Short News

ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರೇ ಸಾಕು : ಪಿ.ರಮೇಶ್

ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರೇ ಸಾಕು : ಪಿ.ರಮೇಶ್

ಕಾಂಗ್ರೆಸ್‌ನಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ತುಘಲಕ್' ಎಂದು ಶುಕ್ರವಾರ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ನಾಯಕ ಪಿ.ರಮೇಶ್ ಆರೋಪ ಮಾಡಿದ್ದಾರೆ.  'ಸಿ.ವಿ.ರಾಮನ್ ನಗರದಿಂದ ನಾನು ಜೆಡಿಎಸ್ ಅಭ್ಯರ್ಥಿಯಾಗಿ  ಸ್ಪರ್ಧಿಸಲಿದ್ದೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣವಾಗುತ್ತಾರೆ' ಎಂದಿದ್ದಾರೆ. ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಬಯಸಿದ್ದೆ. ಆದರೆ, ಸಿದ್ದರಾಮಯ್ಯ ಅವರು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದರು' ಎಂದಿದ್ದಾರೆ.
ಕೆರೆಯಂತಾಗಿದ್ದ ಚಿನ್ನಸ್ವಾಮಿ ಮೈದಾನ ಮುಕ್ಕಾಲು ಗಂಟೆಯಲ್ಲೇ ಒಣಗಿತು!

ಕೆರೆಯಂತಾಗಿದ್ದ ಚಿನ್ನಸ್ವಾಮಿ ಮೈದಾನ ಮುಕ್ಕಾಲು ಗಂಟೆಯಲ್ಲೇ ಒಣಗಿತು!

ಇಡೀ ಜಗತ್ತಿನ ಯಾವ ಕ್ರಿಕೆಟ್ ಕ್ರೀಡಾಂಗಣದಲ್ಲಿಯೂ ಇಲ್ಲದಿರುವ ಸಬ್ ಏರ್ ಸಿಸ್ಟಂ ವ್ಯವಸ್ಥೆ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವುದು ನಿಮಗೆ ತಿಳಿದಿರುವ ವಿಚಾರ. ಸುರಿದ ಮಳೆ ನೀರು ಅಷ್ಟೇ ಬೇಗನೆ ಒಣಗುವ ವ್ಯವಸ್ಥೆ ಇದು. ಹೀಗಾಗಿ ಶನಿವಾರದ ಪಂದ್ಯಕ್ಕೂ ಮುನ್ನ ಮಳೆ ಸುರಿದು ನಿಂತರೂ ಆಟಕ್ಕೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದಿತ್ತು. ಚಿನ್ನಸ್ವಾಮಿ ಅಂಗಳ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಆದರೆ ಸಬ್ ಏರ್ ಸಿಸ್ಟಂ ಮೂಲಕ 3 ಲಕ್ಷ ಲೀಟರ್ ನೀರನ್ನು ಕೇವಲ 45 ನಿಮಿಷದಲ್ಲಿ ಸ್ಟೋರೇಜ್‌ ಟ್ಯಾಂಕ್‌ಗೆ ಪಂಪ್ ಮಾಡಿ ಮೈದಾನವನ್ನು ಒಣಗಿಸಲಾಯಿತು.
'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು!

'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು!

ನಿರ್ದೇಶಕ ಸೂರಿ 'ಕೆಂಡಸಂಪಿಗೆ' ಕಥೆಯನ್ನು ಮೂರು ಭಾಗದಲ್ಲಿ ಹೇಳುವ ಪ್ಲಾನ್ ಮಾಡಿದ್ದರು. ಅದೇ ರೀತಿ ಪಾರ್ಟ್ 2 'ಗಿಣಿಮರಿ ಕೇಸ್' ಚಿತ್ರ ಮೊದಲು 2015ರಲ್ಲಿ ಬಂದಿತ್ತು. ಇದರ ನಂತರ ಸೂರಿ ಪಾರ್ಟ್ 1 'ಕಾಗೆ ಬಂಗಾರ' ಶುರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸೂರಿ ಈ ಚಿತ್ರವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಡಿ ಮಾನಿಟೈಸೇಶನ್ ನಿಂದ 'ಕಾಗೆ ಬಂಗಾರ' ಸಿನಿಮಾವನ್ನು ಮಾಡಲು ಸೂರಿಗೆ ಸಾಧ್ಯ ಆಗುತ್ತಿಲ್ಲವಂತೆ. ಯಾಕಂದ್ರೆ, ''ಗಿಣಿಮರಿ ಕೇಸ್ ಕಥೆಯ ಭಾಗದ ಅಂತ್ಯದಲ್ಲಿ 40 ಕೋಟಿ ರೂಪಾಯಿ ಹಣವನ್ನು ಬಾವಿಗೆ ಸುರಿಯಲಾಗುತ್ತದೆ. ಆದರೆ ಆ ವಿಷಯ ಈಗ ಅಪ್ರಸ್ತುತ ಎನ್ನಿಸುತ್ತದೆ ಎಂದಿದ್ದಾರೆ.
ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ ಕರೆ

ನಟಿ ಕವಿತಾ ರಾಧೆ ಶ್ಯಾಮ್‌ಗೆ ಜೀವ ಬೆದರಿಕೆ ಕರೆ

ನಟಿ ಕವಿತಾ ರಾಧೆ ಶ್ಯಾಮ್‌ಗೆ ಈಗ ಜೀವ ಬೆದರಿಕೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗ್ತಿದೆ ಅನ್ನೋ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಡಿಯೋ ರಿಲೀಸ್ ಮಾಡಿದ್ದರು ಕವಿತಾ ರಾಧೆ ಶ್ಯಾಮ್. ತೆಲುಗು ನಟಿ ಶ್ರೀ ರೆಡ್ಡಿ ವಿರುದ್ಧ ನಟಿ ಕವಿತಾ ರಾಧೆಶ್ಯಾಮ್ ವಿಡಿಯೋ ಬಿಡುಗಡೆ ಮಾಡಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ ಶ್ರಿರೆಡ್ಡಿಗೆ ಟಾಂಗ್‌ ನೀಡಿದ್ದರು. ವಿಡಿಯೋ ಅಪ್‌‌‌‌ಲೋಡ್ ಮಾಡಿದ ನಂತರ ತನಗೆ ವಿಡಿಯೋ ಡಿಲೀಟ್ ಮಾಡುವಂತೆ ಕೆಲವು ನಂಬರ್‌ಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದಿದ್ದಾರೆ.