Short News

ಚಿಕ್ಕಮಗಳೂರಿನಲ್ಲಿ ಅವಲಕ್ಕಿಯಿಂದ ಮೂರು ವರ್ಷದ ಮಗು ಸಾವು

ಚಿಕ್ಕಮಗಳೂರಿನಲ್ಲಿ ಅವಲಕ್ಕಿಯಿಂದ ಮೂರು ವರ್ಷದ ಮಗು ಸಾವು

ಅವಲಕ್ಕಿ ಗಂಟಲಲ್ಲಿ ಸಿಲುಕಿ ಮಗು ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಸಮೀಪದ ಶಿರಗುಂದದ ದುರ್ಗಾಪ್ರಸಾದ್ ದಂಪತಿಯ 3 ವರ್ಷದ ಪುತ್ರ ಅನೀಶ್(3) ಮೃತಪಟ್ಟ ಮಗು. ನಿನ್ನೆ ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿ ಉಸಿರು ಕಟ್ಟಿದ್ದು, ಕೂಡಲೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ.
7ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕಿ ಮತ್ತಾಕೆ ಮಗಳ ಮೇಲೆ ರೇಪ್ ಬೆದರಿಕೆ

7ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕಿ ಮತ್ತಾಕೆ ಮಗಳ ಮೇಲೆ ರೇಪ್ ಬೆದರಿಕೆ

ಗುರುಗ್ರಾಮ್‌ನ ಖಾಸಗಿ ಶಾಲೆಯ ಓರ್ವ ವಿದ್ಯಾರ್ಥಿ ತನ್ನ ಶಿಕ್ಷಕಿ ಮತ್ತು ಆಕೆಯ ಮಗಳಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ್ದಾನೆ. 7ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ಇಂಟರ್ನೆಟ್ ಪೋಸ್ಟ್ ಮೂಲಕ ಹೀಗೆ ಬೆದರಿಕೆಯೊಡ್ಡಿದ್ದು, ಬಾಲಕಿ ಹುಡುಗ ಕ್ಲಾಸ್‌ಮೆಟ್ ಆಗಿದ್ದಾಳೆ. ಈ ಪ್ರಕರಣದ ನಂತರವೂ ಶಿಕ್ಷಕಿ ಶಾಲೆಗೆ ಬರುತ್ತಿದ್ದು, ಅವರ ಮಗಳು ಮಾತ್ರ ಹೆದರಿಕೊಂಡು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾಳೆ. ಹಾಗೇ ಇದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ತನ್ನ ಶಿಕ್ಷಕಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಈ ಕುರಿತಂತೆ ಮಕ್ಕಳಿಕೆ ಕೌನ್ಸಿಲಿಂಗ್ ನಡೆಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ನೀರವ್ 6 ಫ್ಲ್ಯಾಟ್ ಬೆಲೆ ಜಸ್ಟ್ 900ಕೋಟಿ!

ನೀರವ್ 6 ಫ್ಲ್ಯಾಟ್ ಬೆಲೆ ಜಸ್ಟ್ 900ಕೋಟಿ!

ಮುಂಬೈನ ವರ್ಲಿಯಲ್ಲಿರುವ ಸಮುದ್ರ ಮಹಲ್ ನಲ್ಲಿ ಸಮುದ್ರಾಭಿಮುಖವಾಗಿರುವ 6 ಫ್ಲ್ಯಾಟ್ ಗಳು ನೀರವ್ ಮೋದಿ ಮತ್ತು ಅವರ ಪತ್ನಿ ಅಮಿ ಮೋದಿ ಹೆಸರಿನಲ್ಲಿದೆ. ಈ ಪ್ರತೀ ಫ್ಲ್ಯಾಟ್ ಗಳ ಬೆಲೆ ತಲಾ 150 ಕೋಟಿ ರೂಪಾಯಿ ಎಂದು ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿಗೆ ಸೇರಿದ 29 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇದರಲ್ಲಿ ಕೇವಲ ಈ 6 ಫ್ಲ್ಯಾಟ್ ಗಳ ಬೆಲೆಯೇ 900 ಕೋಟಿ ರೂಪಾಯಿ ದಾಟುತ್ತದೆ ಎಂದು ಐಟಿ ಅಂದಾಜಿಸಿದೆ.

'ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ':

'ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ':

ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.

ಪಿಎನ್ ಬಿ ಹಗರಣವನ್ನಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬೆಳಿಗ್ಗೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.