Short News

ಭಾರತ - ಪಾಕ್ ವಿವಾದಕ್ಕೆ ಮಾತುಕತೆಯೊಂದೇ ಪರಿಹಾರ: ಪಾಕ್ ಸೇನಾ ಮುಖ್ಯಸ್ಥ

ಭಾರತ - ಪಾಕ್ ವಿವಾದಕ್ಕೆ ಮಾತುಕತೆಯೊಂದೇ ಪರಿಹಾರ: ಪಾಕ್ ಸೇನಾ ಮುಖ್ಯಸ್ಥ

ಭಾನುವಾರ ಕಾಕುಲ್ ನಲ್ಲಿ ನಡೆದ ಪಾಕಿಸ್ತಾನ ಸೇನಾ ಅಕಾಡೆಮಿಯ ತೇರ್ಗಡೆ ಪರೇಡ್ ನಲ್ಲಿ ಮಾತನಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರು ಕಾಶ್ಮೀರ ವಿಚಾರ ಸೇರಿದಂತೆ ಭಾರತ-ಪಾಕಿಸ್ತಾನ ವಿವಾದವನ್ನು ಮಾತುಕತೆ ಮೂಲಕವೇ ಇತ್ಯರ್ಥ ಪಡಿಸಬಹುದು ಎಂದಿದ್ದಾರೆ. ಮಾತುಕತೆಯಿಂದ ಎರಡೂ ದೇಶದಲ್ಲೂ ಶಾಂತಿಯುತ ವಾತಾವರಣ ನಿರ್ಮಾಣಗೊಳ್ಳಲಿದೆ. ಸಾರ್ವಭೌಮ, ಸಮಾನತೆ, ಘನತೆ ಹಾಗೂ ಗೌರವದ ಆಧಾರದ ಮೇಲೆ ಇಂತಹ ಮಾತುಕತೆಗೆ ಪಾಕಿಸ್ತಾನ ಸಿದ್ಧ. ಪಾಕಿಸ್ತಾನ ಶಾಂತಿ ಪ್ರೀತಿಸುವ ದೇಶ ಎಂದಿದ್ದಾರೆ.
ದೇಶದಲ್ಲೇ ಇದೇ ಮೊದಲಿಗೆ ವಿಮಾನ ರನ್ ವೇ ಮೇಲೆ ಮ್ಯಾರಥಾನ್: ಬೆಂಗಳೂರಿನಲ್ಲಿ ಆಯೋಜನೆ

ದೇಶದಲ್ಲೇ ಇದೇ ಮೊದಲಿಗೆ ವಿಮಾನ ರನ್ ವೇ ಮೇಲೆ ಮ್ಯಾರಥಾನ್: ಬೆಂಗಳೂರಿನಲ್ಲಿ ಆಯೋಜನೆ

ದೇಶದಲ್ಲೇ ಇದೇ ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿರುವ ವಿಮಾನಗಳ ರನ್ ವೇ ಮೇಲೆ ಮ್ಯಾರಥಾನ್ ಆಯೋಜಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭವಾದ 10ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರನ್ ವೇ ಮೇಲೆ 10kಓಟವನ್ನು ವಿಮಾನ ನಿಲ್ದಾಣ ಆಡಳಿತ ಮಂಡಳಿ ಆಯೋಜಿಸಿದೆ. ಮೇ.8ರಂದು ಮಧ್ಯಾಹ್ನ 12.45ರಿಂದ ಮಧ್ಯಾಹ್ನ 2.15ರವರೆಗೆ ರನ್ ವೇ ಮೇಲೆ ಫನ್ ರನ್ ಆಯೋಜನೆ ಮಾಡಲಾಗಿದ್ದು,ಈ ಅವಧಿಯಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗುತ್ತದೆ. ಕೇವಲ 100ಮಂದಿಗೆ ಮಾತ್ರ ಅವಕಾಶವಿದ್ದು, ಏ.30ರೊಳಗಾಗಿ 18ವರ್ಷ ಮೇಲ್ಪಟ್ಟವರು http://www.unitedin10.com/contests/runway ಮೂಲಕ ನೋಂದಾಯಿಸಿಕೊಳ್ಳಿ.
100 ಮುಗ್ಗರಿಸಿದ ಮುಂಬಯಿ ಶೇರು ಪೇಟೆ

100 ಮುಗ್ಗರಿಸಿದ ಮುಂಬಯಿ ಶೇರು ಪೇಟೆ

ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 100 ಅಂಕ ಮುಗ್ಗರಿಸಿದೆ. ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 74.78 ಅಂಕ ನಷ್ಟದೊಂದಿಗೆ 34,541.86 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.20 ಅಂಕ ನಷ್ಟದೊಂದಿಗೆ10,586.20 ಅಂಕ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಬೆಳಗ್ಗಿನ ವಹಿವಾಟಿನಲ್ಲಿ ಟಿಸಿಎಸ್‌, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌, ಇನ್‌ಫೋಸಿಸ್‌, ಎಸ್‌ ಬ್ಯಾಂಕ್‌ ಶೇರುಗಳು ಹೆಚ್ಚು ವಹಿವಾಟಿಗೊಳಪಟ್ಟಿವೆ.
ತಿಂಡಿ ಕದ್ದಿದ್ದಕ್ಕೆ 50 ವರ್ಷ ಜೈಲು !

ತಿಂಡಿ ಕದ್ದಿದ್ದಕ್ಕೆ 50 ವರ್ಷ ಜೈಲು !

ಅಮೆರಿಕದ ಟೆಕ್ಸಾಸ್ ನಲ್ಲಿ 53 ವರ್ಷದ ಗಿಲ್ಬರ್ಟೋ ಎಸ್ಕಾಮಿಲ್ಲಾ ಎಂಬಾತ 1.2(8 ಕೋಟಿ ಮೌಲ್ಯ) ಮಿಲಿಯನ್ ಡಾಲರ್ ಮೌಲ್ಯದ ಪಜಿತಾಸ್ ಎಂಬ ತಿಂಡಿಯನ್ನು ಕಳವು ಮಾಡಿದ್ದು, ಅವನಿಗೆ ಕೋರ್ಟ್ 50 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೆಮರೊನ್ ಕೌಂಟಿ ಬಾಲಾಪರಾಧಿಗಳ ಕೇಂದ್ರದಿಂದ ಫಜೀತಾ ಎಂಬ ತಿನಿಸುಗಳನ್ನು ತರಿಸಿಕೊಂಡು ಅದನ್ನು ತನ್ನ ಗ್ರಾಹಕರಿಗೆ ಗಿಲ್ಬರ್ಟೋ ಮಾರಾಟ ಮಾಡುತ್ತಿದ್ದ. ಈ ರೀತಿ ದೊಡ್ಡ ಹಗರಣವನ್ನೇ ಮಾಡಿದ್ದಾನೆ. ಒಮ್ಮೆ ಆತ ಮೆಡಿಕಲ್ ಚೆಕಪ್ ಗಾಗಿ ಹೋಗಿದ್ದಾಗ ಕಳವು ಮಾಡಿದ್ದ ರಾಶಿಗಟ್ಟಲೆ ಫಜೀತಾಸ್ ಬಂದಿತ್ತು. ಅದರ ಮೂಲ ಕೆದಕಿದಾಗ ಹಗರಣ ಬೆಳಕಿಗೆ ಬಂತು. ಬಳಿಕ ಗಿಲ್ಬರ್ಟೋ ನನ್ನು ಬಂಧಿಸಲಾಗಿತ್ತು.