Short News

ಚುನಾವಣೆ ಬಂದಾಗ ಮಾತ್ರ ಅಮಿತ್ ಶಾಗೆ ಮೀನುಗಾರರ ನೆನಪು: ಮಧ್ವರಾಜ್

ಚುನಾವಣೆ ಬಂದಾಗ ಮಾತ್ರ ಅಮಿತ್ ಶಾಗೆ ಮೀನುಗಾರರ ನೆನಪು: ಮಧ್ವರಾಜ್

ಕರಾವಳಿಯ ಮತ್ಸ್ಯ ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ಮೀನುಗಾರಿಕಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, "ಟಾರ್ಗೆಟ್ ಗೆಲ್ಲಾ ನಾನು ಹೆದರುವುದಿಲ್ಲ. ನನ್ನನ್ನು ದೇವರು ಬಿಟ್ಟು ಬೇರೆ ಯಾರು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾ ಬಂದಿದ್ದೇನೆ. ದೇಶದ ಕಾನೂನಿಗೆ ತಲೆ ಬಾಗಿ ಅದರಂತೆ ನಡೆದುಕೊಳ್ಳುವವ ನಾನು," ಎಂದು ಹೇಳಿದ್ದಾರೆ.ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾನು ಚುನಾವಣೆಯಲ್ಲಿ ಯಾರಿಂದಲೂ ದುಡ್ಡು ಪಡೆಯುವವನಲ್ಲ. ಫಿಶ್ ಮಿಲ್ ಗಳಿಂದಲೂ ಫಂಡ್ ಪಡೆದವಲ್ಲ. ಹೀಗಾಗಿ ಟಾರ್ಗೆಟ್ ಗೆ ಹೆದರುವ ಅವಶ್ಯಕತೆಯಿಲ್ಲ,"

ಏಪ್ರಿಲ್ 24ಕ್ಕೆ ಮಾರುಕಟ್ಟೆಗೆ 40MP ಟ್ರಿಪಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌..!

ಏಪ್ರಿಲ್ 24ಕ್ಕೆ ಮಾರುಕಟ್ಟೆಗೆ 40MP ಟ್ರಿಪಲ್ ಕ್ಯಾಮೆರಾ ಸ್ಮಾರ್ಟ್‌ಫೋನ್‌..!

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಹುವಾವೆ P20 ಮತ್ತು ಹುವಾವೆ P20 ಪ್ರೊ ಸ್ಮಾರ್ಟ್‌ಫೋನ್‌ಗಳು ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಇದೇ ಏಪ್ರಿಲ್ 24ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈಗಾಗಲೇ ಟ್ರಿಪಲ್ ​(ಮೂರು) ಕ್ಯಾಮೆರಾ ಹೊಂದಿರುವ ಹುವಾವೆ P20 ಪ್ರೋ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗಿದ್ದು, ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಪ್ರಶಂಸೆ ದೊರೆಕಿದೆ. ಐಫೋನ್ X ಮಾದರಿಯಲ್ಲಿ P20 ಮತ್ತು P20 ಪ್ರೋ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಭಾಗದಲ್ಲಿ ಡಿಸ್‌ಪ್ಲೇಯಲ್ಲಿ ನೋಚ್ ಅನ್ನು ಕಾಣಬಹುದಾಗಿದೆ.
ವಾಟ್ಸ್‌ಆಪ್ ಪೇಮೆಂಟ್ ಸೇವೆಗಿಂತ ಸಂಪೂರ್ಣ ಭಿನ್ನವಾಗಿದೆ ''ಫೇಸ್‌ಬುಕ್ ಪೇಮೆಂಟ್'' ಸೇವೆ!!

ವಾಟ್ಸ್‌ಆಪ್ ಪೇಮೆಂಟ್ ಸೇವೆಗಿಂತ ಸಂಪೂರ್ಣ ಭಿನ್ನವಾಗಿದೆ ''ಫೇಸ್‌ಬುಕ್ ಪೇಮೆಂಟ್'' ಸೇವೆ!!

ವಾಟ್ಸ್‌ಆಪ್ ಪೇಮೆಂಟ್ ಸೇವೆಗಿಂತ ಸ್ವಲ್ಪ ಭಿನ್ನವಾಗಿ ಫೇಸ್‌ಬುಕ್ ಮೂಲಕ ಪೇಮೆಂಟ್ ಸೇವೆಯನ್ನು ಒದಗಿಸಲು ಫೇಸ್‌ಬುಕ್ ಸಂಸ್ಥೆ ಮುಂದಾಗಿದೆ. ವಾಟ್ಸ್‌ಆಪ್ ಪೇಮೆಂಟ್ ವ್ಯವಸ್ಥೆಯಲ್ಲಿರುವಂತಹ ಯುಪಿಐ ಪೇಮೆಂಟ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಆಯ್ಕೆಗಳ ಬದಲಾಗಿ 'ಒಟಿಪಿ' ಆಧಾರಿತ ಪೇಮೆಂಟ್ ಸೇವೆಯನ್ನು ಫೇಸ್‌ಬುಕ್ ಆಪ್ ಮೂಲಕ ಕಂಪೆನಿ ಪರಿಚಯಿಸುತ್ತಿದೆ. ಮೊಬೈಲ್ ಸಂಖ್ಯೆ ಮೂಲಕ ಪೇಮೆಂಟ್ ಮಾಡಬಹುದಾದ ಈ ಸೇವೆಯಲ್ಲಿ ಪ್ರತಿಬಾರಿ 'ಒಟಿಪಿ' ಗ್ರಾಹಕರಿಗೆ ದೊರೆಯಲಿದೆ ಎಂದು ತಿಳಿದುಬಂದಿದೆ. ಬಳಕೆದಾರರು ಪೇಸ್‌ಬುಕ್ ಮತ್ತು ಬ್ಯಾಂಕಿನ 2ಸುರಕ್ಷತೆಯನ್ನು ಒಟ್ಟಿಗೆ ಪಡೆಯಲಿದ್ದಾರೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.
ಐಪಿಎಲ್ 2018 : ಕೆಕೆಆರ್ ಸದೆಬಡಿದ ಕಿಂಗ್ಸ್

ಐಪಿಎಲ್ 2018 : ಕೆಕೆಆರ್ ಸದೆಬಡಿದ ಕಿಂಗ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-02 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರದಂದು ಕೋಲ್ಕೊತಾದ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಡಕ್ವರ್ತ್ ಲೂವಿಸ್ ನಿಯಮದ ಪ್ರಕಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಒಂಬತ್ತು ವಿಕೆಟುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡವು ಕ್ರಿಸ್ ಲಿನ್ (74) ಬಿರುಸಿನ ಅರ್ಧಶತಕದ ನೆರವಿನಿಂದ 191 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಪಂಜಾಬ್ ತಂಡವು 8.2 ಓವರ್‌ಗಳಲ್ಲಿ 96 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡಚಣೆಯಾಯಿತು.