Short News

ಮಂಡ್ಯ: ಅಂಬರೀಶ್ ಗೆ ಟಿಕೆಟ್ ನೀಡಿದ್ದದಕ್ಕೆ ಆಕ್ರೋಶ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

ಮಂಡ್ಯ: ಅಂಬರೀಶ್ ಗೆ ಟಿಕೆಟ್ ನೀಡಿದ್ದದಕ್ಕೆ ಆಕ್ರೋಶ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

ಅಂಬರೀಶ್‌ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಮಂಡ್ಯ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿದ್ದು, ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ರವಿಕುಮಾರ್ ಗಣಿಗ ಬೆಂಬಲಿಗರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಗಣಿಗ ರವಿ ಅವರು ಈ ಬಾರಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅದಕ್ಕೆ ತಕ್ಕಂತೆ ಅಂಬರೀಶ್ ಅವರು ಕೂಡಾ ಟಿಕೆಟ್‌ಗೆ ಅರ್ಜಿ ಸಲ್ಲಿಸಿರಲಿಲ್ಲ, ಆದರೆ ಹಠಾತ್ ಬೆಳವಣಿಗೆಯಲ್ಲಿ ಅಂಬರೀಶ್ ಅವರಿಗೆ ಟಿಕೆಟ್ ಘೋಷಣೆ ಆಗಿದ್ದು, ಇದೀಗ ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಪ್ರಾರಂಭವಾಗಿದೆ.
ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ಮೇಷ:ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಲಾರರು. ವೃಷಭ:ಪತ್ನಿ ಕಡೆಯಿಂದ ತೊಂದರೆ ಉಂಟಾಗಲಿದೆ. ಮಿಥುನ:ಸ್ನೇಹಿತರು ನಿಮ್ಮನ್ನು ಅವಮಾನ ಮಾಡಬಹುದು. ಕಟಕ:ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಸಿಂಹ:ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ನಷ್ಟವಾಗುವ ಸಾಧ್ಯತೆಗಳಿವೆ. ತುಲಾ:ಅತ್ತಿಗೆ-ನಾದಿನಿ ಯರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ. ವೃಶ್ಚಿಕ:ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಧನುಸ್ಸು:ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ಸಂಭವಿಸಬಹುದು. ಮಕರ:ಸಹೋದರರಿಂದ ತೊಂದರೆಯಾಗಲಿದೆ. ಕುಂಭ:ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೀನ:ಪ್ರೇಮಿಗಳಿಗೆ ತೊಂದರೆಯಾಗಲಿದೆ.
ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ಕರ್ನಾಟಕದ ಬಿಜೆಪಿ ಘಟಕದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸಂವಾದ ನಡೆಸಲಿದ್ದಾರೆ. ತಮ್ಮ ವಿಶಿಷ್ಟ ನಮೋ ಆ್ಯಪ್ ಮೂಲಕ ಅವರು ಸಂವಾದ ನಡೆಸಲಿದ್ದಾರೆ. ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರ ಜೊತೆಗೆ ಅವರು ಸಂವಾದ ನಡೆಸಲಿದ್ದಾರೆ. ಸಂವಾದದ ಸಂದರ್ಭದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರಿಗೆ ಅವರು ಸಲಹೆ, ಮಾರ್ಗದರ್ಶನವನ್ನೂ ನೀಡಲಿದ್ದಾರೆ.
ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಡೆಲ್ ಕಂಪನಿಯು ಎಕ್ಸ್‍ಪಿಎಸ್ 13(2018) ನ ಮೂಲಕ ಎಲ್ಲವನ್ನೂ ಸರಿ ಮಾಡಿದೆ. ಈ ನೋಟ್‍ಬುಕ್ ನಲ್ಲಿ ತಪ್ಪು ಕಂಡು ಹಿಡಿಯುವುದಾದರೆ ಯಾರೊ ಮಹಾನ್ ಬಳಕೆದಾರನೇ ಇರಬೇಕು. ಎಕ್ಸ್‍ಪಿಎಸ್ ನಲ್ಲಿ ಹೊಸ ಉತ್ಪನ್ನ ಸೇರ್ಪಡೆಯಾಗಿ ಸ್ಪರ್ಧೆಯಲ್ಲಿ ಈಗ ಮುಂಚೂಣಿಯಲ್ಲಿದೆ. ಇದರಲ್ಲಿ ಸಂತಸದ ವಿಷಯವೆಂದರೆ ಆಪಲ್ ನ ಮ್ಯಾಕ್‍ಬುಕ್ ಹಾಗೆ ಕಾಣಲು ಪ್ರಯತ್ನಿಸಿಲ್ಲಾ. ಮೊದಲಿಗಿಂತ ಇನ್ನೂ ಉತ್ತಮವಾದದ್ದನ್ನು ನೀಡಿದೆ ಎಂದೆನಿಸುತ್ತದೆ. ಏನೇ ಆದರೂ ದುಡ್ಡು ಖರ್ಚು ಮಾಡಿದಕ್ಕೂ ಸಾರ್ಥಕ ಎನಿಸುತ್ತದೆ.