Short News

ಡ್ರಗ್ಸ್ ಮಾಫಿಯಾ ಬಗ್ಗೆ ಕಾವೇರಿದ ಚರ್ಚೆ, ಗೂಂಡಾ ಕಾಯ್ದೆಗೆ ಚಿಂತನೆ

ಡ್ರಗ್ಸ್ ಮಾಫಿಯಾ ಬಗ್ಗೆ ಕಾವೇರಿದ ಚರ್ಚೆ, ಗೂಂಡಾ ಕಾಯ್ದೆಗೆ ಚಿಂತನೆ

ಕರ್ನಾಟಕ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಡ್ರಗ್ಸ್‌ ಮಾಫಿಯಾ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. 'ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಗೃಹ ಸಚಿವರು ಸದನಕ್ಕೆ ಭರವಸೆ ನೀಡಿದರು. ಶುಕ್ರವಾರದ ವಿಧಾನಸಭೆ ಕಲಾಪ ಆರಂಭವಾದಾಗ ಬಿಜೆಪಿ ಸದಸ್ಯ ಆರ್.ಅಶೋಕ್ ಅವರು ನಿಯಮ 69ರ ಅಡಿ (ವಿವರವಾದ ಚರ್ಚೆ) ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಜಾಲದ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾದಕ ದ್ರವ್ಯದ ಮಾರಾಟ ನಡೆಯುತ್ತಿದೆ.

ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ  ರೂ.2500 ಕೋಟಿ

ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ ರೂ.2500 ಕೋಟಿ

ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಕೇಂದ್ರದ ವಿವಿಧ ಇಲಾಖೆ ಸಚಿವರೊಂದಿಗೆ ಚರ್ಚಿಸಿ ರಾಜಜ್ಯದ ಹಲವು ಯೋಜನೆಗಳಿಗೆ ಸುಮಾರು ರೂ.2500 ಕೋಟಿಗೂ ಅಧಿಕ ಅನುದಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2ದಿನಗಳ ತಮ್ಮ ಭೇಟಿ ವೇಳೆ ಸಿಎಂ ಹೆಚ್ಡಿಕೆ ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌,ಭೂ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ,ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌, ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ರನ್ನು ಭೇಟಿ ಮಾಡಿದ್ದರು.
ಕ್ರಿಮಿನಲ್‌ಗಳು ಹೀಗೂ ಮೋಸ ಮಾಡಲು ಯತ್ನಿಸುತ್ತಾರೆ ಅಂತ ಇವತ್ತೆ ಗೊತ್ತಾಗಿದ್ದು!!

ಕ್ರಿಮಿನಲ್‌ಗಳು ಹೀಗೂ ಮೋಸ ಮಾಡಲು ಯತ್ನಿಸುತ್ತಾರೆ ಅಂತ ಇವತ್ತೆ ಗೊತ್ತಾಗಿದ್ದು!!

ಆನ್‌ಲೈನ್ ಮೂಲಕ ಜನರನ್ನು ಮೋಸಗೊಳಿಸಲು ಸೈಬರ್‌ಕ್ರಿಮಿನಲ್‌ಗಳು ಯಾವ ಯಾವ ದಾರಿಗಳನ್ನು ಹುಡುಕುತ್ತಾರೆ ಎಂಬುದನ್ನು ಕೆಲವೊಮ್ಮೆ ಹೂಹಿಸಲು ಕಷ್ಟವಾಗಬಹುದು. ಅಂತಹದೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಸೈಬರ್‌ ಕ್ರಿಮಿನಲ್‌ಗಳೂ ಹೀಗೂ ಮೋಸ ಮಾಡಬಹುದಾ ಎಂದು ಆಶ್ಚರ್ಯ ಮೂಡಿಸುತ್ತದೆ.!

ನೀವು ಜಾಕ್‌ಪಾಟ್ ಗೆದ್ದಿರುವುದಾಗಿ , ಹಣ ಡಬಲ್ ನೀಡುವುದಾಗಿ ಹೇಳಿ ವಂಚಿಸುವುದು ಸಾಮಾನ್ಯವಾಗಿರುವ ನಡುವೆಯೇ, ಹೊಸ ವಿಧಾನದ ಮೂಲಕ ಮಹಿಳೆಯೊಬ್ಬರನ್ನು ವಂಚಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ ಘಟನೆ ಕುರಿತು ಸ್ಕೂಪ್‌ವೂಪ್ ವೆಬ್‌ಸೈಟ್ ವರದಿ ಒಂದು ವರದಿ ಮಾಡಿದೆ.

ಇಹಲೋಕ ತ್ಯಜಿಸಿದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ

ಇಹಲೋಕ ತ್ಯಜಿಸಿದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ

ಉಡುಪಿಯ ಅಷ್ಠಮಠಾಧೀಶರಲ್ಲೊಬ್ಬರಾದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು(55) ಇಂದು ಇಹಲೋಕ ತ್ಯಜಿಸಿದರು. ಬುಧವಾರ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು.ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶೀರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more