Short News

ದಿನೇಶ್ ಗುಂಡೂರಾವ್ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಭಾರೀ ಪ್ರತಿಭಟನೆ

ದಿನೇಶ್ ಗುಂಡೂರಾವ್ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಭಾರೀ ಪ್ರತಿಭಟನೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಏಕವಚನ ಬಳಸಿ ವಾಗ್ದಾಳಿ ನಡೆಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಬಿಜೆಪಿ ಕೆಂಡಕಾರಲು ಆರಂಭಿಸಿದೆ. ದಿನೇಶ್ ಗುಂಡೂರಾವ್ ಅವರನ್ನು ವಜಾಗೊಳಿಸಿ ಎಂದು ಆಗ್ರಹಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಚುನಾವಣಾ ಆಯೋಗಕ್ಕೆ ದಿನೇಶ್ ಗುಂಡೂರಾವ್ ವಿರುದ್ಧ ದೂರು ಕೂಡ ಸಲ್ಲಿಸಿದ್ದಾರೆ. ಇದೇ ವೇಳೆ ಗುಂಡೂರಾವ್ ಮಾತನಾಡಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.63 / ಲೀಟರ್, ಡೀಸೆಲ್: 65.93 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.32 / ಲೀಟರ್ , ಡೀಸೆಲ್: 68.63 / ಲೀಟರ್. ಮುಂಬೈ: ಪೆಟ್ರೋಲ್: 82.48/ ಲೀಟರ್ , ಡೀಸೆಲ್: 70.20 / ಲೀಟರ್. ಚೆನ್ನೈ: ಪೆಟ್ರೋಲ್: 77.43 / ಲೀಟರ್ , ಡೀಸೆಲ್: 69.56 / ಲೀಟರ್. ಬೆಂಗಳೂರು: ಪೆಟ್ರೋಲ್: 75.82 / ಲೀಟರ್, ಡೀಸೆಲ್: 67.05/ ಲೀಟರ್. ಹೈದರಾಬಾದ್: ಪೆಟ್ರೋಲ್: 79.04/ ಲೀಟರ್, ಡೀಸೆಲ್: 71.63 / ಲೀಟರ್.
ದ್ವಾದಶ  ರಾಶಿಗಳ ಇಂದಿನ  (ಎಪ್ರಿಲ್ 27) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್ 27) ದಿನ ಭವಿಷ್ಯ

ಮೇಷ: ಹೊಸ ವ್ಯವಹಾರದ ಚಿಂತನೆ. ವೃಷಭ: ನಿಮ್ಮ ದೂರಾಲೋಚನೆಯೇ ಸಮಸ್ಯೆ ತಂದೊಡ್ಡಲಿದೆ. ಮಿಥುನ: ತವರಿಗೆ ಹೋಗಲು ಸಿದ್ಧತೆ. ಕರ್ಕ: ನಿಮ್ಮ ಧೋರಣೆಗಳಿಂದ ಸ್ನೇಹಿತರು ದೂರಾಗುವರು. ಸಿಂಹ: ಮನೆಯಲ್ಲಿ ಅಶಾಂತಿ. ಕನ್ಯಾ: ಹೂಡಿಕೆಗೆ ಸಕಾಲವಲ್ಲ. ತುಲಾ: ಅನಿರೀಕ್ಷಿತ ಧನಾಗಮನ. ವೃಶ್ಚಿಕ: ನಿಮ್ಮ ವರ್ತನೆಗೆ ಬೇಸತ್ತು ಮಕ್ಕಳು ದೂರಾಗಲಿದ್ದಾರೆ. ಧನು: ಸ್ನೇಹಿತ ರೊಂದಿಗೆ ಅಪ್ತರರೊಬ್ಬರ ಮನೆಗೆ ಭೇಟಿ ಸಾಧ್ಯತೆ. ಮಕರ: ಸಹೋದರಿಯರ ವಿರೋಧ ಕಟ್ಟಿಕೊಳ್ಳುವಿರಿ.  ಕುಂಭ: ಕುಟುಂಬದಲ್ಲಿ ಅಶಾಂತಿ. ಮಾನಸಿಕ ಕಿರಿಕಿರಿ. ಮೀನ: ಗೊಂದಲಗಳು ಉಂಟಾಗಿ ಸಮಸ್ಯೆಗಳು ಎದುರಾಗಲಿವೆ.
ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಇಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಇನ್ ಅವರನ್ನು ಭೇಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ದಕ್ಷಿಣ ಕೊರಿಯಾ ಮತು ಉತ್ತರ ಕೊರಿಯಾ ಗಡಿಯಲ್ಲಿರುವ ಪೆನಿನ್ಸುಲಾದ ಹಳ್ಳಿಯೊಂದರಲ್ಲಿ ಇಬ್ಬರೂ ಭೇಟಿಯಾಗಲಿದ್ದಾರೆ. ಉಭಯ ನಾಯಕರೂ ಅಣ್ವಸ್ತ್ರ ನಿಷೇಧದ ಬಗ್ಗೆ, ಶಾಮತಿ ಸಂಧಾನ, ಉಭಯ ರಾಷ್ಟ್ರಗಳ ಸಂಬಂಧ ವರದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ. 1950-53 ರ ನಂತರ ಗಡಿ ದಾಟಿ ದಕ್ಷಿಣ ಕೊರಿಯಾ ಮಣ್ಣಿನಲ್ಲಿ ಕಾಲಿಟ್ಟ ಮೊದಲ ಉತ್ತರ ಕೊರಿಯಾ ನಾಯಕ ಎಂಬ ಹೆಗ್ಗಳಿಕೆಗೆ ಕಿಮ್ ಜಾಂಗ್ ಪಾತ್ರರಾಗಿದ್ದಾರೆ.