Short News

ಅಮೆರಿಕ ವಿದೇಶಾಂಗ ಸಚಿವ ಸ್ಥಾನದಿಂದ ಟಿಲ್ಲರ್ ಸನ್‌ ರನ್ನು ಕಿತ್ತೆಸೆದ ಟ್ರಂಪ್

ಅಮೆರಿಕ ವಿದೇಶಾಂಗ ಸಚಿವ ಸ್ಥಾನದಿಂದ ಟಿಲ್ಲರ್ ಸನ್‌ ರನ್ನು ಕಿತ್ತೆಸೆದ ಟ್ರಂಪ್

ಅಮೆರಿಕಾ ಸರಕಾರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ವಿದೇಶಾಂಗ ಸಚಿವ (ಸೆಕ್ರೆಟರಿ ಆಫ್ ಸ್ಟೇಟ್) ರೆಕ್ಸ್ ಟಿಲ್ಲರ್ಸನ್ ರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿತ್ತೊಗೆದಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಟಿಲ್ಲರ್ಸನ್ ಜಾಗಕ್ಕೆ ಸಿಐಎ ನಿರ್ದೇಶಕ ಮೈಕ್ ಪೊಂಪೆಯೋರನ್ನು ಟ್ರಂಪ್ ಕರೆತಂದಿದ್ದಾರೆ. "ಸಿಐಎ ನಿರ್ದೇಶಕರಾಗಿದ್ದ ಮೈಕ್ ಪೊಂಪೆಯೋ ನಮ್ಮ ನೂತನ ಸೆಕ್ರೆಟರಿ ಆಫ್ ಸ್ಟೇಟ್ ಆಗಲಿದ್ದಾರೆ. ಅವರು ಅತ್ಯುತ್ತಮ ಕೆಲಸ ನಿರ್ವಹಿಸಲಿದ್ದಾರೆ," ಎಂದು ಮಂಗಳವಾರ ಟ್ರಂಪ್ ಟ್ವೀಟ್ ಮಾಡಿದ್ದಾರೆ. "ತಮ್ಮ ಸೇವೆಗಾಗಿ ರೆಕ್ಸ್ ಟಿಲ್ಲರ್ಸನ್ ಗೆ ಧನ್ಯವಾದಗಳು!" ಎಂದೂ ಟ್ರಂಪ್ ಟ್ಟೀಟ್ ನಲ್ಲಿ ಹೇಳಿದ್ದಾರೆ.  
ತುಮಕೂರು ನಗರ ಬಿಜೆಪಿ ಟಿಕೆಟ್ ಶೀಘ್ರ ಪ್ರಕಟಿಸಲು ಬಿಎಸ್‌ವೈಗೆ ಮನವಿ

ತುಮಕೂರು ನಗರ ಬಿಜೆಪಿ ಟಿಕೆಟ್ ಶೀಘ್ರ ಪ್ರಕಟಿಸಲು ಬಿಎಸ್‌ವೈಗೆ ಮನವಿ

ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಶೀಘ್ರವಾಗಿ ಘೋಷಿಸುವಂತೆ ಒತ್ತಾಯಿಸಿ ತುಮಕೂರು ನಗರ ವೀರಶೈವ ಸಮಾಜದ ಮುಖಂಡರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿತು. ತುಮಕೂರಿನಲ್ಲಿ ಬಿಜೆಪಿ ಯಾರಿಗೂ ಖಚಿತವಾಗದೆ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿರುವ ಕಾರಣ, ಬೆಂಗಳೂರಿನಲ್ಲಿ ಮಂಗಳವಾರ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವೀರಶೈವ ಸಮಾಜದ ಮುಖಂಡರು ಆದಷ್ಟು ಬೇಗ ಸಮರ್ಥ ಮತ್ತು ಈಗ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಗೊಂದಲವನ್ನು ನಿವಾರಿಸುವ ಶಕ್ತಿ, ಜಾಣ್ಮೆಯುಳ್ಳ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು.
ಭಾರೀ ಬೇಡಿಕೆ, ಮೈಸೂರಿಗೆ ಮತ್ತೊಂದು ಫ್ಲೈ ಬಸ್

ಭಾರೀ ಬೇಡಿಕೆ, ಮೈಸೂರಿಗೆ ಮತ್ತೊಂದು ಫ್ಲೈ ಬಸ್

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೈಸೂರು-ಬೆಂಗಳೂರು ಮಾರ್ಗಕ್ಕೆ ಭಾರೀ ಬೇಡಿಕೆ ಬಂದಿದೆ. ಆದ್ದರಿಂದ, ಮತ್ತೊಂದು ಬಸ್‌ಅನ್ನು ಹೆಚ್ಚುರಿಯಾಗಿ ಓಡಿಸಲಾಗುತ್ತದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾ.22ರಿಂದ ಮತ್ತೊಂದು ಫ್ಲೈ ಬಸ್ ಮೈಸೂರಿಗೆ ಸಂಚಾರ ನಡೆಸಲಿದೆ. 2013ರಲ್ಲಿ ಆರಂಭವಾಗಿದ್ದ ಪ್ಲೈ ಬಸ್ ಸೇವೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೆಚ್ಚುವರಿ ಬಸ್ ಮೈಸೂರು-ಬೆಂಗಳೂರು ನಗರದ ನಡುವೆ ದಿನಕ್ಕೆ 2 ಬಾರಿ ಸಂಚಾರ ನಡೆಸಲಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ ಬಬ್ಬರ್ ರಾಜೀನಾಮ

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ ಬಬ್ಬರ್ ರಾಜೀನಾಮ

ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ ಬಬ್ಬರ್ ರಾಜೀನಾಮೆ ನೀಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್ ಪುರ ಮತ್ತು ಫಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೀಡಿದ ಕಳಪೆ ಪ್ರದರ್ಶನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಗೋರಖ್ ಪುರ ಕ್ಷೇತ್ರವನ್ನು ಈ ಮೊದಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದರೆ, ಫಲ್ಪುರ ಕ್ಷೇತ್ರವನ್ನು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದರು.