Short News

ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮ, ಪ್ರಕಾಶ್ ರೈ ಬೇಸರ

ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮ, ಪ್ರಕಾಶ್ ರೈ ಬೇಸರ

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮದ ಬಗ್ಗೆ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಪ್ರಜೆಗಳೇ,  "ಯಾರಿಗೂ ಬಹುಮತ ಬಾರದ ಚುನಾವಣಾ ಫಲಿತಾಂಶದ ನಂತರ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಇವರೆಲ್ಲರೂ ಒಬ್ಬರನ್ನೊಬ್ಬರು ಕೊಳ್ಳುವ-ಮಾರುವ ವ್ಯಾಪಾರಕ್ಕಿಳಿದಿದ್ದಾರೆ. ನಮ್ಮ ಅನುಮತಿಯಿಲ್ಲದೆ, ತಮ್ಮ ಶಕ್ತ್ಯಾನುಸಾರ ದಕ್ಕಿದ್ದನ್ನು ಹಂಚಿಕೊಂಡು, ಭಿನ್ನಾಭಿಪ್ರಾಯಗಳನ್ನು ಮರೆತು, ವಿಧಾನಸೌಧದೊಳಗೆ ಒಂದಾಗಿ ಓಡಾಡುತ್ತ ಮುಂದಿನ ಚುನಾವಣೆವರೆಗೆ ಆರಾಮಾಗಿರುತ್ತಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತದ್ದು ನಾವು' ಏನು ಮಾಡೋಣ? ಎಂದು ಪ್ರಶ್ನಿಸಿ ರೈ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಬಂದು ಎಚ್ಡಿಕೆ ಹರಸಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

ಬೆಂಗಳೂರಿಗೆ ಬಂದು ಎಚ್ಡಿಕೆ ಹರಸಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

ಚುನಾವಣೆಗೂ ಮೊದಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸದವರೆಗೆ ನಡೆದು ಬಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಇಂದು ಮತ್ತೆ ಬೆಂಗಳೂರಿಗೆ ಬಂದಿದ್ದರು.

ಬುಧವಾರ ನಡೆಯಲಿರುವ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆ.ಸಿ. ರಾವ್ ಗೈರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿ ಶುಭ ಕೋರಲು ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಇಂದು ಸಂಜೆ ಆಗಮಿಸಿದ್ದರು.

ಭೇಟಿ ನಂತರ ಮಾತನಾಡಿದ ಅವರು, "ನಾನು ತುಂಬಾ ಖುಷಿಯಾಗಿದ್ದೇನೆ. ನಾನು ತುಂಬಾ ಸಂತೋಷಗೊಂಡಿದ್ದೇನೆ," ಎಂದಿದ್ದಾರೆ.

ಮೊದಲ ಕ್ವಾಲಿಫೈಯರ್‌ : ಚೆನ್ನೈ ಗೆ ಗೆಲ್ಲಲು 140 ರನ್ ಟಾರ್ಗೆಟ್ ನೀಡಿದ ಹೈದರಾಬಾದ್

ಮೊದಲ ಕ್ವಾಲಿಫೈಯರ್‌ : ಚೆನ್ನೈ ಗೆ ಗೆಲ್ಲಲು 140 ರನ್ ಟಾರ್ಗೆಟ್ ನೀಡಿದ ಹೈದರಾಬಾದ್

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಚೆನ್ನೈ ಟೀಂ ಗೆ ಗೆಲ್ಲಲು 140 ರನ್ ಗಳ ಟಾರ್ಗೆಟ್ ನೀಡಿದೆ. ಚೆನ್ನೈ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 139 ರನ್‌ ಗಳಿಸಿದೆ. ಕಾರ್ಲಸ್ ಬ್ರಾತ್‌ವೇಟ್ 29 ಎಸೆತಗಳಲ್ಲಿ 43 ರನ್ ಗಳಿಸಿ ಅಜೇಯರಾಗುಳಿದು ಗೌರವಾನ್ವಿತ ಮೊತ್ತ ಪೇರಿಸಲು ನೆರವಾದರು.
ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಡೀಸೆಲ್ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ ವೊಲ್ವೋ

ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆಗೆ ಸೃಷ್ಠಿಯಾಗುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಸರ್ಕಾರದಿಂದ ಕೂಡಾ ವಿಶೇಷ ಪ್ರೋತ್ಸಾಹ ದೊರೆಯುತ್ತಿದೆ. ಈ ಹಿನ್ನೆಲೆ ಸ್ವಿಡನ್ ಮೂಲದ ಜನಪ್ರಿಯ ಕಾರು ಉತ್ಪಾದನೆ ಸಂಸ್ಥೆಯಾದ ವೊಲ್ವೋ ಡಿಸೇಲ್ ಎಂಜಿನ್‌ ಉತ್ಪಾದನೆಗೆ ಗುಡ್ ಬೈ ಹೇಳಿದ್ದು, ಇನ್ಮುಂದೆ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳ ಉತ್ಪಾದನೆಗೆ ಮುಂದಾಗಿದೆ. ಇದರ ಜೊತೆಗೆ 2019ರ ನಂತರ ಪೆಟ್ರೋಲ್ ಕಾರು ಮಾದರಿಗಳ ಉತ್ಪಾದನೆಯನ್ನು ಕೈಬಿಡುವ ಸುಳಿವು ನೀಡಿದೆ. ಮುಂದಿನ ದಿನದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳನ್ನು ಮಾತ್ರ ಅಭಿವೃದ್ಧಿಗೊಳಿಸಲಿದೆ.