Short News

ಅಮೆರಿಕ ಮಿತ್ರಪಡೆ ಮತ್ತು ರಷ್ಯಾ ಬಣಗಳ ನಡುವೆ ಕಲಹ, ವಿಶ್ವರಂಗದಲ್ಲಿ 3ನೇ ಯುದ್ಧದ ಆತಂಕ

ಅಮೆರಿಕ ಮಿತ್ರಪಡೆ ಮತ್ತು ರಷ್ಯಾ ಬಣಗಳ ನಡುವೆ ಕಲಹ, ವಿಶ್ವರಂಗದಲ್ಲಿ 3ನೇ ಯುದ್ಧದ ಆತಂಕ

ಜಗತ್ತಿನ ಹಲವು ದೇಶಗಳ ಎಚ್ಚರಿಕೆಯ ಹೊರತಾಗಿಯೂ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ಅಲ್ ಅಸ್ಸಾದ್ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಫ್ರಾನ್ಸ್, ಟರ್ಕಿ, ಬ್ರಿಟನ್ ಒಳಗೊಂಡ ಅಮೆರಿಕ ನೇತೃತ್ವದ ಮಿತ್ರಪಡೆ ಸಿರಿಯಾ ಮೇಲೆ ಯುದ್ಧ ಘೋಷಿಸಿ ರಾಜಧಾನಿ ಡಮಾಸ್ಕಸ್ ಸಹಿತ ಹಲವೆಡೆ 100ಕ್ಕೂ ಅಧಿಕ ಕ್ಷಿಪಣಿಗಳಿಂದ ದಾಳಿ ಮಾಡಿದೆ. ಈ ಬೆಳವಣಿಗೆಯಿಂದ ಸಿಟ್ಟಿಗೆದ್ದಿರುವ ರಷ್ಯಾ ಕೂಡ ಅಮೆರಿಕ ವಿರುದ್ಧ ತಿರುಗಿಬಿದ್ದಿದ್ದು, ಶತ್ರುಗಳ 71 ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಸಿರಿಯಾ ನೆಪದಲ್ಲಿ ಅಮೆರಿಕ, ರಷ್ಯಾ ಬಣಗಳ ನಡುವೆ ಕಲಹ ತೀವ್ರಗೊಂಡಿದ್ದು, ಭೀಕರ ಯುದ್ಧದ ಆತಂಕ ಮೂಡಿದೆ.
ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ

ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ

ದರ್ಶನ್, ಸುದೀಪ್, ಯಶ್, ಶಿವರಾಜ್ ಕುಮಾರ್, ಮಾಲಾಶ್ರೀ, ಸಾಧುಕೋಕಿಲಾ, ರಚಿತಾ ರಾಮ್, ಅಮೂಲ್ಯ ಹೀಗೆ.....ಹಲವು ನಟ-ನಟಿಯರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಆತ್ಮೀಯ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಪರವಾಗಿ ಪರವಾಗಿ ಪ್ರಚಾರ ಮಾಡಲಿದ್ದಾರೆ. ಮತ್ತೊಂದೆಡೆ ಸಿನಿಮಾ ರಂಗದಲ್ಲೇ ಗುರುತಿಸಿಕೊಂಡು ಕೋಟ್ಯಾಂತರ ಅಭಿಮಾನಿಗಳ ಅಭಿಮಾನ ಪಡೆದುಕೊಂಡಿದ್ದ ಕಲಾವಿದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಟ ಸಾಯಿ ಕುಮಾರ್, ಅಂಬರೀಶ್, ಉಮಾಶ್ರೀ, ಸಿ.ಆರ್.ಮನೋಹರ್, ಮುನಿರತ್ನ, ಸಿಪಿ ಯೋಗೇಶ್ವರ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ಚುನಾವಣ ಅಖಾಡದಲ್ಲಿದ್ದಾರೆ.

ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಯುವಕ ...! ಮುಂದೇನಾಯ್ತು ಗೊತ್ತಾ?

ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಯುವಕ ...! ಮುಂದೇನಾಯ್ತು ಗೊತ್ತಾ?

ಕಣಿವೆ ನಾಡು ಜಮ್ಮು-ಕಾಶ್ಮೀರದ ದೋಡಾ ಎಂಬಲ್ಲಿ ಈ ಘಟನೆ ನಡೆದಿದ್ದು, ಬೈಕ್‌ ಮೇಲೆ ಬಂದ ಮೂವರು ಕಾಮುಕರು ನಡು ರಸ್ತೆಯಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆಕೆಯ ಸ್ಕೂಟಿ ನಿಲ್ಲಿಸಲು ಯತ್ನಿಸಿದ್ದಾರೆ. ಆ ವೇಳೆ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಯುವತಿ ನೇರವಾಗಿ ವ್ಯಕ್ತಿಯೋರ್ವನಿಗೆ ಗುದ್ದಿದ್ದಾಳೆ. ತದನಂತರ ಕೆಳಗೆ ಬಿದ್ದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಇಬ್ಬರು ಯುವಕರು ಪರಾರಿಯಾಗಲು ಯತ್ನಿಸಿದ್ದು, ಕೆಲ ಸ್ಥಳೀಯರು ಅವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಇದರ ವಿಡಿಯೋ ಸದ್ಯ ವೈರಲ್‌ ಆಗಿದೆ.
ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!

ಇಲ್ಲಿಯವರೆಗೆ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚುರಂಜನ್ ಅವರಿಗೆ ಟಿಕೆಟ್ ನೀಡಲಾದ ಹಿನ್ನಲೆಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೀಗ ಒಂದಷ್ಟು ರಾಜಕೀಯ ಕಳೆ ಬಂದಂತಾಗಿದೆ.

ನಗರದ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಪ್ಪಚ್ಚುರಂಜನ್ ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾಡಳಿತದ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಈ ಬಾರಿ ಕೂಡ ಜ