Short News

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್‌ ಸಯೀದ್‌ ನನ್ನು ಉಗ್ರ ಪಟ್ಟಿಗೆ ಸೇರಿಸಿದ ಪಾಕ್

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್‌ ಸಯೀದ್‌ ನನ್ನು ಉಗ್ರ ಪಟ್ಟಿಗೆ ಸೇರಿಸಿದ ಪಾಕ್

ಅಮೆರಿಕದ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಕಳೆದ ವಾರ ಸದ್ದು ಗದ್ದಲವಿಲ್ಲದೆ ಮುಂಬಯಿ ಉಗ್ರ ದಾಳಿಯಾ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದಾವಾ ಸಂಘಟನೆಯನ್ನು ನಿಷೇಧಿತ ಉಗ್ರ ಪಟ್ಟಿಗೆ ಸೇರಿಸಿದೆ. ಅಮೆರಿಕ ಈ ಹಿಂದೆಯೇ ಪಾಕ್‌ ಮೂಲದ ಜಮಾತ್‌ ಉದ್‌ ದಾವಾ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧಿಸಿತ್ತು. ಈಗ ಪಾಕಿಸ್ಥಾನ ಕೂಡ ಜಮಾತ್‌ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧ ಹೇರುವ ಮೂಲಕ ಅಮೆರಿಕದ ಕಟ್ಟು ನಿಟ್ಟಿನ ಸೂಚನೆಗೆ ತಕ್ಕಂತೆ ನಡೆದುಕೊಂಡಿದೆ.
ವಿದೇಶಿ ನೆಲದಲ್ಲಿ ಅತ್ಯಧಿಕ ರನ್, ಬ್ರಾಡ್ಮನ್ ದಾಖಲೆ ಮುರಿಯುವರೇ  ಕೊಹ್ಲಿ?

ವಿದೇಶಿ ನೆಲದಲ್ಲಿ ಅತ್ಯಧಿಕ ರನ್, ಬ್ರಾಡ್ಮನ್ ದಾಖಲೆ ಮುರಿಯುವರೇ ಕೊಹ್ಲಿ?

ಅಂತಾರಾಷ್ಟ್ರೀಯ ಕ್ರಿಕೆ‌ಟ್‌ ಪ್ರವಾಸವೊಂದರಲ್ಲಿ 974ರನ್‌ ಬಾರಿಸಿ ಯಾರೂ ಈ ತನಕ ಮುರಿಯದಿರುವ ಸರ್‌ ಡಾನ್‌ ಬ್ರಾಡ್ಮನ್‌ ಅವರ ದಾಖಲೆಯನ್ನು ಮುರಿಯುವ ಹಂತಕ್ಕೆ ಸಮೀಪದಲ್ಲಿದೆ. ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಇರುವ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಈ ದಾಖಲೆಯನ್ನು ಮುರಿಯುವರೇ ಎಂದು ಕಾದು ನೋಡಬೇಕಿದೆ. ಬ್ರಾಡ್ಮನ್‌ ದಾಖಲೆ ಮುರಿಯಲು ಕೊಹ್ಲಿಗಿನ್ನು ಬೇಕಿರುವುದು ಕೇವಲ 104 ರನ್‌ ಮಾತ್ರ ಈಗಾಗಲೇ ಕೊಹ್ಲಿ 13ಇನ್ನಿಂಗ್ಸ್‌ಗಳಲ್ಲಿ ಒಟ್ಟು 870ರನ್‌ ಗಳಿಸಿದ್ದಾರೆ. ಸರ್‌ ಬ್ರಾಡ್ಮನ್‌ ಅವರು 1930ರಲ್ಲಿ ಇಂಗ್ಲಂಡ್‌ ವಿರುದ್ಧದ ಸರಣಿಯಲ್ಲಿ ಆಡಿದ ಐದು ಟೆಸ್ಟ್‌ ಪಂದ್ಯಗಳಲ್ಲಿ ಒಟ್ಟು 974ರನ್‌ ಗಳಿಸಿದ್ದರು.
ಸಿಟಿ ಬಿಟ್ಟು ಫ್ಯಾಮಿಲಿ  ಜೊತೆ ರೆಸಾರ್ಟ್  ಗೆ ಶಿಫ್ಟ್ ಆದ ಉಪೇಂದ್ರ

ಸಿಟಿ ಬಿಟ್ಟು ಫ್ಯಾಮಿಲಿ ಜೊತೆ ರೆಸಾರ್ಟ್ ಗೆ ಶಿಫ್ಟ್ ಆದ ಉಪೇಂದ್ರ

ಸಿನಿಮಾ,ರಾಜಕೀಯದ ಮಧ್ಯೆ ಉಪ್ಪಿ ಸಿಟಿ ಬಿಟ್ಟು ರೆಸಾರ್ಟ್ ಸೇರಿಕೊಂಡಿದ್ದಾರೆ. ಬನಶಂಕರಿಯಿಂದ ದೊಡ್ಡ ಆಲದಮರ ಬಳಿ ಇರುವ ರುಪ್ಪಿಸ್ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ. ಉಪ್ಪಿ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಸಿಟಿಯಿಂದ ದೂರವಿರುವ ಹಳ್ಳಿಗಳ ಮಧ್ಯೆ ಇರೋ ರೆಸಾರ್ಟ್ ಹಿಂಭಾಗದಲ್ಲಿ ಹೊಸ ಮನೆಯನ್ನ ಕಟ್ಟಿಕೊಂಡಿದ್ದಾರೆ. ತಾವರೆಕೆರೆಯ ಚುಂಚನಕುಪ್ಪೆ ಬಳಿ ಇರುವ ರುಪ್ಪಿಸ್ ರೆಸಾರ್ಟ್ ನಲ್ಲಿ ಉಪ್ಪಿ ಹೊಸ ಮನೆಯನ್ನ ಕಟ್ಟಿದ್ದಾರೆ. ಇತ್ತಿಚಿಗಷ್ಟೇ ಗೃಹಪ್ರವೇಶವನ್ನು ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ಗೃಹಪ್ರವೇಶ ಸಮಾರಂಭ ಮಾಡಿ ಮುಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಉಪ್ಪಿ ಫ್ಯಾಮಿಲಿ ಹೊಸ ಮನೆಯಲ್ಲಿ ಜೀವನ ಕಳೆಯಲಿದೆ.
ಸಿಮ್‌ಕಾರ್ಡ್ ಹಾಕಿ ಈ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಸಿ!

ಸಿಮ್‌ಕಾರ್ಡ್ ಹಾಕಿ ಈ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಸಿ!

ಕಂಪ್ಯೂಟರ್ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಮತ್ತು ಮೊಬೈಲ್ ಪ್ರೊಸೆಸರ್ ನಿರ್ಮಾಣ ಕಂಪನಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಸಂಸ್ಥೆ ಜತೆಯಾಗಿ 'ಆಲ್ವೇಸ್ ಕನೆಕ್ಟಡ್' ಎಂಬ ನೂತನ ಮಾದರಿಯ ಲ್ಯಾಪ್‌ಟಾಪ್ ಮತ್ತೆ ಸೀಮಿತ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಕೆ ಮಾಡಲು ಹೆಚ್ಚುವರಿಯಾಗಿ ಇಂಟರ್‌ನೆಟ್ ಡಾಂಗಲ್, ವೈಫೈ ಸಂಪರ್ಕ ಅವಶ್ಯವಿತ್ತು. ಆದರೆ, ನೂತನ ಆಲ್ವೇಸ್ ಕನೆಕ್ಟಡ್ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಡೇಟಾ ಮಾದರಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿಕೊಂಡು ಎಲ್‍ಟಿಇ ಮಾದರಿಯ ಇಂಟರ್‌ನೆಟ್ ಪಡೆಯಬಹುದಾಗಿದೆ.