Short News

16 ವರ್ಷ ಬಳಿಕ ತಮ್ಮ ನಿವೇಶನಕ್ಕೆ ಮರಳಿದ ದಲಿತರು

16 ವರ್ಷ ಬಳಿಕ ತಮ್ಮ ನಿವೇಶನಕ್ಕೆ ಮರಳಿದ ದಲಿತರು

ಚಾಮರಾಜನಗರದ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಗ್ರಾಮದಲ್ಲಿ 12 ದಲಿತ ಕುಟುಂಬಗಳು ಸರ್ಕಾರ ನೀಡಿದ್ದ ಉಚಿತ ನಿವೇಶನವನ್ನು ಕುಟುಂಬವೊಂದಕ್ಕೆ ಹೆದರಿ ಬಿಟ್ಟು ಹೋಗಿ ಮೂಲಭೂತ ಸೌಕರ್ಯ ವಂಚಿತರಾಗಿ ಬದುಕುತ್ತಿದ್ದರು. ಇದೀಗ 16 ವರ್ಷಗಳ ಬಳಿಕ ಪೊಲೀಸರ ರಕ್ಷಣೆಯಲ್ಲಿ ತಮ್ಮ ನಿವೇಶನಕ್ಕೆ ಹಿಂದಿರುಗಿದ್ದಾರೆ. ಸರ್ಕಾರ ನೀಡಿದ್ದ ಉಚಿತ ನಿವೇಶನದ ಹಕ್ಕು ಪತ್ರಗಳು ಗ್ರಾಮದ 12 ದಲಿತ ನಿವಾಸಿಗಳ ಹೆಸರಿನಲ್ಲಿತ್ತಾದರೂ ಇದೇ ಗ್ರಾಮದ ಬೇರೆ ಸಮುದಾಯಕ್ಕೆ ಸೇರಿದ ರತ್ನಸ್ವಾಮಿ ಹಾಗೂ ಈತನ ಪುತ್ರ ಅವರನ್ನು ಬೆದರಿಸಿ ನಿವೇಶನಕ್ಕೆ ಬಾರದಂತೆ ತಡೆದಿದ್ದರು.
ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಅಪ್ರೆಂಟೀಸಸ್ ಹುದ್ದೆಗೆ ಅರ್ಜಿ ಆಹ್ವಾನ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಅಪ್ರೆಂಟೀಸಸ್ ಹುದ್ದೆಗೆ ಅರ್ಜಿ ಆಹ್ವಾನ

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟೀಸಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 23, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 14, 2018. ಐಟಿಐ ವಿದ್ಯಾರ್ಹತೆಯಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೇ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://www.oil-india.com/ ಗೆ ಭೇಟಿ ನೀಡಿ.
ಯುಕೆ - ಇಂಡಿಯಾ ವೀಕ್‌ - 2018ಕ್ಕೆ ಲಂಡನ್ ನಲ್ಲಿ ಅದ್ಧೂರಿ ಚಾಲನೆ

ಯುಕೆ - ಇಂಡಿಯಾ ವೀಕ್‌ - 2018ಕ್ಕೆ ಲಂಡನ್ ನಲ್ಲಿ ಅದ್ಧೂರಿ ಚಾಲನೆ

ಜೂನ್ 18ರಿಂದ 22ರವರೆಗೆ ನಡೆಯಲಿರುವ ಯುಕೆ - ಇಂಡಿಯಾ ವೀಕ್ 2018ಕ್ಕೆ ಲಂಡನ್‌ನ ತಾಜ್ ಬಕಿಂಗ್‌ಹ್ಯಾಂ ಗೇಟ್ ಹೋಟೆಲ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಶೃಂಗ ಸಮ್ಮೇಳನದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹಲವಾರು ಚರ್ಚಾಗೋಷ್ಠಿಗಳು ನಡೆಯಲಿವೆ. ಜೊತೆಗೆ ಯುಕೆ, ಇಂಡಿಯಾಗಳ ಸಂಬಂಧದ ಸಂಭ್ರಮಾಚರಣೆಗಳನ್ನು ಆಯೋಜಿಸಲಾಗಿದ್ದು, ಎರಡೂ ದೇಶಗಳ ಗಣ್ಯಾತಿಗಣ್ಯರು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಬ್ರಿಟನ್ ಸಂಸದ ಹಾಗೂ ಲಿಯಾಮ್ ಫಾಕ್ಸ್, ಎಮಿಲಿ ಥಾರ್ನಬೆರ್ರಿ, ಮ್ಯಾಟ್ ಹ್ಯಾನಕಾಕ್ ಜಂಟಿಯಾಗಿ ಸಮಾರಂಭವನ್ನು ಉದ್ಘಾಟಿಸಿದ್ದಾರೆ.

ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಗೆ ಕಡ್ಡಾಯ ರಜೆ

ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಗೆ ಕಡ್ಡಾಯ ರಜೆ

ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ತನಿಖೆ ಪೂರ್ಣಗೊಳ್ಳುವವರೆಗೆ ರಜೆಯ ಮಳೆ ತೆರಳಬೇಕು ಎಂದು ಬ್ಯಾಂಕ್ ಹೇಳಿದೆ.

ಹಿತಾಸಕ್ತಿಯ ಸಂಘರ್ಷದ ಪ್ರಕರಣವೊಂದರಲ್ಲಿ ಆಂತರಿಕ ತನಿಖೆ ಜಾರಿಯಲ್ಲಿದ್ದು, ಈ ತನಿಖೆ ಪೂರ್ಣಗೊಳ್ಳುವವರೆಗೆ ತನ್ನ ಸಿಇಒ ಅವರನ್ನೇ ಬ್ಯಾಂಕ್ ರಜೆಯ ಮೇಲೆ ಕಳುಹಿಸಿದೆ.

ಬ್ಯಾಂಕ್ ನ ಲೈಫ್ ಇನ್ಸೂರೆನ್ಸ್ ವಿಭಾಗದ ಸಂದೀಪ್ ಭಕ್ಷಿಯವರನ್ನು ಬ್ಯಾಂಕ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಒಒ) ಯನ್ನಾಗಿ ನೇಮಿಸಲಾಗಿದೆ.

"ಆಡಳಿತ ಮತ್ತು ಅತ್ಯುನ್ನತ ಮಟ್ಟದ ಕಾರ್ಪೊರೇಟ್ ಮಾನದಂಡಗಳ ಪ್ರಕಾರ, ಚಂದಾ ಕೊಚ್ಚಾರ್ ಅವರು ಮೇ 30, 2018 ರಂದು

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more