Short News

ಹೊಸ ಮಾದರಿಯ ಪರಮಾಣು ಅಸ್ತ್ರ ಅಭಿವೃದ್ಧಿ ಮಾಡಿದೆ ಪಾಕ್: ಅಮೆರಿಕ ಗುಪ್ತಚರ ಇಲಾಖೆ

ಹೊಸ ಮಾದರಿಯ ಪರಮಾಣು ಅಸ್ತ್ರ ಅಭಿವೃದ್ಧಿ ಮಾಡಿದೆ ಪಾಕ್: ಅಮೆರಿಕ ಗುಪ್ತಚರ ಇಲಾಖೆ

ವಾಷಿಂಗ್ಟನ್ ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅಮೆರಿಕದ ಗುಪ್ತಚರ ಇಲಾಖೆ ನಿರ್ದೇಶಕ ಡ್ಯಾನ್ ಕೋಟ್ಸ್ ಈ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದು, ಅಮೆರಿಕದ ಆರ್ಥಿಕ ನೆರವಿನ ಸ್ಥಗಿತದ ಹೊರತಾಗಿಯೂ ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ನೆರವು ಅಬಾಧಿತವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ತನ್ನ ನೆಲದಲ್ಲಿ ಹೊಸ ಮಾದರಿಯ ಪರಮಾಣು ಅಸ್ತ್ರವನ್ನು ರಹಸ್ಯವಾಗಿ ಅಭಿವೃದ್ಧಿ ಪಡಿಸಿದೆ ಎಂದಿದ್ದಾರೆ. ಇದರಿಂದಾಗಿ ಭಾರತ, ಆಫ್ಘಾನಿಸ್ತಾನದಂತಹ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಪುರುಷರ ಗರ್ಭನಿರೋಧಕ ಮಾತ್ರೆ

ಪುರುಷರ ಗರ್ಭನಿರೋಧಕ ಮಾತ್ರೆ

ಪುರುಷರ ಗರ್ಭನಿರೋಧಕ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ. ಯಾವುದೇ ಅಡ್ದಪರಿಣಾಮಗಳಿಲ್ಲದೇ ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ. ಎಪೊಸ್ಸ್ ಎನ್ನುವ ಸಂಯುಕ್ತವು ವೀರ್ಯದ ಪ್ರೋಟೀನ್ ನ್ನು ಕಟ್ಟಿಹಾಕಿ, ಹಾರ್ಮೋನ್ ಗೆ ಯಾವುದೇ ತೊಂದರೆಯಾಗದಂತೆ ತೀವ್ರತೆ ಕಡಿಮೆ ಮಾಡುವುದು. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಎಪೊಸ್ಸ್ ನ್ನು ಪುರುಷರ ಗರ್ಭನಿರೋಧಕವಾಗಿ ಮಾಡಲಾಗುತ್ತಿದೆ. ಯೂನಿವರ್ಸಿಟಿ ಆಫ್ ನಾರ್ತ್ ಕರೊಲಿನಾ ಪ್ರಕಟಿಸಿರುವಂತಹ ಸಂಶೋಧನಾ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಹೇಗೆ?

ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಹೇಗೆ?

ಪ್ರತಿನಿತ್ಯ ನಾವು ಸವೆಸುವ ಅತ್ಯಂತ ಒತ್ತಡದ ಜೀವನಕ್ಕೆ ಪ್ರತಿಯಾಗಿ ನಮ್ಮ ದೇಹವು ಕಟ್ಟುತ್ತಿರುವ ಸುಂಕವೆಂದರೆ ಅದು ಕೆಟ್ಟ ಆರೋಗ್ಯ. ಇಂದಿನ ವ್ಯಸ್ತ ಹಾಗೂ ಒತ್ತಡದಲ್ಲಿ ಪ್ರತಿಯೊಬ್ಬರು ಯಾವುದಾದರೂ ಒಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಡಯಾಬಿಟಿಸ್, ಬೊಜ್ಜು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ತುಂಬಾ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಕಚೇರಿಯಲ್ಲಿ ಕೇವಲ ಕುರ್ಚಿ ಬಿಸಿಮಾಡುವುದನ್ನು ಬಿಟ್ಟರೆ ಬೇರೇನೂ ಮಾಡದಂತಹ ಜಡಜೀವನವು ಇದಕ್ಕೆ ಕಾರಣವಾಗಿದೆ. ಮಕ್ಕಳು ಮತ್ತು ವಯಸ್ಕರು ಸ್ವಲ್ಪ ಸಮಯ ತೆಗೆದುಕೊಂಡು ಹೊರಗಡೆ ಆಟವಾಡಬೇಕು ಅಥವಾ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.

ಬೇಸಿಗೆಯಲ್ಲಿ ಸೂಪ್ ಕುಡಿದು ತೂಕ ಇಳಿಸಿಕೊಳ್ಳಿ..!

ಬೇಸಿಗೆಯಲ್ಲಿ ಸೂಪ್ ಕುಡಿದು ತೂಕ ಇಳಿಸಿಕೊಳ್ಳಿ..!

ಬಿರು ಬೇಸಿಗೆಯಲ್ಲಿ ಸೂಪ್ ಕುಡಿಯೋದಾ.,. ಅಬ್ಬಬ್ಬಾ ಅದ್ಹೇಗೆ ಸಾದ್ಯ.. ಮೊದಲೇ ಉರಿಯುತ್ತಿರುವ ವಾತಾವರಣ. ಅದರ ಜೊತೆಗೆ ಬಿಸಿಬಿಸಿ ಅಡುಗೆ ಸೇವಿಸೋದಾದ್ರೂ ಹೇಗೆ ಅನ್ನೋದು ನಿಮ್ಮ ಪ್ರಶ್ನೆ ಆಗಿರಬಹುದು. ಆದರೆ ನೆನಪಿಡಿ. ಬೇಸಿಗೆಯಲ್ಲಿ ಸೂಪ್ ಕುಡಿಯುವುದರಿಂದಾಗಿ ನೀವು ಆರೋಗ್ಯ ವಾಗಿರಲು ಸಾಧ್ಯವಿದೆ. ಮತ್ತು ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಿದೆ. ತರಕಾರಿಗಳಿಂದ ತಯಾರಿಸಿರುವ ಮತ್ತು ನಾನ್ ವೆಜ್ ಸೂಪ್ ಗಳು ಬಹಳ ಪರಿಣಾಮಕಾರಿ. ಟ್ರೈ ಮಾಡಿ ನೋಡಿ. ತೀರಾ ಬಿಸಿ ಅಲ್ಲದೇ ಇದ್ದರೂ ಹದ ಬೆಚ್ಚಗಿರುವ ಸೂಪ್ ಸೇವನೆ ಟ್ರೈ ಮಾಡಿ ನೋಡಿ.