Short News

ಉಗ್ರ ವಿರೋಧಿ ತಿದ್ದುಪಡಿ ಕಾನೂನಿಗೆ ಅನುಮೋದನೆ  ನೀಡಿದ ಪಾಕಿಸ್ತಾನ!

ಉಗ್ರ ವಿರೋಧಿ ತಿದ್ದುಪಡಿ ಕಾನೂನಿಗೆ ಅನುಮೋದನೆ ನೀಡಿದ ಪಾಕಿಸ್ತಾನ!

ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯ್ಯೀದ್, ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ರಂತಹ ಕುಖ್ಯಾತ ಉಗ್ರಗಾಮಿಗಳ ಕೃತ್ಯಕ್ಕೆ ಕಡಿವಾಣ ಹಾಕಬಲ್ಲ ಭಯೋತ್ಪಾದನಾ ವಿರೋಧಿ ತಿದ್ದುಪಡಿ ಕಾನೂನಿಗೆ ಪಾಕಿಸ್ತಾನ ಸರ್ಕಾರ ಕೊನೆಗೂ ಅನುಮೋದನೆ ನೀಡಿದೆ. ಭಾರತ, ಅಮೆರಿಕ ಸೇರಿ ಹಲವು ಒತ್ತಡ ಮತ್ತು ವಿಶ್ಪಸಂಸ್ಥೆಗೆ ಮಣಿದಿರುವ ಪಾಕಿಸ್ತಾನ ಸರ್ಕಾರ ಕೊನೆಗೂ ಭಯೋತ್ಪಾದನಾ ವಿರೋಧಿ ತಿದ್ದುಪಡಿ ಕಾನೂನಿ ಅಧಿಕೃತವಾಗಿ ಅನುಮೋದನೆ ನೀಡಿದೆ. ಜೊತೆಗೆ ಉಗ್ರ ಸಂಘಟನೆಗಳನ್ನು ವಿಶ್ವ ಸಂಸ್ಥೆಯ ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ತೀರ್ಮಾನಿಸಿದೆ.
ಶ್ರೀದೇವಿನ ಕೊಂದ ದೇವರನ್ನು ದ್ವೇಷಿಸುತ್ತೇನೆ: ರಾಮ್ ಗೋಪಾಲ್ ವರ್ಮಾ

ಶ್ರೀದೇವಿನ ಕೊಂದ ದೇವರನ್ನು ದ್ವೇಷಿಸುತ್ತೇನೆ: ರಾಮ್ ಗೋಪಾಲ್ ವರ್ಮಾ

ನಟಿ ಶ್ರೀದೇವಿ ಅಂದ-ಚೆಂದಕ್ಕೆ ಮಾರು ಹೋಗಿದ್ದ ರಾಮ್ ಗೋಪಾಲ್ ವರ್ಮಾ,ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಶ್ರೀದೇವಿಯನ್ನ ಹತ್ತಿರದಿಂದ ನೋಡುವ ಸಲುವಾಗಿಯಂತೆ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಶ್ರೀದೇವಿಗಾಗಿ 'ಕ್ಷಣ ಕ್ಷಣಂ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದರಂತೆ. ''ಕ್ಷಣ ಕ್ಷಣಂ' ಶ್ರೀದೇವಿಗಾಗಿ ನಾನು ಬರೆದ ಲವ್ ಲೆಟರ್''ಎಂದು ಟ್ವೀಟ್ ಮಾಡಿದ್ದಾರೆ. ''ಯಾವತ್ತೂ ನಾನು ದೇವರನ್ನ ಇಷ್ಟು ದ್ವೇಷಿಸಿಲ್ಲ. ಪ್ರಕಾಶಮಾನವಾದ ಬೆಳಕನ್ನ ಇಂದು ದೇವರು ಕಿತ್ತುಕೊಂಡಿದ್ದಾನೆ. ನನ್ನ ಹೃದಯ ಬೋನಿಕಪೂರ್ ಗಾಗಿ ಮಿಡಿಯುತ್ತಿದೆ''. ಏಯ್ ಬಾಲಾಜಿ,ನನ್ನನ್ನ ಉಳಿಸಿ ಶ್ರೀದೇವಿಯನ್ನ ಮಾತ್ರ ಯಾಕೆ ನೀನು ಕರೆದುಕೊಂಡೆ?ಎಂದಿದ್ದಾರೆ ವರ್ಮಾ.
ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯಪುರದಲ್ಲಿ ಭಾನುವಾರ ಬೆಳಗ್ಗೆ ಹಾಫ್‌ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು. ಭಾನುವಾರ ಮುಂಜಾನೆ ವೃಕ್ಷ ಅಭಿಯಾನ ಟ್ರಸ್ಟ್‌ ವಿಜಯಪುರದಲ್ಲಿ 'ವೃಕ್ಷೋತ್ಥಾನ್ 2018' ಹಾಫ್ ಮ್ಯಾರಾಥಾನ್ ಆಯೋಜನೆ ಮಾಡಿತ್ತು. ಹಸಿರು ‌ವಿಜಯಪುರ ನಿರ್ಮಾಣಕ್ಕಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ವಿಜಯಪುರದ ಗೋಳಗುಮ್ಮಟ ಆವರಣದಲ್ಲಿ ರಾಹುಲ್ ಗಾಂಧಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ನಟ ಯಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಬಳ ಕೊಡಲು ಸಾಧ್ಯವಿಲ್ಲ, 3500 ಸಿಬ್ಬಂದಿಗಳಿಗೆ ಉದ್ಯಮಿ  ಮೆಹುಲ್ ಚೋಕ್ಸಿ ಪತ್ರ

ಸಂಬಳ ಕೊಡಲು ಸಾಧ್ಯವಿಲ್ಲ, 3500 ಸಿಬ್ಬಂದಿಗಳಿಗೆ ಉದ್ಯಮಿ ಮೆಹುಲ್ ಚೋಕ್ಸಿ ಪತ್ರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಉದ್ಯಮಿ ಮೆಹುಲ್ ಚೋಕ್ಸಿ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ತನ್ನ ಸಿಬ್ಬಂದಿಗಳಿಗೆ ಈ ಸಂಬಂಧ ಪತ್ರ ಬರೆದು ತಾನು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇನೆ. ನನ್ನ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವುಗಳೆಲ್ಲೂ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಪ್ರಸ್ತುತ ಸಿಬ್ಬಂದಿಗಳ ಬಾಕಿ ವೇತನ ಸಾಧ್ಯವಿಲ್ಲ ವಿವಿಧ ತನಿಖಾ ಸಂಸ್ಥೆಗಳು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ಸತ್ಯಕ್ಕೆ ಯಾವತ್ತು ಜಯ ಎಂದಿದ್ದಾರೆ.