Short News

ಇಂದು ರಾತ್ರಿ ಈಗಲ್ಟನ್ ನಿಂದ ಕೊಚ್ಚಿಯ 7 ಸ್ಟಾರ್ ಹೋಟೆಲ್ ಗೆ ಶಾಸಕರು ಶಿಫ್ಟ್

ಇಂದು ರಾತ್ರಿ ಈಗಲ್ಟನ್ ನಿಂದ ಕೊಚ್ಚಿಯ 7 ಸ್ಟಾರ್ ಹೋಟೆಲ್ ಗೆ ಶಾಸಕರು ಶಿಫ್ಟ್

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ 'ಈಗಲ್ಟನ್ - ದಿ ಗಾಲ್ಫ್ ವಿಲೇಜ್ ರೆಸಾರ್ಟ್'ನ ಭದ್ರತೆಯನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ಶಾಸಕರ ವಾಸ್ತವ್ಯ ಬದಲಿಸಲು ಉಭಯ ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ತಮ್ಮ ಶಾಸಕರ ಕುದುರೆ ವ್ಯಾಪಾರವನ್ನು ತಡೆಯಲು ಇಂದು ರಾತ್ರಿ 10 ಗಂಟೆಗೆ ಶಾಸಕರನ್ನು ಕೊಚ್ಚಿಯ ಹೋಟೆಲ್ ಗೆ ಕರೆದೊಯ್ಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಕೊಚ್ಚಿಯ 'ಬ್ರಂಟನ್ ಬೋಟ್ ಯಾರ್ಡ್' ಎಂಬ ವೈಭವೋಪೇತ 7 ಸ್ಟಾರ್ ಹೋಟೆಲ್ ನ್ನು ಬುಕ್ ಮಾಡಲಾಗಿದ್ದು ಇಲ್ಲಿ ಶಾಸಕರು ವಾಸ್ತವ್ಯ ಹೂಡಲಿದ್ದಾರೆ.
ಪೋಖ್ರಾನ್‍ನಲ್ಲಿ ನಡೆಯಲಿದೆ ಪ್ರಥಮ ದೇಶಿಯ ನಿರ್ಮಿತ ಧನುಷ್ ಫಿರಂಗಿ ಪರೀಕ್ಷೆ

ಪೋಖ್ರಾನ್‍ನಲ್ಲಿ ನಡೆಯಲಿದೆ ಪ್ರಥಮ ದೇಶಿಯ ನಿರ್ಮಿತ ಧನುಷ್ ಫಿರಂಗಿ ಪರೀಕ್ಷೆ

ಭಾರತದ ಪ್ರಥಮ ದೇಶೀಯ ನಿರ್ಮಿತ,ದೀರ್ಘ ಅಂತರದ ಆರ್ಟಿಲರಿ ಗನ್(ಪಿರಂಗಿ)ಧನುಷ್ ಮುಂದಿನವಾರ ರಾಜಸ್ತಾನದ ಜೈಸಲ್ಮೆರ್‍ನ ಪೋಖ್ರಾನ್‍ನಲ್ಲಿ ಪರೀಕ್ಷೆಗೆ ಒಳಗಾಗುತ್ತಿದೆ. ಧನುಷ್ ಫಿರಂಗಿಗಳನ್ನು ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ(ಒಎಫ್‍ಬಿ) ಅಭಿವೃದ್ದಿಗೊಳಿಸಿದ್ದು,ಜಬ್ಬಲ್‍ಪುರ ಮೂಲದ ಗನ್ ಕ್ಯಾರಿಯೇಜ್ ಫ್ಯಾಕ್ಟರಿ(ಜಿಎಸ್‍ಎಫ್) ಸಿದ್ಧಪಡಿಸಿದೆ. ಭಾರತೀಯ ಸೇನಾ ಪಡೆಯ ತಾಂತ್ರಿಕ ಅಧಿಕಾರಿಗಳು ಮತ್ತು ಜಿಸಿಎಫ್ ತಜ್ಞರ ಸಮ್ಮುಖದಲ್ಲಿ ಫಿರಂಗಿಯಿಂದ ಗುಂಡು ಹಾರಿಸಿ ಪರೀಕ್ಷಾ ಪ್ರಯೋಗ ಮರುಭೂಮಿಯಲ್ಲಿ ನಡೆಯಲಿದೆ. 5ವರ್ಷದ ಹಿಂದೆಯೇ ಇದನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಮುಂದೂಡಲ್ಪಟ್ಟಿತ್ತು.
ಭೀಕರ ರಸ್ತೆ ಅಪಘಾತ: ಖ್ಯಾತ  ನಟಿ  ಸಾವು

ಭೀಕರ ರಸ್ತೆ ಅಪಘಾತ: ಖ್ಯಾತ ನಟಿ ಸಾವು

ಚಿತ್ರೀಕರಣದ ಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಖ್ಯಾತ ಭೋಜ್ ಪುರಿ ನಟಿ 45 ವರ್ಷದ ನಟಿ ಮನೀಶಾ ರೈ ಮೃತಪಟ್ಟಿರುವ ಘಟನೆ ನಡೆದಿದೆ. ತನ್ನ ಸಹವರ್ತಿ ಸಂಜೀವ್ ಮಿಶ್ರಾ ಜತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಸಂಜೀವ್ ಮಿಶ್ರಾ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗುವ ಸಲುವಾಗಿ ನಟಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ನಿರ್ಣಾಯಕ ಪಂದ್ಯ: ಮುಂಬೈಗೆ 175 ರನ್  ಟಾರ್ಗೆಟ್ ನೀಡಿದ ಡೆಲ್ಲಿ

ನಿರ್ಣಾಯಕ ಪಂದ್ಯ: ಮುಂಬೈಗೆ 175 ರನ್ ಟಾರ್ಗೆಟ್ ನೀಡಿದ ಡೆಲ್ಲಿ

ದೆಹಲಿಯ ಫಿರೂಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ ಮತ್ತು ಮುಂಬೈ ಇಂಡಿಯನ್ಸ್ ಟಿ-20 ಟೂರ್ನಿಯ ನಿರ್ಣಾಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ರಿಷಭ್ ಪಂತ್ ಆಕರ್ಷಕ ಅರ್ಧಶತಕದ (64) ನೆರವಿನೊಂದಿಗೆ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 174 ರನ್‌ ಟಾರ್ಗೆಟ್ ನೀಡಿದೆ. ವಿಜಯದ ಗುರಿ ಬೆನ್ನು ಹತ್ತಿರುವ ಮುಂಬೈ ಈಗಾಗಲೇ 12 ಓವರ್ ಗೆ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿ. ಆಟ ಮುಂದುವರೆಸಿದೆ.