Short News

ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಏಪ್ರಿಲ್ 5ರ ಗಡುವು ನೀಡಿದ ಜಗನ್

ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಏಪ್ರಿಲ್ 5ರ ಗಡುವು ನೀಡಿದ ಜಗನ್

ಬಜೆಟ್ ನಲ್ಲಿ ಆಂಧ್ರ ಪ್ರದೇಶಕ್ಕೆ ನಡೆದಿದೆ ಎನ್ನಲಾದ ಅನ್ಯಾಯವನ್ನು ಪ್ರತಿಭಟಿಸಿ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತ ತಲುಪಿದೆ.ಏಪ್ರಿಲ್ 5ರ ಮೊದಲು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಲ್ಲಿ ವೈಎಸ್ಆರ್ ಕಾಂಗ್ರೆಸ್ ನ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಗುಡುಗಿದ್ದಾರೆ.ಆಂಧ್ರ ಪ್ರದೇಶವನ್ನು ಲೋಕಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ನ 9 ಜನ ಸಂಸದರು ಪ್ರತಿನಿಧಿಸುತ್ತಿದ್ದಾರೆ. "ನಮಗೆ ಏಪ್ರಿಲ್ 5ರ ಮೊದಲು ವಿಶೇಷ ಸ್ಥಾನಮಾನ ನೀಡದಿದ್ದಲ್ಲಿ, ಏಪ್ರಿಲ್ 6ರಂದು ನಮ್ಮ ಸಂಸದರು ರಾಜೀನಾಮೆ ನೀಡಲಿದ್ದಾರೆ," ಎಂದು ನೆಲ್ಲೋರ್ ನಲ್ಲಿ ಜಗನ್

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

  • ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.
  • ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.
  • ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..

ಜಗತ್ತಿನ ವಿವಿಧ ದೇಶದಲ್ಲಿ ಇರುವ ಕುತೂಹಲಕಾರಿ  ಸಂಗತಿಗಳು...

ಜಗತ್ತಿನ ವಿವಿಧ ದೇಶದಲ್ಲಿ ಇರುವ ಕುತೂಹಲಕಾರಿ ಸಂಗತಿಗಳು...

ಕ್ರೊಯಾಟಿಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೊರಕೆ ಹೊಡೆಯಬಾರದು. ಫ್ರಾನ್ಸ್ ನಲ್ಲಿ ಟ್ರೈನ್ ಫ್ಲಾಟ್ ಫಾರಂ ಮೇಲೆ ಮುತ್ತಿಡಬಾರದು. ಸ್ವಿಡ್ಜರ್ ಲ್ಯಾಂಡ್ ನಲ್ಲಿ ಭಾನುವಾರ ವ್ಯಾಕ್ಯೂಮ್ ನಲ್ಲಿ ಕ್ಲೀನ್ ಮಾಡುವಂತಿಲ್ಲ. ಆಸ್ಟ್ರೇಲಿಯಾದಲ್ಲಿ ಮದುವೆ ಇಲ್ಲವೇ ಅಂತ್ಯಕ್ರಿಯೆಗೆ ತೊಂದರೆ ಕೊಡುವಂತಿಲ್ಲ. ಗ್ರೀಸ್ ನ ಐತಿಹಾಸಿಕ ಸ್ಥಳಗಳಲ್ಲಿ ಹೈಹೀಲ್ಸ್ ಚಪ್ಪಲು ಧರಿಸುವುದು ನಿಷೇಧ. ಸಿಂಗಪೂರದಲ್ಲಿ ಚ್ಯೂಯಿಂಗಮ್ ಜಗಿಯುವಂತಿಲ್ಲ. ಮೆಕ್ಸಿಕೋದಲ್ಲಿ ಸೈಕಲ್ ಪೆಡಲ್ ಬಿಟ್ಟು ನಿಮ್ಮ ಪಾದಗಳು ಕೆಳಗಿಳಿಯುವಂತಿಲ್ಲ. ಟೊರೆಂಟೋದಲ್ಲಿ ನೀವು ಮರ ಹತ್ತುವಂತಿಲ್ಲ. ಸ್ಪೇನ್ ನಲ್ಲಿ ಚಪ್ಪಲಿ ಹಾಕಿ ಕಾರ್ ಡ್ರೈವ್ ಮಾಡುವಂತಿಲ್ಲ.
7 ತಿಂಗಳ ಗರ್ಭಿಣಿ 4 ವರ್ಷದ ಬಾಲಕನಿಗೆ ಬುದ್ಧಿ ಕಲಿಸಲು ಹೋಗಿ ಜೈಲು ಪಾಲಾದಳು!!

7 ತಿಂಗಳ ಗರ್ಭಿಣಿ 4 ವರ್ಷದ ಬಾಲಕನಿಗೆ ಬುದ್ಧಿ ಕಲಿಸಲು ಹೋಗಿ ಜೈಲು ಪಾಲಾದಳು!!

ಚೀನಾದ ರೆಸ್ಟೋರೆಂಟ್ ಒಂದರಲ್ಲಿ 4 ವರ್ಷದ ಬಾಲಕನಿಗೆ 7 ತಿಂಗಳ ಗರ್ಭಿಣಿ ಬುದ್ಧಿ ಕಲಿಸಲು ಕಾಲನ್ನು ಅಡ್ಡವಿಟ್ಟು ಆತನನ್ನು ಬೀಳಿಸಿದ್ದಾಳೆ. ಇದು ಸಿಸಿಟಿವಿ ಕ್ಯಾಮಾರಾದಲ್ಲಿ ದಾಖಲಾಗಿದ್ದು, ವಿಡಿಯೋ ನೋಡಿದ ಜನರು ಗರ್ಭಿಣಿಯನ್ನು ಟೀಕಿಸಿದ್ದಾರೆ. ರೆಸ್ಟೋರೆಂಟ್ ಒಳಗೆ ಓಡಿ ಬಂದ ಬಾಲಕ ರೆಸ್ಟೋರೆಂಟ್ ಬಾಗಿಲಿಗೆ ಹಾಕಿದ್ದ ಕರ್ಟನ್ ಅನ್ನು ತಳ್ಳಿದ್ದಾನೆ. ಇದರಿಂದ ಆಕೆ ವಿಚಲಿತಗೊಂಡಿದ್ದು, ಊಟ ಆಕೆಯ ಮೇಲೆ ಬಿದ್ದಿದೆ. ಇದರಿಂದ ಗರಂ ಆದ ಆಕೆ ಈ ಕೃತ್ಯ ನಡೆಸಿದ್ದಾಳೆ. ಬಾಲಕನಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು, ಘಟನೆ ನಂತರ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಪೊಲೀಸರು ಗರ್ಭಿಣಿಯನ್ನು 10ದಿನ ಬಂಧಿಸಿ ದಂಡ ವಿಧಿಸಿದ್ದಾರೆ.