Short News

ಕೃತಕ ಬುದ್ಧಿಮತ್ತೆಯಿಂದ ಮನುಕುಲದ ನಾಶ ಎಂದಿದ್ದ ಭೌತ ವಿಜ್ಞಾನದ ತಾರೆ ಸ್ಟೀಫನ್ ಹಾಕಿಂಗ್

ಕೃತಕ ಬುದ್ಧಿಮತ್ತೆಯಿಂದ ಮನುಕುಲದ ನಾಶ ಎಂದಿದ್ದ ಭೌತ ವಿಜ್ಞಾನದ ತಾರೆ ಸ್ಟೀಫನ್ ಹಾಕಿಂಗ್

ಇಂದು ನಿಧನರಾದ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ವಿಜ್ಞಾನದ ಉಜ್ವಲ ತಾರೆ ಎಂದೆನಿಸಿಕೊಂಡಿದ್ದರು. ಕೃತಕ ಬುದ್ಧಿಮತ್ತೆ ಬಗ್ಗೆ ಮಾತನಾಡಿದಾಗಲೆಲ್ಲಾ ಎಚ್ಚರಿಕೆ ನೀಡುತ್ತಿದ್ದ ಸ್ಟೀಫನ್ ಕೃತಕ ಬುದ್ಧಿಮತ್ತೆಯ ಪ್ರಾಬಲ್ಯ ಹೆಚ್ಚಿದಂತೆಲ್ಲಾ ಅದು ಮನುಕುಲಕ್ಕೆ ಮಾರಕ. ಮುಂದೊಂದು ದಿನ ಯಂತ್ರಗಳು ಮಾನವನಿಗಿಂತ ಹೆಚ್ಚು ಪ್ರಬಲವಾಗಿರಲಿವೆ. ಭೂಮಿ ಮಾನವನಿಗೆ ತುಂಬಾ ಚಿಕ್ಕದಾಗಿದ್ದು,ಜನಸಂಖ್ಯೆ ಏರಿದಂತೆ ಮನುಕುಲ ಸ್ವಯಂ ನಾಶವಾಗುತ್ತದೆ. ಕೃತಕ ಬುದ್ಧಿಮತ್ತೆ ಅತ್ಯಂತ ಅಪಾಯಕಾರಿ ಆವಿಷ್ಕಾರವಾಗಿರಲಿದೆ ಎಂದಿದ್ದರು.
ತೆರಿಗೆ ಕಟ್ಟದವರಿಗೆ  ಐಟಿ ಇಲಾಖೆ ಖಡಕ್ ವಾರ್ನಿಂಗ್ , ಮಾರ್ಚ್ ಕೊನೆ ದಿನ

ತೆರಿಗೆ ಕಟ್ಟದವರಿಗೆ ಐಟಿ ಇಲಾಖೆ ಖಡಕ್ ವಾರ್ನಿಂಗ್ , ಮಾರ್ಚ್ ಕೊನೆ ದಿನ

ಆದಾಯ ತೆರಿಗೆ ಪಾವತಿಸದೇ ಇರುವವರು ಇದೇ ತಿಂಗಳ 31ರ ಒಳಗಾಗಿ ಐಟಿ ಪಾವತಿಸುವಂತೆ ಆದಾಯತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಐಟಿ ಇಲಾಖೆಯ ಸರ್ವೆ ಪ್ರಕಾರ 571 ಮಂದಿ ಒಂದು ಕೋಟಿಗೂ ಅಧಿಕ ಮೌಲ್ಯದ ತೆರಿಗೆಯನ್ನು ಇಲ್ಲಿವರೆಗೂ ಕಟ್ಟಿಲ್ಲ. ಹೀಗಾಗಿ ಈ ತಿಂಗಳ 31 ರೊಳಗೆ ಕಟ್ಟದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯ ದಕ್ಷಿಣವಲಯ ಮುಖ್ಯಸ್ಥ ಅಶೋಕ್ ಕುಮಾರ್ ಸಿನ್ಹಾ ಹೇಳಿದ್ದಾರೆ. ಆದಾಯ ತೆರಿಗೆ ಸಂಗ್ರಹದಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದು, ದೆಹಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ-ಗೋವಾ ದೇಶದಲ್ಲೇ ಮೂರನೆ ಸ್ಥಾನದಲ್ಲಿದೆ.
ಜೆಡಿಎಸ್ ಅಮಾನತು ಶಾಸಕರು ಸೇಫ್ , ನಾಲೆ ಮತದಾನ ಮಾಡಲು ಅವಕಾಶ

ಜೆಡಿಎಸ್ ಅಮಾನತು ಶಾಸಕರು ಸೇಫ್ , ನಾಲೆ ಮತದಾನ ಮಾಡಲು ಅವಕಾಶ

ನಾಳೆ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಜೆಡಿಎಸ್ ಅಮಾನತು ಶಾಸಕರಿಗೆ ನಿರ್ಬಂಧ ವಿಧಿಸಲು ಹೈಕೋರ್ಟ್ ನಿರಾಕರಿಸಿದೆ. ಜೆಡಿಎಸ್ ಅಮಾನತು ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಶಾಸಕ ಬಿ.ಎಸ್. ಬಾಲಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ. ರಾಘವೇಂದ್ರ ಚೌಹಾಣ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್ ಅರ್ಜಿದಾರರ ಮನವಿಯನ್ನು ತಳ್ಳಿಹಾಕಿ, ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕಲ್ಪಿಸಿ ವಿಚಾರಣೆಯನ್ನು ಏಪ್ರಿಲ್ 2 ಕ್ಕೆ ಮುಂದೂಡಿತು.
ಈ ರಾಶಿಚಕ್ರದವರು ಅತ್ಯುತ್ತಮ ಪ್ರೇಮಿಯಾಗಿ ಇರುವರು

ಈ ರಾಶಿಚಕ್ರದವರು ಅತ್ಯುತ್ತಮ ಪ್ರೇಮಿಯಾಗಿ ಇರುವರು

ಒಂದು ಸಂಬಂಧದಲ್ಲಿ ಇರುವುದು ಎಂದರೆ ಅದು ಅಷ್ಟು ಸುಲಭದ ವಿಚಾರವಲ್ಲ. ಪ್ರತಿಯೊಂದು ಸಣ್ಣ ಪುಟ್ಟ ವಿಚಾರದಲ್ಲೂ ಹೊಂದಾಣಿಕೆಯಿರ ಬೇಕು. ಅನೇಕ ಬಾರಿ ತಮ್ಮ ಸಂಗಾತಿ ಅಥವಾ ಪ್ರೇಮಿಗಾಗಿ ತ್ಯಾಗ ಮಾಡಬೇಕಾಗುವುದು. ಅಂತಹ ತ್ಯಾಗದ ಮನೋಭಾವ ಇದ್ದಾಗ ಮಾತ್ರ ಸಂಬಂಧ ಶಾಶ್ವತವಾಗಿ ಉಳಿಯುತ್ತದೆ. ಇಂತಹ ತ್ಯಾಗದ ಗುಣ ಎಲ್ಲರಲ್ಲೂ ಇರುವುದಿಲ್ಲ. ಕೆಲವರು ಮಾತ್ರ ಅಂದರೆ ಯಾರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಬೇಕು ಅಥವಾ ಸಂಗಾತಿಯೊಂದಿಗೆ ಉತ್ತಮ ಜೀವನ ನಡೆಸಬೇಕು ಅಂದುಕೊಳ್ಳುತ್ತಾರೋ ಅಂತಹವರು ಮಾತ್ರ ಉತ್ತಮ ಪ್ರೇಮಿಯಾಗಿ ಉಳಿದುಕೊಳ್ಳುತ್ತಾರೆ.