Short News

ಬೈಕ್  ಮೇಲೆ  ಆಮದು ಸುಂಕ ಹೇರಿಕೆ, ಭಾರತದ ವಿರುದ್ಧ ಟ್ರಂಪ್ ಕಿಡಿ

ಬೈಕ್ ಮೇಲೆ ಆಮದು ಸುಂಕ ಹೇರಿಕೆ, ಭಾರತದ ವಿರುದ್ಧ ಟ್ರಂಪ್ ಕಿಡಿ

ಅಮೆರಿಕ ಮೂಲದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಭಾರತ ಹೇರಿರುವ ದುಬಾರಿ ಆಮದು ಸುಂಕಕ್ಕೆ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ಹೊರ ಹಾಕಿದ್ದಾರೆ. ಉಕ್ಕಿನ ಉದ್ಯಮದ ಸಮಸ್ಯೆಗಳ ಕುರಿತಂತೆ ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ನಡೆಸಿದ ಟ್ರಂಪ್ ಈ ವೇಳೆ ಬೈಕ್ ಮೇಲೆ ಆಮದು ಸುಂಕ ಏರಿಕೆ ಮಾಡಿರುವ ವಿವಿಧ ದೇಶಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಮೆರಿಕದಲ್ಲಿ ವಿದೇಶಿ ಬೈಕ್ ಗಳಿಗೆ ಶೂನ್ಯ ಆಮದು ಸುಂಕವಿದ್ದು, ಇದೇ ರೀತಿ ಬೇರೆ ದೇಶಗಳು ಅನುಸರಿಸಬೇಕು ವಿದೇಶಗಳಲ್ಲಿ ಮಾರಾಟವಾಗುವ ನಮ್ಮ ದೇಶದ ಬೈಕ್ ಗಳಿಗೆ ನಾವು ದುಬಾರಿ ಶುಲ್ಕವನ್ನು ತೆರುತ್ತಿದ್ದೇವೆ. ಈ ಪಟ್ಟಿಯಲ್ಲಿ ಭಾರತ ಕೂಡ ಸೇರಿರಬಹುದು ಎಂದರು.
ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಠೇವಣಿಗೆ ನೀಡಲಾಗುತ್ತಿದ್ದ ಶೇ 8.65ರಷ್ಟು ಬಡ್ಡಿದರವನ್ನು 2017-18 ಸಾಲಿನಂತೆ ಶೇ 8.55ಕ್ಕೆ ಇಳಿಕೆ ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಕೇಂದ್ರ ಟ್ರಸ್ಟಿಗಳು(CBT) ಬಡ್ಡಿದರ ಇಳಿಕೆ ಬಗ್ಗೆ ಬುಧವಾರ(ಫೆಬ್ರವರಿ 21) ನಿರ್ಣಯ ಕೈಗೊಂಡಿದ್ದಾರೆ ಎಂದು ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಕಟಿಸಿದೆ. ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.
ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ: ಸುಪ್ರೀಂ ಆದೇಶ

ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ: ಸುಪ್ರೀಂ ಆದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಪ್ರಧಾನಿ ಹುದ್ದೆಯಿಂದ ನವಾಜ್ ಷರೀಫ್ ಕೆಳಗಿಳಿಯಬೇಕು ಎಂಬ ಆದೇಶ ಹೊರಬಿದ್ದ 6 ತಿಂಗಳಲ್ಲೇ ನವಾಜ್ ಷರೀಫ್ ತಮ್ಮ ಪಕ್ಷದ ನೇತೃತ್ವವನ್ನೂ ವಹಿಸುವಂತಿಲ್ಲ ಎಂದು ಸುಪ್ರೀಂ ಆದೇಶಿಸಿದೆ. ಪ್ರಧಾನಿ ಹುದ್ದೆಯಿಂದ ಷರೀಪ್ ಕೆಳಗಿಳಿದ ತಕ್ಷಣ ಮುಸ್ಲಿಂ ಲೀಗ್-ನವಾಜ್ ಪಕ್ಷ ಷರೀಫ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯುವುದಕ್ಕೆ ಯಾವುದೇ ತೊಡಕಾಗದಂತೆ ಕಾನೂನು ಮಾರ್ಪಾಡು ಮಾಡಿತ್ತು.
ವಿದ್ವತ್ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ  ರಾಜ್ ಫ್ಯಾಮಿಲಿ

ವಿದ್ವತ್ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ ರಾಜ್ ಫ್ಯಾಮಿಲಿ

ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವಿದ್ವತ್ ಸಹಾಯಕ್ಕಾಗಿ ಡಾ ರಾಜ್ ಕುಮಾರ್ ಕುಟುಂಬಸ್ಥರು ಮುಂದಾಗಿದ್ದಾರೆ. ವಿದ್ವತ್ ಮೇಲೆ ಹಲ್ಲೆ ಆಗಿರುವುದನ್ನು ತಿಳಿದ ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ ಗುರು ರಾಜ್ ಕುಮಾರ್ ಮೇಲೆಯೂ ಹಲ್ಲೆ ಮಾಡಲು ಹಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಪ್ರಯತ್ನಿಸಿದ್ದರು.ಗುರು ರಾಜ್ ಕುಮಾರ್ ಅವರ ಸ್ನೇಹಿತ ವಿದ್ವತ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನಿನ ಮೂಲಕ ವಿದ್ವತ್ ಗೆ ನ್ಯಾಯ ಸಿಗಬೇಕೆಂದು ಹ್ಯಾಷ್ ಟ್ಯಾಗ್ ಹಾಕಿ 'ಜಸ್ಟಿಸ್ ಫಾರ್ ವಿದ್ವತ್' ಎಂದು ಗುರು ರಾಜ್ ಕುಮಾರ್ ಫೇಸ್ ಬುಕ್ ಅಭಿಯಾನ ಪ್ರಾರಂಭ ಮಾಡಿದ್ದಾರೆ.