Short News

68 ಸೆಕೆಂಡ್ ನಲ್ಲಿ 50 ಮೆಣಸಿನಕಾಯಿ ತಿಂದು ಖಾರದ ವ್ಯಕ್ತಿ ಅಂತ ಪ್ರಖ್ಯಾತನಾದ!!

68 ಸೆಕೆಂಡ್ ನಲ್ಲಿ 50 ಮೆಣಸಿನಕಾಯಿ ತಿಂದು ಖಾರದ ವ್ಯಕ್ತಿ ಅಂತ ಪ್ರಖ್ಯಾತನಾದ!!

ಚೀನಾದಲ್ಲಿ ಪ್ರತಿ ವರ್ಷ ಮೆಣಸಿನಕಾಯಿ ತಿನ್ನುವ ಸ್ಪರ್ಧೆ ನಡೆಯುತ್ತದೆ. ಈ ಬಾರಿ ಈ ಸ್ಪರ್ಧೆಯಲ್ಲಿ ಲೋಕಲ್ ಯುವಕನೊಬ್ಬ ದಾಖಲೆ ಬರೆದಿದ್ದಾನೆ. 68 ಸೆಕೆಂಡ್ ಅಂದ್ರೆ ಒಂದು ನಿಮಿಷ ಎಂಟು ಸೆಕೆಂಡ್ ನಲ್ಲಿ 50 ಮೆಣಸಿನಕಾಯಿಗಳನ್ನ ತಿಂದು ಚಿನ್ನದ ನಾಣ್ಯವನ್ನು ಜೇಬಿಗಿಳಿಸಿಕೊಂಡಿದ್ದಾನೆ. ತಾಂಗ್ ಶುಯೈಹೈ ಎಂಬ ಯುವಕನೇ ಈಗ ಚೀನಾದ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯಲ್ಲಿ ಖಾರದ ವ್ಯಕ್ತಿ ಅಂತ ಪ್ರಖ್ಯಾತನಾಗಿದ್ದಾನೆ. ಈ ಮೆಣಸಿನ ಕಾಯಿ ತಿನ್ನುವ ಸ್ಪರ್ಧೆಯಲ್ಲಿ ಹತ್ತು ಮಂದಿ ಸ್ಪರ್ಧಾಳುಗಳಿದ್ದರು.
ಸದ್ಗುರು ಜಗ್ಗಿ ವಾಸುದೇವ್‌ಗೆ ನರ್ತಿಸಲು ಬರುತ್ತದೆಯೇ?

ಸದ್ಗುರು ಜಗ್ಗಿ ವಾಸುದೇವ್‌ಗೆ ನರ್ತಿಸಲು ಬರುತ್ತದೆಯೇ?

ಐಐಎಂನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿರುವ ಐಐಎಂಬ್ಯು 2018 ನಾಯಕತ್ವ ಸಮ್ಮೇಳನದಲ್ಲಿ ಶನಿವಾರ ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ನಡುವಣ ಸಂವಾದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಯಾವುದೇ ನಿರ್ದಿಷ್ಟ ರೀತಿ ರಿವಾಜಿನಲ್ಲಿ ಸಿಲುಕದೆ ಚರ್ಚೆ ನಡೆದಿದ್ದು ಇಬ್ಬರೂ ತಂತ್ರಜ್ಞಾನದಿಂದ ಹಿಡಿದು ಜೀವನದ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳ ಕುರಿತು ಪ್ರಸ್ತಾಪಿಸಿದ್ದು ಆಸಕ್ತಿ ಹೆಚ್ಚಿಸಿತು. ಲವಲವಿಕೆ, ದುಡುಕುತನ, ಉತ್ಸಾಹದ ಯುವಕನಾಗಿ ರಣವೀರ್ ಭಾಗವಹಿಸಿದರೆ, ಸದ್ಗುರು ಶಾಂತ, ಸಾವಧಾನದಿಂದ ಪ್ರತಿ ಮಾತುಗಳನ್ನೂ ಅಳೆದು ತೂಗಿ ಆಡುತ್ತಿದ್ದರು.
ಚಿಲ್ಲಂ' ಚಿತ್ರಕ್ಕಾಗಿ ರಾಘಣ್ಣ ಬದಲಿಗೆ ಬಂದ ಮತ್ತೊಬ್ಬ 'ಸ್ಟಾರ್' ನಟ.!

ಚಿಲ್ಲಂ' ಚಿತ್ರಕ್ಕಾಗಿ ರಾಘಣ್ಣ ಬದಲಿಗೆ ಬಂದ ಮತ್ತೊಬ್ಬ 'ಸ್ಟಾರ್' ನಟ.!

ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಬೇಕಿತ್ತು. ಆರಂಭದಲ್ಲಿ ಸಿನಿಮಾದಲ್ಲಿ ನಟಿಸುವ ಒಲವು ಹೊಂದಿದ್ದ ರಾಘಣ್ಣ ಈಗ 'ಚಿಲ್ಲಂ' ಚಿತ್ರಕ್ಕೆ ನೋ ಎಂದಿದ್ದಾರೆ. ಇದೀಗ, ಚಿಲ್ಲಂ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಿಟ್ಟ ಪಾತ್ರವನ್ನ ನಿಭಾಯಿಸಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಸ್ಟಾರ್ ನಟ ಜಗಪತಿ ಬಾಬು ಅವರನ್ನು ಕರೆತರಲು ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ವಿಲನ್ ಪಾತ್ರವನ್ನ ಮಾಡದಂತೆ ಅಭಿಮಾನಿಗಳು ಒತ್ತಾಯಿಸಿದ ಕಾರಣ ಈ ಪ್ರಾಜೆಕ್ಟ್ ನಿಂದ ದೂರು ಉಳಿದಿರುವುದಾಗಿ ರಾಘಣ್ಣ ತಿಳಿಸಿದ್ದಾರೆ.
ಸ್ಯಾನಿಟರಿ ನ್ಯಾಪ್‌ಕಿನ್ ತೆರಿಗೆಮುಕ್ತ

ಸ್ಯಾನಿಟರಿ ನ್ಯಾಪ್‌ಕಿನ್ ತೆರಿಗೆಮುಕ್ತ

ದೇಶದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಸ್ಯಾನಿಟರಿ ನ್ಯಾಪ್‌ಕಿನ್ ಮೇಲಿನ ತೆರಿಗೆಯನ್ನು ಕೈಬಿಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಸಮಿತಿಯ 28ನೇ ಸಭೆಯಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಇದಕ್ಕೂ ಮೊದಲು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ 12ರ ತೆರಿಗೆ ವಿಧಿಸಲಾಗುತ್ತಿತ್ತು. ಮಹಿಳೆಯರಿಗೆ ಅತಿ ಅಗತ್ಯವಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more