ್ತು. ಅವೆಲ್ಲವನ್ನು ಮೀರಿ ಟೀನಾ-ಅಮೀರ್ ಮದುವೆಯಾಗಿದ್ದಾರೆ.
ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಇಂದಿನ ಮುಂಬೈ ಸೆನ್ಸೆಕ್ಸ್ ವಹಿವಾಟಿನಲ್ಲಿ 212 ಅಂಕ ಜಿಗಿತದೊಂದಿಗೆ 34,713.60ಅಂಕ ಎತ್ತರವನ್ನು ತಲುಪಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.25 ಅಂಕ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,617.80 ಅಂಕ ಮಟ್ಟಕ್ಕೇರಿತು. ಇಂದಿನ ವ್ಯವಹಾರದಲ್ಲಿ ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್‌ ಮತ್ತು ಕನ್ಸೂಮರ್‌ ಡ್ನೂರೇಬಲ್ಸ್‌ ಶೇರುಗಳು ಉತ್ತಮ ವಹಿವಾಟಿಗೊಳಪಟ್ಟವು.
ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಯಾವುದೇ ರೀತಿಯ ಜೈವಿಕ ಮಾದರಿಗಳು ತಮ್ಮ ಬಳಿ ಇಲ್ಲವೆಂದು ಚೆನ್ನೈನ ಅಪೋಲೋ ಆಸ್ಪತ್ರೆ ತಿಳಿಸಿದೆ. ಬೆಂಗಳೂರಿನ 37ವರ್ಷದ ಅಮೃತಾ ಎಂಬುವವರು ತಾನು ಜಯಲಲಿತಾರ ಮಗಳಾಗಿದ್ದು, ಇದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಮೃತಾ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌, ಜಯಲಲಿತಾ ಅವರ ರಕ್ತದ ಮಾದರಿ ಒದಗಿಸುವಂತೆ ಅಪೋಲೋ ಆಸ್ಪತ್ರೆಗೆ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ ಆಸ್ಪತ್ರೆ ಹೀಗೆ ಹೇಳಿದೆ.
ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪೋಷಕಾಂಶಗಳಿದ್ದು ತೂಕ ಇಳಿಸಲೂ ನೆರವಾಗುತ್ತದೆ. ಕಾಫಿ ನಿಮ್ಮನ್ನು ಕೊಂಚ ಹೊತ್ತು ಎಚ್ಚರಿರಲು ಸಹಕರಿಸಿದರೂ ಉಳಿದಂತೆ ಕೊಬ್ಬನ್ನು ಹೆಚ್ಚಿಸಲು ನೆರವಾಗುತ್ತದೆ. ಬದಲಿಗೆ ಹಸಿರು ಚಹಾ ಸೇವಿಸುವ ಮೂಲಕ ನಿದ್ದೆಯನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿಯೂ ಸಕ್ಕರೆ ಅಲ್ಪಪ್ರಮಾಣದಲ್ಲಿ ಅಥವಾ ಇಲ್ಲದೇ ಇದ್ದರೂ ಉತ್ತಮ. ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ. ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳಲ್ಲೂ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ.