Short News

ರಾಜ್ಯಪಾಲರ ನಿರ್ಣಯದ ವಿರುದ್ಧ ಮಧ್ಯರಾತ್ರಿ ಸುಪ್ರೀಂ ಬಾಗಿಲು ಬಡಿದ ಕಾಂಗ್ರೆಸ್‌

ರಾಜ್ಯಪಾಲರ ನಿರ್ಣಯದ ವಿರುದ್ಧ ಮಧ್ಯರಾತ್ರಿ ಸುಪ್ರೀಂ ಬಾಗಿಲು ಬಡಿದ ಕಾಂಗ್ರೆಸ್‌

ಬಹುಮತ ಇಲ್ಲದಿದ್ದರೂ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿರುವ ನಿರ್ಣಯದ ವಿರುದ್ಧ ಕಾಂಗ್ರೆಸ್‌ ಪಕ್ಷ ತಡ ರಾತ್ರಿ ಸುಪ್ರಿಂ ಕೋರ್ಟ್‌ ಬಾಗಿಲು ಬಡಿದಿದೆ. ಬುಧವಾರ ರಾತ್ರಿಯೇ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿ ಮಾಡಿರುವ ದೆಹಲಿ ಕಾಂಗ್ರೆಸ್ ನಿಯೋಗ ಕರ್ನಾಟಕ ರಾಜ್ಯದ ರಾಜ್ಯಪಾಲರ ನಿರ್ಣಯದ ವಿರುದ್ಧ ದೂರು ನೀಡಿದೆ. ರಾಜ್ಯಪಾಲರ ನಿರ್ಣಯ ಸಂವಿಧಾನಕ್ಕೆ ವಿರೋಧವಾದದ್ದು ಎಂದು ಕಾಂಗ್ರೆಸ್ ನಿಯೋಗ ಹೇಳಿದೆ.
ಜೆಡಿಎಸ್‌-ಕಾಂಗ್ರೆಸ್‌ನದ್ದು ಭ್ರಷ್ಟಾಚಾರಕ್ಕಾಗಿ ಮೈತ್ರಿ: ಪ್ರಕಾಶ್ ಜಾವಡೇಕರ್‌

ಜೆಡಿಎಸ್‌-ಕಾಂಗ್ರೆಸ್‌ನದ್ದು ಭ್ರಷ್ಟಾಚಾರಕ್ಕಾಗಿ ಮೈತ್ರಿ: ಪ್ರಕಾಶ್ ಜಾವಡೇಕರ್‌

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್‌ ಅವರು ಜೆಡಿಎಸ್-ಕಾಂಗ್ರೆಸ್‌ ಮೈತ್ರಿಯ ಮೇಲೆ ಹರಿಹಾಯ್ದರು. ಈ ಮೈತ್ರಿ ಆಗಿರುವುದು ಭ್ರಷ್ಟಾಚಾರಕ್ಕಾಗಿ ಎಂದ ಪ್ರಕಾಶ ಜಾವಡೇಕರ್, ಕಾಂಗ್ರೆಸ್‌ ಮಂತ್ರಿಗಳ ಹಗರಣದ ತನಿಖೆ ಮಾಡಬಾರದೆಂಬ 'ಡೀಲ್‌' ಕುದಿರಿಸಿಕೊಂಡು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೆಂಬಲ ನೀಡಿದೆ, ಇದು ವೈಚಾರಿಕ ಮೈತ್ರಿ ಅಲ್ಲ ಎಂದು ಅವರು ಆರೋಪಿಸಿದರು.
ಬೆಂಗಳೂರು ವಿರುದ್ಧ 30 ರನ್ ಗಳ ಜಯ ಸಾಧಿಸಿದ ರಾಜಸ್ತಾನ

ಬೆಂಗಳೂರು ವಿರುದ್ಧ 30 ರನ್ ಗಳ ಜಯ ಸಾಧಿಸಿದ ರಾಜಸ್ತಾನ

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿ ಬೆಂಗಳೂರಿಗೆ 165 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ್ದ ಬೆಂಗಳೂರು ನಿಗದಿತ ಸಮಯದಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ರಾಜಸ್ತಾನ ಬೆಂಗಳೂರು ವಿರುದ್ಧ ಬರೋಬ್ಬರಿ 30 ರನ್ ಗಳ ಜಯ ಸಾಧಿಸಿದೆ. ಆದರೆ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು 6 ವಿಕೆಟ್ ಸೋಲನುಭವಿಸಿತ್ತು.
ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜೀಂದರ್ ಸಿಂಗ್ ಆಯ್ಕೆ

ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜೀಂದರ್ ಸಿಂಗ್ ಆಯ್ಕೆ

ಹಾಕಿ ಇಂಡಿಯಾದ ಅಧ್ಯಕ್ಷರಾಗಿದ್ದ ಮರಿಯಮ್ಮ ಕೋಶಿ ಅವರು ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ರಾಜೀಂದರ್ ಸಿಂಗ್ ಆಯ್ಕೆಯಾಗಿದ್ದಾರೆ. ಹಿಂದೆ ಹಾಕಿ ಇಂಡಿಯಾದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ರಾಜೀಂದರ್ ಸಿಂಗ್ ಅವರು ಹಾಕಿ ಇಂಡಿಯಾ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಿಂದೆ ಹಾಕಿ ಇಂಡಿಯಾದ ಖಜಾಂಚಿಯಾಗಿಯೂ ಕೆಲಸ ಮಾಡಿದ್ದ ರಾಜೀಂದರ್ ಹಾಕಿ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಜಮ್ಮು-ಕಾಶ್ಮೀರ ಹಾಕಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು.