Short News

ತಂದೆಯ ಆಸೆಯಂತೆ ಬಿಎಂಡಬ್ಲ್ಯು ಕಾರ್ ಜತೆ ಶವಸಂಸ್ಕಾರ ಮಾಡಿದ ಮಗ

ತಂದೆಯ ಆಸೆಯಂತೆ ಬಿಎಂಡಬ್ಲ್ಯು ಕಾರ್ ಜತೆ ಶವಸಂಸ್ಕಾರ ಮಾಡಿದ ಮಗ

ತಂದೆಯ ಕೊನೆಯ ಆಸೆಯೆಂತೆ ಅವರ ಮೃತದೇಹವನ್ನು ಹೊಸ ಬಿಎಂಡಬ್ಲ್ಯು ಕಾರಿನೊಳಗಿಟ್ಟು ಶವಸಂಸ್ಕಾರ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇವನು ಮಾಡಿರುವ ಕೆಲಸಕ್ಕೆ ಫೇಸ್‌ಬುಕ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿರುವುದಲ್ಲದೇ ಅವನ ಕಾರ್ಯಕ್ಕೆ ಹಲವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಇದೆಲ್ಲಾ ನಡೆದಿರುವುದು ನೈಜೆರಿಯಾದಲ್ಲಿ. ಅಜುಬುಕ್ ಎನ್ನುವ ವ್ಯಕ್ತಿಯೇ ತನ್ನ ತಂದೆಯ ಕೊನೆಯ ಆಸೆಯೆಂತೆ ಬಿಎಂಡಬ್ಲ್ಯು ಕಾರಿನ ಜೊತೆ ಸಮಾಧಿ ಮಾಡಿದ್ದು, ಸಮಾಧಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.
262 ಅಂಕ ನಷ್ಟದೊಂದಿಗೆ ಕೊನೆಗೊಂಡ ಮುಂಬೈ ಸೆನ್ಸೆಕ್ಸ್

262 ಅಂಕ ನಷ್ಟದೊಂದಿಗೆ ಕೊನೆಗೊಂಡ ಮುಂಬೈ ಸೆನ್ಸೆಕ್ಸ್

ಇಂದಿನ ಮುಂಬೈ ಸೆನ್ಸೆಕ್ಸ್ ವಹಿವಾಟಿನಲ್ಲಿ 262 ಅಂಕ ನಷ್ಟದೊಂದಿಗೆ ಎರಡು ವಾರಗಳ ಕನಿಷ್ಠವಾಗಿ 35,286.74 ಅಂಕ ಮಟ್ಟದಲ್ಲಿ ಕೊನೆಗೊಳಿಸಿತು. ಹಾಗೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 89.40 ಅಂಕ ನಷ್ಟದೊಂದಿಗೆ ದಿನದ ವಹಿವಾಟನ್ನು 10,710.45 ಅಂಕ ಮಟ್ಟದಲ್ಲಿ ಕೊನೆಗೊಳಿಸಿತು. ಒಟ್ಟು 2,776 ಕಂಪೆನಿಗಳ ಶೇರುಗಳಲ್ಲಿ 703 ಶೇರುಗಳು ಮಾತ್ರ ಮುನ್ನಡೆ ಸಾಧಿಸಿದ್ದು, 1,923 ಶೇರುಗಳಿಗೆ ಹಿನ್ನಡೆಯಾಯಿತು. 150 ಶೇರುಗಳು ತಟಸ್ಥವಾಗಿದ್ದವು.
ಅಮೆರಿಕ ವಿಜ್ಞಾನಿಗಳಿಂದ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್ ಆವಿಷ್ಕಾರ

ಅಮೆರಿಕ ವಿಜ್ಞಾನಿಗಳಿಂದ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್ ಆವಿಷ್ಕಾರ

ಅಮೆರಿಕ ವಿಜ್ಞಾನಿಗಳು ವಿಶ್ವದ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್‌ನ್ನು ಆವಿಷ್ಕರಿಸಿದ್ದಾರೆ. ಈ ಸೂಪರ್ ಕಂಪ್ಯೂಟರ್ 2 ಲಕ್ಷ ಟ್ರಿಲಿಯನ್‌ ಕ್ಯಾಲ್‌ಕ್ಯುಲೇಷನ್‌ ಗಳನ್ನು ಒಂದು ಸೆಕೆಂಡ್‌ನಲ್ಲಿ ಪೂರ್ಣಗೊಳಿಸಲು ಶಕ್ತವಾಗಿದೆ. ಓಕ್‌ ರಿಡ್ಜ್‌ ನ್ಯಾಷನಲ್‌ ಲ್ಯಾಬೋರೇಟರಿ (ಒಆರ್‌ಎನ್‌ಎಲ್‌) ಸೂಪರ್‌ ಕಂಪ್ಯೂಟರ್‌ ತಯಾರಿಸಿದ್ದು, ಸಮ್ಮಿಟ್‌ ಎಂದು ಹೆಸರಿಸಿದೆ. ತನ್ನ ಈ ಹಿಂದಿನ ಆವಿಷ್ಕಾರಗಳಿಂದ 8 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ತಿಳಿಸಿದೆ. ಐಬಿಎಂ ಎಸಿ922 ಸಿಸ್ಟಮ್‌ನ 4,608 ಕಂಪ್ಯೂಟ್‌ ಸರ್ವರ್‌ಗಳಿದ್ದು, ಪ್ರತಿ ಸರ್ವರ್‌ 22 ಕೋಟಿ ಐಬಿಎಂ ಪವರ್‌9 ಪ್ರೊಸೆಸರ್‌ ಹೊಂದಿದೆ.
ಒತ್ತಡ ತಾಳಲಾರದೆ ಐಟಿ ಉದ್ಯೋಗಿ ಆತ್ಮಹತ್ಯೆ: ಸೂಕ್ತ ತನಿಖೆಗೆ ಮನವಿ

ಒತ್ತಡ ತಾಳಲಾರದೆ ಐಟಿ ಉದ್ಯೋಗಿ ಆತ್ಮಹತ್ಯೆ: ಸೂಕ್ತ ತನಿಖೆಗೆ ಮನವಿ

ಕಚೇರಿ ಕಟ್ಟಡದಿಂದ ಹೊರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಐಟಿ ಉದ್ಯೋಗಿ ಭವೇಶ್ ಜೈಸ್ವಾಲ್ ಅವರ ಸಾವಿನ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ಐಟಿ ಉದ್ಯೋಗಿಗಳ ಒಕ್ಕೂಟ (ಎಫ್‌ಐಟಿಇ) ಮನವಿ ಮಾಡಿದೆ. ಎಫ್‌ಐಟಿಇ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ದೀಪಕ್ ನೇತೃತ್ವದಲ್ಲಿ ಸದಸ್ಯರ ತಂಡವೊಂದು ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಬಳಿಕ ಒಕ್ಕೂಟದ ಸದಸ್ಯರು ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹಾದ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಈ ಪ್ರಕರಣದ ವಿಚಾರದಲ್ಲಿನ ಕಟ್ಟುನಿಟ್ಟಾದ ತನಿಖೆಗಾಗಿ ಕೋರಿದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more