Short News

ತಕ್ಷಣ ಅಧಿವೇಶನ ಕರೆದು, ಪಕ್ಷಗಳಿಗೆ ಬಹುಮತ ಸಾಬೀತುಪಡಿಸಲು ಸೂಚಿಸಿ : ರಾಜ್ಯಪಾಲರಿಗೆ ಸಂತೋಷ್ ಹೆಗಡೆ

ತಕ್ಷಣ ಅಧಿವೇಶನ ಕರೆದು, ಪಕ್ಷಗಳಿಗೆ ಬಹುಮತ ಸಾಬೀತುಪಡಿಸಲು ಸೂಚಿಸಿ : ರಾಜ್ಯಪಾಲರಿಗೆ ಸಂತೋಷ್ ಹೆಗಡೆ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾರವರು ಈ ಕೂಡಲೇ ವಿಧಾನಸಭೆ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಲು ಸೂಚಿಸಬೇಕು ಎಂದು ಹೇಳಿದ್ದಾರೆ. ಗೋವಾ ಮತ್ತು ಮಣಿಪುರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗಬಾರದು. ಯಾವ ರಾಜಕೀಯ ಪಕ್ಷ ಅಥವಾ ಪಕ್ಷಗಳ ಗುಂಪು ಮೊದಲು ಬಹುಮತ ಸಾಬೀತು ಪಡಿಸುತ್ತದೋ ಅವರಿಗೆ ಸರ್ಕಾರ ರಚಿಸಲು ಅವಕಾಶ ಕೊಡಬೇಕು ಎಂದು ತಿಳಿಸಿದ್ದಾರೆ.
ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ನಿಯೋಜಿತ ಮುಖ್ಯಮಂತ್ರಿಯಾಗಿರುವ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ನಿಜ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರನ್ನು ಅಹ್ವಾನಿಸಿದ್ದಾರೆ.ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ರಜನೀಕಾಂತ್‌ ಒತ್ತಾಯಿಸಿರುವುದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ ಕರ್ನಾಟಕಕ್ಕೆ ಒಮ್ಮೆ ಭೇಟಿ ಕೊಡಿ. ಆಗ ನಿಮಗೆ ಇಲ್ಲಿನ ಸಂಪೂರ್ಣ ಚಿತ್ರಣ ಸಿಗಲಿದೆ ಎಂದಿದ್ದಾರೆ.
'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

ಶರಣ್ ನಟಿಸಿರುವ 'Rambo 2' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುಗರಿಗೆ ಸಖತ್ ಖುಷಿ ಕೊಡುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೇ ಚಿತ್ರತಂಡ ಪ್ರೇಕ್ಷಕರ ಮುಖದಲ್ಲಿ ಸಂತಸವನ್ನು ಮೂಡಿಸುತ್ತದೆ. ಕಾರಣ 'Rambo 2' ಸಿನಿಮಾವನ್ನು ನಟ, ನಿರ್ದೇಶಕ ಕಾಶೀನಾಥ್ ಅವರಿಗೆ ಸಮರ್ಪಣೆ ಮಾಡಲಾಗಿದೆ. 'Rambo 2' ಚಿತ್ರವನ್ನು ಕಾಶೀನಾಥ್ ಅವರಿಗೆ ಡೆಡಿಕೇಟ್ ಮಾಡಲಾಗಿದೆ. ಚಿತ್ರದ ಪ್ರಾರಂಭದಲ್ಲಿ ಬರುವ ಟೈಟಲ್ ಕಾರ್ಡ್ ನಲ್ಲಿ ಕಾಶೀನಾಥ್ ಕ್ಯಾಮರಾ ಹಿಡಿದ ಫೋಟೋವೊಂದು ತೆರೆ ಮೇಲೆ ಮೂಡುತ್ತದೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಇದನ್ನು ನೋಡಿಯೇ ಖುಷಿ ಆಗುತ್ತದೆ.
ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕರ್ನಾಟಕದ ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ದೆಹಲಿಯಲ್ಲಿ ಇಂದು ಭೇಟಿ ಆದರು. ಜೆಡಿಎಸ್ ಪಕ್ಷವು ಬಿಎಸ್‌ಪಿ ಜೊತೆ ಚುನಾವಣಾ ಪೂರ್ವವೇ ಮೈತ್ರಿ ಮಾಡಿಕೊಂಡಿತ್ತು, ಮಾಯಾವತಿ ಅವರು ಚುನಾವಣೆ ಸಮಯದಲ್ಲಿ ಮೂರು ಬಾರಿ ರಾಜ್ಯಕ್ಕೆ ಬಂದು ಜೆಡಿಎಸ್‌ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಮಾಯಾವತಿ ಅವರನ್ನು ಭೇಟಿ ಆದ ಕುಮಾರಸ್ವಾಮಿ ಅವರು, ಸಚಿವ ಸಂಪುಟ ರಚನೆ, ಗೆದ್ದ ಏಕೈಕ ಬಿಎಸ್‌ಪಿ ಶಾಸಕನಿಗೆ ಕೊಡತಕ್ಕ ಸಚಿವ ಸ್ಥಾನ, ಸರ್ಕಾರ ರಚನೆ ಮತ್ತು ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.