Short News

ಶ್ರವಣಬೆಳಗೊಳ : ಜನಿವಾರ ಕೆರೆಯಲ್ಲಿ ಸಾಹಸ ಕ್ರೀಡೆಗೆ ಚಾಲನೆ

ಶ್ರವಣಬೆಳಗೊಳ : ಜನಿವಾರ ಕೆರೆಯಲ್ಲಿ ಸಾಹಸ ಕ್ರೀಡೆಗೆ ಚಾಲನೆ

 ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಜಲ ಸಾಹಸ ಕ್ರೀಡೆಯನ್ನು ಆರಂಭಿಸಲಾಗಿದೆ. ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರು ಜನಿವಾರ ಕೆರೆಯಲ್ಲಿ ಜಲ ಸಾಹಸ ಕ್ರೀಡೆಯ ಅನುಭವ ಪಡೆಯಬಹುದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಜಲ ಸಾಹಸ ಕ್ರೀಡೆಗೆ ಸೋಮವಾರ ಚಾಲನೆ ನೀಡಿದರು. ಜನಿವಾರ ಕೆರೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕ್ರೀಡೆಯನ್ನು ಆಯೋಜನೆ ಮಾಡಲಾಗಿದೆ.

ನಂತರ ಮತಾಡನಾಡಿದ ಸಚಿವರು, 'ರಾಜ್ಯ ಸರ್ಕಾರ ಸುಮಾರು 50 ಲಕ್ಷ ವೆಚ್ಚದಲ್ಲಿ ಜನಿವಾರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ ವ್ಯವಸ್ಥೆಯನ್ನ ಮಾಡಿದೆ.  

ದೇಶದ ಮೊಟ್ಟ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ

ದೇಶದ ಮೊಟ್ಟ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಇಂದು ಮಲ್ಹೋತ್ರಾ ನೇಮಕ

ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಹಿರಿಯ ವಕೀಲೆ ಇಂದು ಮಲ್ಹೋತ್ರಾ ರನ್ನು ನೇಮಕ ಮಾಡಲಾಗಿದೆ. ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್ ವಕೀಲೆಯೊಬ್ಬರನ್ನು ನ್ಯಾಯಾಧೀಶೆಯಾಗಿ ನೇಮಕಗೊಳಿಸಲಾಗಿದೆ. ಜ.22ರಂದು ಪ್ರಸ್ತುತ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾ. ಕೆ.ಎಂ. ಜೋಸೆಫ್‌ ಮತ್ತು ಇಂದು ಮಲ್ಹೋತ್ರಾ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪದನ್ನೋತಿಗಾಗಿ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು. ಆದರೆ, ಮಲ್ಹೋತ್ರಾ ಅವರನ್ನು ಮಾತ್ರ ನೇಮಿಸಲು ಸರ್ಕಾರ ಉದ್ದೇಶಿಸಿದ್ದರಿಂದ ಫೆಬ್ರುವರಿ ಮೊದಲ ವಾರದಲ್ಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ್ದರೂ ನಿರ್ಧಾರ ಪ್ರಕಟಿಸಿರಲಿಲ್ಲ.
ಹಾಂಕಾಂಗ್ ನಿಂದಲೂ  ಸಾಲಗಾರ ನೀರವ್ ಮೋದಿ ಎಸ್ಕೇಪ್ !

ಹಾಂಕಾಂಗ್ ನಿಂದಲೂ ಸಾಲಗಾರ ನೀರವ್ ಮೋದಿ ಎಸ್ಕೇಪ್ !

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ರೂ ವಂಚಿಸಿ ಭಾರತ ಬಿಟ್ಟು ಓಡಿ ಹೋಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಇಷ್ಟು ದಿನ ಹಾಂಕಾಂಗ್ ನಲ್ಲಿ ನೆಲೆಸಿದ್ದಾನೆಂದು ಹೇಳಲಾಗಿತ್ತು. ಆದರೆ ಇದೀಗ ಹಾಂಕಾಂಗ್ ನಿಂದಲೂ ಪರಾರಿಯಾಗಿದ್ದಾನೆಂದು ವರದಿ ತಿಳಿಸಿದೆ. ಪಿಎನ್ ಬಿ ಹಗರಣ ಬಹಿರಂಗವಾಗುವುದಕ್ಕೂ ಮುನ್ನ ನೀರವ್ ಮೋದಿ ಭಾರತದಿಂದ ಕಾಲ್ಕಿತ್ತು ದುಬೈ ಮೂಲಕ ಹಾಂಕಾಂಗ್ ಗೆ ಪರಾರಿಯಾಗಿದ್ದ. ಇತ್ತೀಚೆಗೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿ ದೇಶ ಬಿಟ್ಟಿರುವವರ ಆಸ್ತಿಯನ್ನು ಯಾವುದೇ ವಿಚಾರಣೆ ನಡೆಸದೆ ಮುಟ್ಟಗೋಲು ಹಾಕಿಕೊಳ್ಳಬಹುದೆಂಬ ಕಾನೂನು ಜಾರಿಗೆ ತಂದಿದೆ.
ಬಿಳಿ ತ್ವಚೆ ಪಡೆಯಲು ಕೆಲವು ನೈಸರ್ಗಿಕ ಫೇಸ್ ಮಾಸ್ಕ್‌ಗಳು

ಬಿಳಿ ತ್ವಚೆ ಪಡೆಯಲು ಕೆಲವು ನೈಸರ್ಗಿಕ ಫೇಸ್ ಮಾಸ್ಕ್‌ಗಳು

ಎರಡು ಚಮಚ ಕಡಲೆ ಹಿಟ್ಟು , ಒಂದು ಚಿಟಿಕೆ ಅರಶಿನ ಹುಡಿ, ಒಂದು ಚಮಚ ಹಾಲಿನ ತಾಜಾ ಕೆನೆ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ನಿಮ್ಮ ಚರ್ಮವು ತುಂಬಾ ಒಣಗಿದ್ದರೆ ಇದಕ್ಕೆ ಕೆಲವು ಹನಿ ತೆಂಗಿನೆಣ್ಣೆ ಹಾಕಿಕೊಳ್ಳಿ. ಎರಡು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಕಣ್ಣಿನ ಭಾಗ ಬಿಟ್ಟು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆ ಬಿಟ್ಟು ಬಳಿಕ ಹಗುರಬೆಚ್ಚಗಿನ ನೀರಿನಿಂದ ತೊಳೆಯಿರಿ. ಎರಡು ಚಮಚ ಮುಲ್ತಾನಿ ಮಿಟ್ಟಿ, 5ರಿಂದ 6 ಸೌತೆಕಾಯಿ ತುಂಡುಗಳು ಮತ್ತು ಎರಡು ಚಮಚ ರೋಸ್ ವಾಟರ್ ಹಾಕಿ ರುಬ್ಬಿಕೊಂಡು ಪೇಸ್ಟ್ ಮಾಡಿ.