Short News

ಭಾರತ ಚೀನಾ ಸಂಬಂಧ ಮತ್ತಷ್ಟು ಹದಗೆಡುತ್ತೆ ಎಂದ ಅಮೆರಿಕ ಗುಪ್ತಚರ ಸಂಸ್ಥೆ

ಭಾರತ ಚೀನಾ ಸಂಬಂಧ ಮತ್ತಷ್ಟು ಹದಗೆಡುತ್ತೆ ಎಂದ ಅಮೆರಿಕ ಗುಪ್ತಚರ ಸಂಸ್ಥೆ

ಅಮೆರಿಕ ಗುಪ್ತಚರ ಸಂಸ್ಥೆ ಮುಖ್ಯಸ್ಥರು ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಸಹ ಈಗಿರುವುದಕ್ಕಿಂತಲೂ ಹೆಚ್ಚು ಹದಗೆಡಲಿದೆ ತಿಳಿಸಿದೆ. ಭಾರತ ಮತ್ತು ಚೀನಾ ತಮ್ಮ ಡೊಕ್ಲಾಮ್ ವಿವಾದವನ್ನು ಬಗೆ ಹರಿಸಿಕೊಂಡಿದೆಯಾದರೂ, ಈಗಿರುವ ತಮ್ಮ ದ್ವಿಪಕ್ಷೀಯ ಸಂಬಂಧ ಮುಂದಿನ ದಿನಗಳಲ್ಲಿ ಹೆಚ್ಚು ಹದಗೆಡಲಿದೆ ಎಂದು ಹೇಳಿದೆ. ಭಾರತದ ವಿರುದ್ಧ ಚೀನಾ ಸರ್ಕಾರಿ ಸ್ವಾಮ್ಯದ ಮಾಧ್ಯಮ ಹಾಗೂ ವಿದೇಶಾಂಗ ಇಲಾಖೆ ಆಕ್ರಮಣಕಾರಿ ಭಾಷೆಯನ್ನು ಬಳಸುತ್ತಿರುವುದೇ ಇದಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.
ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಕಾಡಬಹುದಾದ ಕೆಲವೊಂದು ದೈಹಿಕ ಲಕ್ಷಣಗಳು

ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಕಾಡಬಹುದಾದ ಕೆಲವೊಂದು ದೈಹಿಕ ಲಕ್ಷಣಗಳು

ಒಂಭತ್ತು ತಿಂಗಳು ತನ್ನದೇ ಕುಡಿಯನ್ನು ತಮ್ಮ ಉದರದಲ್ಲಿ ಹೊತ್ತುಕೊಂಡು ಆ ಸಂದರ್ಭದಲ್ಲಿ ಅನುಭವಿಸಬೇಕಾದ ಮಾಸನಿಕ ಬೇಗುದಿಗಳನ್ನು ಸಹಿಸಿಕೊಂಡು ಒಂಭತ್ತನೆಯ ತಿಂಗಳಿಗೆ ಜೀವವನ್ನು ರೂಪಿಸುವ ಈ ಹಂತವನ್ನು ಹೆಣ್ಣಿನ ಮರುಜನ್ಮ ಎಂದು ಕರೆಯಲಾಗುತ್ತದೆ. ನೀವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಬದಲಾವಣೆ ಹಾಗೂ ಮಾರ್ಪಾಡುಗಳನ್ನು ನಿಮ್ಮ ದೇಹ ಒಳಗೊಳ್ಳುತ್ತದೆ. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂತಹ ಬದಲಾವಣೆಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಕಾಗುತ್ತದೆ.ನಿಸರ್ಗದ ಕೊಡುಗೆಯೆನಿಸಿದ ತಾಯಿಯಾಗುವ ಅತ್ಯಂತ ಅಮೂಲ್ಯವಾದ ಕ್ಷಣ

ಪ್ರತಿನಿತ್ಯ ಓಟ್ಸ್ ಸೇವಿಸಿ, ಆರೋಗ್ಯಕ್ಕೆ ಬಹಳ ಒಳ್ಳೆಯದು

ಪ್ರತಿನಿತ್ಯ ಓಟ್ಸ್ ಸೇವಿಸಿ, ಆರೋಗ್ಯಕ್ಕೆ ಬಹಳ ಒಳ್ಳೆಯದು

ದೇಹಕ್ಕೆ ನಿತ್ಯಕ್ಕೆ ಬೇಕಾಗುವ ಶೇ. ನೂರರಷ್ಟು ಮ್ಯಾಂಗನೀಸ್ ಓಟ್ ಮೀಲ್ ನಲ್ಲಿದೆ. ಓಟ್ ಮೀಲ್ ನಲ್ಲಿ ಕೆಲವೊಂದು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು, ವಿಟಮಿನ್ ಇ, ಸೆಲೆನಿಯಂ, ಫೆನೊಲಿಕ್ ಆಮ್ಲ ಮತ್ತು ಪೈಟಿಕ್ ಆಮ್ಲವಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿಟಮಿನ್ ಬಿ1, ಬಯೋಟಿನ್, ಮೆಗ್ನಿಶಿಯಂ, ತಾಮ್ರ, ಮೊಲಿಬ್ಡಿನಮ್, ಪೋಸ್ಪರಸ್ ಇತ್ಯಾದಿ ಅಂಶಗಳು ಇವೆ. ಎಂಟು ಚಮಚದಷ್ಟು ಓಟ್ಸ್ ಸೇವನೆ ಮಾಡಿದರೆ ಅದರಿಂದ ದಿನದ ಅಗತ್ಯಕ್ಕೆ ಬೇಕಾಗುವ ಶೇ. 15ರಷ್ಟು ಪ್ರೋಟೀನ್ ಸಿಗುವುದು. ಓಟ್ಸ್ ಲ್ಲಿ ವಿಟಮಿನ್ ಇ, ಆ್ಯಂಟಿಆಕ್ಸಿಡೆಂಟ್, ಗ್ಲುಟಮಿನ್ ಇದ್ದು, ಸ್ನಾಯುಗಳು ಬೇಗನೆ ಪುನರುಜ್ಜೀವನಗೊಳಿಸುವುದು.
ಕೊಪ್ಪಳ ಕ್ಷೇತ್ರ ಪರಿಚಯ: ಭತ್ತದ ಕಣಜದಲ್ಲಿ ಗೆಲುವು ಯಾರಿಗೆ

ಕೊಪ್ಪಳ ಕ್ಷೇತ್ರ ಪರಿಚಯ: ಭತ್ತದ ಕಣಜದಲ್ಲಿ ಗೆಲುವು ಯಾರಿಗೆ

ಕೊಪ್ಪಳದಲ್ಲಿ ಕಾಂಗ್ರೆಸ್ ಪಕ್ಷದ ಕೆ. ರಾಘವೇಂದ್ರ ಬಸವರಾಜ್ ಹಿಟ್ನಾಳ್ ಇಲ್ಲಿನ ಹಾಲಿ ಶಾಸಕರು. 2013ರ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ್ 81,062 ಮತಗಳನ್ನು ಪಡೆದು ನಾಲ್ಕು ಬಾರಿಯ ಶಾಸಕ ಬಿಜೆಪಿಯ ಕರಡಿ ಸಂಗಣ್ಣರನ್ನು ಬರೋಬ್ಬರಿ 27 ಸಾವಿರ ಮತಗಳಿಂದ ಸೋಲಿಸಿದ್ದರು. ಈ ಬಾರಿಯೂ ಇಲ್ಲಿ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ಸಿವಿ ಚಂದ್ರಶೇಖರ್ ಕಣಕ್ಕಿಳಿದಿದ್ದಾರೆ. ಕೊಪ್ಪಳದ ವಿಚಾರಕ್ಕೆ ಬಂದಾಗ ಇಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಹಾಗಾಗಿ ಕೈ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಈ ಬಾರಿಯೂ ಗೆದ್ದರೆ ಅಚ್ಚರಿಯೇನಿಲ್ಲ.