Short News

ಕೆಥೋಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಇನ್ನು ಸಂವಿಧಾನ ಕಲಿಕೆ ಕಡ್ಡಾಯ

ಕೆಥೋಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಇನ್ನು ಸಂವಿಧಾನ ಕಲಿಕೆ ಕಡ್ಡಾಯ

ಸಂವಿಧಾನದ ಪರಿಚಯ ಪ್ರತಿ ನಾಗರಿಕನಿಗೂ ಇರಲೇಬೇಕಾಗಿರುವುದು ಅತ್ಯಂತ ಅಗತ್ಯ. ಭಾರತೀಯ ಸಂವಿಧಾನದ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ ಆಡಳಿತ ಮಂಡಳಿಯ ಶಾಲೆಗಳಲ್ಲಿ ಇನ್ನು ಭಾರತೀಯ ಸಂವಿಧಾನ ಕಲಿಕೆ ಕಡ್ಡಾಯಗೊಳ್ಳಲಿದೆ. ಕೆಥೋಲಿಕ್ ಕ್ರಿಶ್ಚಿಯನ್ ಚರ್ಚ್ ಆಡಳಿತದ ಶಾಲೆಗಳಲ್ಲಿ ಇನ್ನು ಭಾರತೀಯ ಸಂವಿಧಾನ ಕಲಿಕೆ ಕಡ್ಡಾಯವಾಗಲಿದೆ. ರಾಜ್ಯ ಸೇರಿದಂತೆ ದೇಶದ ಎಲ್ಲೆಡೆ ಕೆಥೋಲಿಕ್ ಕ್ರಶ್ಚಿಯನ್ ಚರ್ಚ್ ಆಡಳಿತದ 1 ರಿಂದ 10 ನೇ ತರಗತಿಯ ವರೆಗೆನ ಶಾಲೆಗಳಲ್ಲಿ ಇನ್ನು ಭಾರತೀಯ ಸಂವಿಧಾನವನ್ನು ಗುರುವಾರ ಪಠ್ಯವಾಗಿ ಕಲಿಸಲು ತೀರ್ಮಾನಿಸಲಾಗಿದೆ.  
ರೈಲಿನಲ್ಲೇ ಅವಳಿ ಮಕ್ಕಳ ಹೆರಿಗೆ, ಇಂಥಹ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದ ಸಬ್ ಇನ್ ಸ್ಪೆಕ್ಟರ್

ರೈಲಿನಲ್ಲೇ ಅವಳಿ ಮಕ್ಕಳ ಹೆರಿಗೆ, ಇಂಥಹ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದ ಸಬ್ ಇನ್ ಸ್ಪೆಕ್ಟರ್

ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ನೆರವಾದ ಸಂಭ್ರಮದಲ್ಲಿದ್ದಾರೆ ಸಬ್ ಇನ್ ಸ್ಪೆಕ್ಟರ್ ನಿತಿನ್ ಗೌರ್. ಇಂಥ ಸಹಾಯ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು ಕೂಡ ಅವರು ಹೇಳಿದ್ದಾರೆ. ಹೆರಿಗೆಯಾದ ಮಹಿಳೆಯ ಅತ್ತೆ- ಮುಶ್ರಫ್ ಜಹಾನ್ ಮಾತನಾಡಿ, ನನ್ನ ಸೊಸೆಯ ನೆರವಿಗೆ ಬಂದ ತಂಡ ಬಹಳ ಸಹಾಯ ಮಾಡಿತು ಎಂದಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಶೇಖ್ ಸಲ್ಮಾ ತಬಸ್ಸುಮ್ ಘಾಟ್ಕೋಪರ್ ನ ನಾರಾಯಣ್ ನಗರ್ ನಿವಾಸಿ. ತನ್ನ ಕುಟುಂಬದ ಜತೆಗೆ ಎಲ್ ಟಿಟಿ- ವಿಶಾಖಪಟ್ಟಣ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಉಡುಪಿ: ಮಾರುಕಟ್ಟೆಯಲ್ಲಿ ಮತ್ತೆ ಕೆಮಿಕಲ್ ಮೀನು ಮಾರಾಟ!

ಉಡುಪಿ: ಮಾರುಕಟ್ಟೆಯಲ್ಲಿ ಮತ್ತೆ ಕೆಮಿಕಲ್ ಮೀನು ಮಾರಾಟ!

ಕುಂದಾಪುರದ ಮುದೂರಿನಲ್ಲಿ ಮಾರಾಟಕ್ಕೆ ತಂದ ಮೀನಿನಲ್ಲಿ ಕೆಂಪು ಬಣ್ಣದ ದ್ರಾವಣ ಸೋರಲಾರಂಭಿಸಿದ್ದು, ರಾಸಾಯನಿಕ ಬೆರೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಂಗಮ್ ಬಳಿಯ ರಖಂ ಮೀನು ಮಾರಾಟ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಚಿಲ್ಲರೆ ಮೀನು ಮಾರಾಟಗಾರರಾದ ಮೂವರು ಮಹಿಳೆಯರು ಮೀನು ತಂದಿದ್ದರು. ಅವರು ಮುದೂರು ಮಾರ್ಕೆಟ್ ತಲುಪುತ್ತಿದ್ದಂತೆ ಮೀನಿನ ಹೊಟ್ಟೆಯಿಂದ ಕೆಂಪು ಬಣ್ಣದ ದ್ರಾವಣ ಸುರಿಯಲಾರಂಭಿಸಿತ್ತು. ಇದನ್ನು ಗಮನಿಸಿದ ಗ್ರಾಹಕರು ಮೀನು ಖರೀದಿಸಿಲ್ಲ. ಇದರಿಂದ ಸುಮಾರು 50ಕೆ.ಜಿ ಮೀನು ವ್ಯರ್ಥವಾಗಿದೆ. ರಖಂ ಮೀನು ಮಾರಾಟ ಕೇಂದ್ರಕ್ಕೆ ಆಹಾರ ಇಲಾಖೆ ಅಧಿಕಾರಿಗಳುಬಂದು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ.
ದಾವಣಗೆರೆ : ಕೆಎಸ್ಆರ್‌ಟಿಸಿ ತಿರುಪತಿ ಪ್ಯಾಕೇಜ್, ವಿವರಗಳು

ದಾವಣಗೆರೆ : ಕೆಎಸ್ಆರ್‌ಟಿಸಿ ತಿರುಪತಿ ಪ್ಯಾಕೇಜ್, ವಿವರಗಳು

ಕೆಎಸ್ಆರ್‌ಟಿಸಿ ಜು.20ರಿಂದ 4 ನಗರಗಳಿಂದ ತಿರುಪತಿ ಪ್ಯಾಕೇಜ್‌ ಸೇವೆಯನ್ನು ಆರಂಭಿಸಲಿದೆ. ದಾವಣಗೆರೆಯಿಂದ ಸಹ ಪ್ಯಾಕೇಜ್ ಆರಂಭವಾಗಲಿದ್ದು, ಐರಾವತ ಬಸ್‌ ಮೂಲಕ ಜನರು ಸಂಚರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಕೆಎಸ್ಆರ್‌ಟಿಸಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿಂದ ತಿರುಪತಿ ಪ್ಯಾಕೇಜ್ ಸೇವೆಯನ್ನು ಜುಲೈ 20ರಿಂದ ಆರಂಭಿಸಲಿದೆ. ಈಗಾಗಲೇ 2017ರಿಂದ ಬೆಂಗಳೂರು-ತಿರುಪತಿ ಸೇವೆ ಜಾರಿಯಲ್ಲಿದ್ದು ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಸಲು ಬಯಸುವ ಜನರು 30 ದಿನಗಳ ಮೊದಲು ಬುಕ್ ಮಾಡಬೇಕಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more