Short News

ಉಚಿತ ಬಸ್ ಪಾಸ್ ವಾಪಸಾತಿ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಉಚಿತ ಬಸ್ ಪಾಸ್ ವಾಪಸಾತಿ ವಿರೋಧಿಸಿ ಎಬಿವಿಪಿ ಪ್ರತಿಭಟನೆ

ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಾಪಾಸಾತಿ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವುದಾಗಿ ಹಿಂದಿನ ಸರ್ಕಾರ ಹೇಳಿತ್ತು, ನಂತರ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡುವುದಾಗಿ ತಿಳಿಸಿತ್ತು, ಆದರೆ ಇದೀಗ ರಾಜ್ಯ ಸರ್ಕಾರ ಕೇವಲ ಒಂದರಿಂದ 7ನೇ ತರಗತಿವರೆಗೆ ಮಾತ್ರ ಉಚಿತ ಬಸ್ ಪಾಸ್ ನೀಡುವ ನಿರ್ಧಾರದಿಂದ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  
ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಜೀಪ್ ಸಂಸ್ಥೆಯು ಕಂಪಾಸ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಬೆಡ್‌ರಾಕ್ ಎನ್ನುವ ಲಿಮಿಟೆಡ್ ಎಡಿಷನ್ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು,ವಿಶೇಷ ಬಣ್ಣದ ಆಯ್ಕೆ ಮತ್ತು ಹೊಸ ಫೀಚರ್ಸ್‌ಗಳನ್ನು ಹೊತ್ತು ಬಂದಿರುವ ಈ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.17.53ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಸ್ಪೋರ್ಟ್ ವಿನ್ಯಾಸಗಳನ್ನು ಹೊತ್ತು ಬಂದಿರುವ ಬೆಡ್‌ರಾಕ್ ಎಡಿಷನ್ ಕಾರುಗಳು ಜೀಪ್ ಕಂಪಾಸ್ ಸ್ಪೆಷಲ್ ಎಡಿಷನ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ನ್ಯೂ ಜನರೇಷನ್ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳು ಭಾರತದಲ್ಲಿ ಇದುವರೆಗೆ 25000ಎಡಿಷನ್ ಮಾರಾಟವಾದ ಹಿನ್ನೆಲೆಯಲ್ಲಿ ಬೆಡ್‌ರಾಕ್ ಎಡಿಷನ್ ಕಾರನ್ನು ಹೊರತಂದಿದೆ.
ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್..!

ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್..!

ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಪೇಟಿಎಂ. ಒನ್97 ಕಮ್ಯುನಿಕೇಷನ್ ಒಡೆತನದಲ್ಲಿರುವ ಪೇಟಿಎಂ ಈಗ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ತನ್ನ ಪೇಟಿಎಂ ಆಪ್ ನ ಇನ್ ಬಾಕ್ಸ್ ಮೋಡ್ ನಲ್ಲಿ ಭರಪೂರ ಮನರಂಜನೆ ಒದಗಿಸಲು ಮುಂದಾಗಿದೆ.ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಪೋನ್ ಪೇ ಮುಂತಾದ ಡಿಜಿಟಲ್ ಬ್ಯಾಂಕಿಂಗ್ ಆಪ್ ಗಳಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿರುವ ಪೇಟಿಎಂಗೆ ವಾಟ್ಸ್ ಆಪ್ ಪೇಮೆಂಟ್ ಕೂಡ ದೊಡ್ಡ ಎದುರಾಳಿಯಾಗುವುದನ್ನು ಅರಿತಿದೆ. ಆದ್ದರಿಂದ ಬಳಕೆದಾರರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ಎಣೆಯುತ್ತದೆ.

ಫುಟ್ಬಾಲ್ ವಿಶ್ವಕಪ್: ಸೌತ್ ಕೊರಿಯಾ ವಿರುದ್ಧ 1-0 ಯಿಂದ ಗೆಲುವು ಕಂಡ ಸ್ವೀಡನ್

ಫುಟ್ಬಾಲ್ ವಿಶ್ವಕಪ್: ಸೌತ್ ಕೊರಿಯಾ ವಿರುದ್ಧ 1-0 ಯಿಂದ ಗೆಲುವು ಕಂಡ ಸ್ವೀಡನ್

ರಷ್ಯಾದ ನಿಜ್ನಿ ನವ್ಗೊರೊಡ್ ಕ್ರೀಡಾಂಗಣದಲ್ಲಿ ನಡೆದ ಸ್ವೀಡನ್-ಸೌತ್ ಕೊರಿಯಾ ನಡುವಣ ಫುಟ್ಬಾಲ್ ವಿಶ್ವಕಪ್ ಕಾದಾಟದಲ್ಲಿ ಸ್ವೀಡನ್ 1-0 ಅಂತರದ ಗೆಲುವು ಸಾಧಿಸಿದೆ. 65ನೇ ನಿಮಿಷದಲ್ಲಿ ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್ ಸಿಡಿಸಿದ ಗೋಲ್ ನಿಂದಾಗಿ ಸ್ವೀಡನ್ ಗೆಲುವನ್ನಾಚರಿಸಿತು. 21ನೇ ನಿಮಿಷದಲ್ಲಿ ಸ್ವೀಡನ್ ಮೊದಲು ಗೋಲ್ ಖಾತೆ ತೆರೆಯುವುದರಲ್ಲಿದ್ದರು. ಆದರೆ ಸೌತ್ ಕೊರಿಯಾ ಗೋಲ್ ಕೀಪರ್ ಅದ್ಭುತವಾಗಿ ಅದನ್ನು ತಡೆದರು. ಇದೇ ನಿಮಿಷದಲ್ಲಿ ಎರಡು ಸಾರಿ ಸ್ವೀಡನ್ ಗೋಲ್ ಗೆ ಯತ್ನಿಸಿತಾದರೂ ಚೊ ಹ್ಯುನ್-ವೂ ಗೋಲ್ ಗೆ ಅವಕಾಶ ನೀಡಲಿಲ್ಲ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more