Short News

ಕುವೈತ್ ನಲ್ಲಿ ಬಿಡುಗಡೆಯಾದ ಮೇಷ್ಟ್ರ ಪ್ರವಾಸ ಕಥನ

ಕುವೈತ್ ನಲ್ಲಿ ಬಿಡುಗಡೆಯಾದ ಮೇಷ್ಟ್ರ ಪ್ರವಾಸ ಕಥನ

ಉಡುಪಿಯ ಪತ್ರಿಕೋದ್ಯಮ ಕಾಲೇಜಿನ ಮೇಷ್ಟ್ರು ಮಂಜುನಾಥ್ ಕಾಮತ್ ಅವರು ಬರೆದಿರುವ 'ದಾರಿ ತಪ್ಪಿಸು ದೇವರೇ' ಎಂಬ ಪ್ರವಾಸ ಕಥನ ಕುವೈತ್ ನಲ್ಲಿ ವಿಧ್ಯುಕ್ತವಾಗಿ ಇತ್ತೀಚೆಗೆ ಬಿಡುಗಡೆಯಾಯಿತು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮಂಜುನಾಥ್ ಕಾಮತ್ ಅವರು. ಕರ್ನಾಟಕ ಕರಾವಳಿಯ ಲೇಖಕರೊಬ್ಬರು ರಚಿಸಿರುವ ಕೃತಿಯೊಂದು ಮೊದಲ ಬಾರಿಗೆ ಗಲ್ಫ್ ನಲ್ಲಿ ಬಿಡುಗಡೆಯಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ನೈಟ್ ಶೂಟಿಂಗ್ ಮಾಡಿದ ಅಂಬಿ

ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ನೈಟ್ ಶೂಟಿಂಗ್ ಮಾಡಿದ ಅಂಬಿ

ಅಂಬರೀಶ್ ಅವರ ಇಷ್ಟು ವರ್ಷದ ಕೆರಿಯರ್ ನಲ್ಲಿ ಎಂದು ಕೂಡ ರಾತ್ರಿ ಶೂಟಿಂಗ್ ಮಾಡಿರಲಿಲ್ಲವಂತೆ. ಆದರೆ ಇದೇ ಮೊದಲ ಬಾರಿಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ರಾತ್ರಿ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದಾರೆ.ಕೆಲದಿನಗಳ ಹಿಂದೆ ಚಿತ್ರದ ಚಿತ್ರೀಕರಣ ನಾಗರಬಾವಿ ಹತ್ತಿರ ನಡೆದಿದೆ. ಬೆಳ್ಳಗೆ 12 ಗಂಟೆಗೆ ಶುರುವಾದ ಶೂಟಿಂಗ್ ರಾತ್ರಿ 2 ಗಂಟೆವರೆಗೆ ಸಾಗಿದೆ. ಅಂಬರೀಶ್ ಮೊದಲ ಬಾರಿಗೆ ತಡ ರಾತ್ರಿಯ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಚಿತ್ರೀಕರಣ ಅನುಭವದ ಬಗ್ಗೆ ಮಾತನಾಡಿದ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ನಿರ್ದೇಶಕ ಗುರುದತ್ ''ತುಂಬ ಖುಷಿ ಆಗುತ್ತಿದೆ.

ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಣ್ಸನ್ನೆ  ಬೆಡಗಿ ಪ್ರಿಯಾ ?

ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಣ್ಸನ್ನೆ ಬೆಡಗಿ ಪ್ರಿಯಾ ?

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಆದರೆ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ. ಇದನ್ನ ಖಂಡಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌.ಐ.ರ್ ರದ್ದುಪಡಿಸಬೇಕು ಮತ್ತು ತೆಲಂಗಾಣ, ಮಹಾರಾಷ್ಟ್ರ ಸರಕಾರಗಳು ಯಾವುದೇ ಕ್ರಮಕ್ಕೆ ಮುಂದಾಗದಂತೆ ತಡೆ ನೀಡಬೇಕು ಎಂದು ಪ್ರಿಯಾ ಪ್ರಕಾಶ್ ವಾರಿಯರ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರಿಯಾ ಕಣ್ಸನ್ನೆ ಬಗ್ಗೆನೇ ಮಾತನಾಡ್ತಿದ್ದಾರೆ.

ಹೀಗೆ, ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನರ ಹಾಟ್ ಟಾಪಿಕ್ ಆಗಿರುವ ಪ್ರಿಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ.