Short News

ಥಾಯ್ಲೆಂಡ್ ನ ಥಾಮ್ಲಾಂಗ್ ಗುಹೆ ಇನ್ನು ಮುಂದೆ ಮ್ಯೂಸಿಯಂ

ಥಾಯ್ಲೆಂಡ್ ನ ಥಾಮ್ಲಾಂಗ್ ಗುಹೆ ಇನ್ನು ಮುಂದೆ ಮ್ಯೂಸಿಯಂ

19 ದಿನಗಳ ಕಾಲ ಇಡೀ ವಿಶ್ವದ ಗಮನ ಸೆಳೆದಿದ್ದ ಥಾಮ್ಲಾಂಗ್ ಗುಹೆ ಇನ್ನು ಮುಂದೆ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. 12 ಮಂದಿ ಬಾಲಕರು ಮತ್ತು ಫುಟ್ಬಾಲ್ ಕೋಚ್ ದುರ್ಗಮ ಥಾಮ್ಲಾಂಗ್ ಗುಹೆಯಿಂದ ಜೀವ ಉಳಿಸಿಕೊಂಡು ಬಂದಿರುವುದು ಈಗ ಇತಿಹಾಸ ಇದರ ಬೆನ್ನಲ್ಲೇ ಥಾಮ್ಲಾಂಗ್ ಗುಹೆಯನ್ನ ಮ್ಯೂಸಿಯಂ ಆಗಿ ಬದಲಾಯಿಸಲು ಥೈಲ್ಯಾಂಡ್ ಸರ್ಕಾರ ತೀರ್ಮಾನಿಸಿದೆ. ಈ ಗುಹೆಯ ಬಗ್ಗೆ ಸೂಕ್ತ ಅಧ್ಯಯನ ನಡೆಸಿರುವ ಪ್ರವಾಸಿ ಗೈಡ್ಗಳನ್ನ ನೇಮಿಸಲು ಕೂಡ ಥಾಯ್ ಸರ್ಕಾರ ನಿರ್ಧರಿಸಿದೆ.
ಪತಂಜಲಿ ಕಿಂಬೋ ಆಪ್ ಬೋಲೋ ಮೆಸೆಂಜರ್ ಆಯ್ತಾ..?

ಪತಂಜಲಿ ಕಿಂಬೋ ಆಪ್ ಬೋಲೋ ಮೆಸೆಂಜರ್ ಆಯ್ತಾ..?

ಮೇ ತಿಂಗಳಲ್ಲಿ ಪತಂಜಲಿಯ ಕಿಂಬೋ ಆಪ್ ಬಿಡುಗಡೆಗೊಂಡಾಗ ಪ್ರತಿಯೊಬ್ಬರಲ್ಲೂ ಬಾರೀ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಸ್ವದೇಶಿ ಮೆಸೇಜಿಂಗ್ ಆಪ್ ಬಿಡುಗಡೆಗೊಂಡಿದೆ ಎಂದು ಜನರು ಕೂಡ ಭಾರೀ ಆಸೆ ಇಟ್ಟುಕೊಂಡಿದ್ದರು. ವಾಟ್ಸ್ ಆಪ್ ಗೆ ಸ್ಪರ್ಧೆಯೊಡ್ಡುವ ಉದ್ದೇಶವನ್ನು ಪತಂಜಲಿಯಿಂದ ನಿರೀಕ್ಷಿಸಲಾಗಿತ್ತು. ಆದರೆ ಅದ್ಯಾಕೋ ಬಿಡುಗಡೆಗೊಂಡ 24 ತಾಸುಗಳ ಒಳಗಾಗಿ ಎಲ್ಲಾ ನಿರೀಕ್ಷೆ ಎಂಬ ಪಟಾಕಿ ಠುಸ್ ಆಯ್ತು. ಹೌದು, ಕಿಂಬೋ ಬಿಡುಗಡೆಯಾದ ಕೇವಲ 24 ತಾಸುಗಳ ಒಳಗೆ ವಾಪಾಸ್ ತೆಗೆದುಕೊಳ್ಳಲಾಯ್ತು. ಅದಕ್ಕೆ ಭದ್ರತೆಯ ಕಾರಣವನ್ನು ನೀಡಲಾಗಿತ್ತು.

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಈಗಿನ ಜಮಾನದಲ್ಲಿ ಯಾವುದೋ ವಿಳಾಸ ಹುಡುಕಿಕೊಂಡು ಹೋಗಬೇಕು ಅಂದ್ರೆ ಗೂಗಲ್ ಮ್ಯಾಪ್ ನಷ್ಟು ಸಹಾಯವನ್ನು ಮನುಷ್ಯರೂ ಮಾಡುವುದಿಲ್ಲ. ಭಾಷೆ ಬರದ ಊರಲ್ಲಂತೂ ಗೂಗಲ್ ಮ್ಯಾಪ್ ನಿಜಕ್ಕೂ ಅತ್ಯುತ್ತಮ ದಾರಿತೋರುಗ. ಹಾಗಾಗಿ ದಾರಿ ತಪ್ಪಿ ಎಲ್ಲಿಗೋ ಹೋಗಿ ಊರೆಲ್ಲ ಸುತ್ತಾಡಿ ತಲುಪಬೇಕಾದ ವಿಳಾಸವನ್ನು ತಲುಪದೇ ಇರುವಂತಹ ಪ್ರಮೇಯ ಈಗ ಉಧ್ಭವವಾಗೋದು ಬಹಳ ಕಡಿಮೆ. ಬಲಕ್ಕೆ ತಿರುಗಿ, ಎಡಕ್ಕೆ ತಿರುಗಿ, ಇಂತಿಷ್ಟು ದೂರದಲ್ಲಿ ಬಲ ತಿರುವು ಇದೆ, ಎಡ ತಿರುವು ಇದೆ, ನಿಮ್ಮ ವಿಳಾಸಕ್ಕೆ ಹೋಗಲು ನೀವು ಬಲಕ್ಕೆ ಹೋಗಬೇಕು ಅಥವಾ ಎಡಕ್ಕೆ ಹೋಗಬೇಕು ಹೀಗೆ ಪ್ರತಿ ಕ್ಷಣವೂ ದಾರಿಯ ಮಾರ್ಗದರ್ಶನವನ್ನು ನೀಡುತ್ತಾ ಸಾಗುತ್ತದೆ ಗೂಗಲ್ ಮ್ಯಾಪ್.

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್‌ಐಆರ್

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್‌ಐಆರ್

ಶಾಸಕ ಹ್ಯಾರಿಸ್ ಮಗನ ಪ್ರಕರಣದ ನಂತರ ಈಗ ಬಿಜೆಪಿ ಶಾಸಕ ಗೋವಿಂದ ಕಾರಜೋಳಮಗ ತನ್ನ ಗೂಂಡಾಗಿರಿಯಿಂದ ಸುದ್ದಿಯಲ್ಲಿದ್ದಾನೆ. ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಅರುಣ್ ಕಾರಜೋಳ ಪೊಲೀಸ್ ಪೇದೆಯೊಬ್ಬನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದುಆತನ ವಿರುದ್ಧ ಬಾಗಲಕೋಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅರುಣ್ ಕಾರಜೋಳ ಅವರು ನಿನ್ನೆ ರಾತ್ರಿ ನೋಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ್ದರು. ಅದನ್ನು ತೆಗೆಯುವಂತೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಮಲ್ಲೇಶ್ ಲಮಾಣಿ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಅರುಣ್ ಮಲ್ಲೇಶ್‌ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more