Short News

ಡಿಕೆಶಿ ನಂಬಿದ್ದಕ್ಕೆ ಮೋಸವಾಯ್ತು : ಮಂಜುಳಾ ನಾಯ್ಡು ಆಕ್ರೋಶ

ಡಿಕೆಶಿ ನಂಬಿದ್ದಕ್ಕೆ ಮೋಸವಾಯ್ತು : ಮಂಜುಳಾ ನಾಯ್ಡು ಆಕ್ರೋಶ

ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಪರ್ಧಿಸುವ ಆಸೆ ಹೊತ್ತಿದ್ದ ಜಿ ಮಂಜುಳಾ ನಾಯ್ಡುಗೆ ನಿರಾಶೆಯಾಗಿದೆ. ಮಾಜಿ ಮೇಯರ್ ಜಿ.ಪದ್ಮಾವತಿಗೆ ಟಿಕೆಟ್ ನೀಡಲಾಗಿದೆ. ಸಚಿವ ಡಿಕೆ.ಶಿವಕುಮಾರ್ ಅವರನ್ನು ನಂಬಿದ್ದಕ್ಕೆ ನನಗೆ ಮೋಸವಾಗಿಯೆಂದು ಮಂಜುಳಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದ 30ವರ್ಷದಿಂದ ದುಡಿದಿದ್ದಕ್ಕೆ ಏನು ಪ್ರತಿಫಲ ಸಿಕ್ಕಿಲ್ಲ,ಕಾಂಗ್ರೆಸ್ ನವರು ದುಡ್ಡಿಗೆ ಟಿಕೆಟ್ ಮಾರಿಕೊಂಡಿದ್ದಾರೆ. ನಿಷ್ಟಾವಂತರಿಗೆ ಇಲ್ಲಿ ಬೆಲೆಯಿಲ್ಲ. ಕಳೆದ ಚುನಾವಣೆಯಲ್ಲಿ ಕೆಜೆಪಿ ಪರ ಪ್ರಚಾರ ಮಾಡಿದ್ದ ಪದ್ಮಾವತಿ ಅವರಿಗೆ ಟಿಕೆಟ್ ನೀಡಲಾಗಿದೆ. ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ಡಿಕೆಶಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದಿದ್ದಾರೆ.  
ಚಲಿಸುತ್ತಿದ ಸ್ಕೂಟಿ ಹಿಂದೆ ಕೂತು ಹೋಂವರ್ಕ್ ಮಾಡುತ್ತಿರುವ ಬಾಲಕ, ವೀಡಿಯೋ ವೈರಲ್

ಚಲಿಸುತ್ತಿದ ಸ್ಕೂಟಿ ಹಿಂದೆ ಕೂತು ಹೋಂವರ್ಕ್ ಮಾಡುತ್ತಿರುವ ಬಾಲಕ, ವೀಡಿಯೋ ವೈರಲ್

ನಡುರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟಿ ಹಿಂಬದಿ ಕೂತು ವಿದ್ಯಾರ್ಥಿಯೊಬ್ಬ ಹೋಂವರ್ಕ್ ಮಾಡುತ್ತಿರುವ ವೀಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಯಿ ತನ್ನ ಇಬ್ಬರು ಮಕ್ಕಳ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದು, ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡಿರುವ ಮಗನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಳೆ. ಇದೇ ವೇಳೆ ಬಾಲಕ ಶಾಲೆಯ ಹೋಂವರ್ಕ್ ಅನ್ನು ಸ್ಕೂಟಿ ಹಿಂಬದಿಯಲ್ಲೇ ಕೂತು ಮಾಡುತ್ತಿದ್ದಾನೆ. ಇದನ್ನು ಕೇಂದ್ರ ಸಚಿವರಾದ ಕಿರಣ್ ರಿಜಿಜು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಅವರು ತಾಯಿ ಮತ್ತು ಮಗುವಿಗೆ ಸೆಲ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ.
ವಿಶ್ವದ ನೂರು ಪ್ರಭಾವಿಗಳ ಟೈಮ್ ಪಟ್ಟಿ ಸ್ಥಾನ ಪಡೆದ ನಟಿ ದೀಪಿಕಾ ಮತ್ತು ಕೊಹ್ಲಿ

ವಿಶ್ವದ ನೂರು ಪ್ರಭಾವಿಗಳ ಟೈಮ್ ಪಟ್ಟಿ ಸ್ಥಾನ ಪಡೆದ ನಟಿ ದೀಪಿಕಾ ಮತ್ತು ಕೊಹ್ಲಿ

ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿರುವ ಈ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿಶ್ವದ 100 ಪ್ರಭಾವಿಗಳ ಪಟ್ಟಿಯನ್ನು ಟೈಮ್ ಬಿಡುಗಡೆ ಮಾಡ್ಡಿದ್ದು, ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲ, ‘ಓಲಾ' ಟ್ಯಾಕ್ಸಿ ಕಂಪನಿಯ ಸಹ ಸಂಸ್ಥಾಪಕ ಭವಿಷ್ ಅಗರ್‌ವಾಲ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಭಾರತೀಯರಾಗಿದ್ದಾರೆ. ಇವರಿಬ್ಬರನ್ನೂ 2016ರ ಟೈಮ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ನಟಿ ಪ್ರಿಯಾಂಕ ಚೋಪ್ರಾ ಮತ್ತು ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ ಎಂದು ತಿಳಿಬೇಕಾ... ಹಾಗಿದ್ರೆ ಇಲ್ಲಿ ಕ್ಲಿಕ್ ಮಾಡಿ

ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ ಎಂದು ತಿಳಿಬೇಕಾ... ಹಾಗಿದ್ರೆ ಇಲ್ಲಿ ಕ್ಲಿಕ್ ಮಾಡಿ

ನಮ್ಮಲ್ಲಿ ಹಲವಾರು ಮಂದಿ, ಮಾನವನು ಏಳು ಬಾರಿ ಹುಟ್ಟುತ್ತಾನೆ ಮತ್ತು ಪ್ರತೀ ಬಾರಿ ಮೊದಲನೆಯ ರೂಪಕ್ಕಿಂತ ಭಿನ್ನವಾಗಿ ಅಥವಾ ಬೇರೆ ರೂಪದಲ್ಲಿ ಹುಟ್ಟುತ್ತಾನೆ ಎಂದು ನಂಬುತ್ತೇವೆ/ನಂಬಿದ್ದೇವೆ. ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಗಳ ಪ್ರಸ್ತುತ ವ್ಯಕ್ತಿತ್ವ ಮತ್ತು ಅವನ ರಾಶಿಚಕ್ರದ ಚಿಹ್ನೆಯ ಮೂಲಕ ಆತ ಹಿಂದಿನ ಜನ್ಮದಲ್ಲಿ ಏನಾಗಿದ್ದ ಎಂದು ಬಹಿರಂಗಪಡಿಸಬಹುದು. ಹಾಗೆಂದು ಜ್ಯೋತಿಷ್ಯಾಸ್ತ್ರಜ್ನರು ಹೇಳುತ್ತಾರೆ. ಇದು ನಿಮ್ಮ ಸೂರ್ಯಚಿಹ್ನೆಯನ್ನು ಆಧರಿಸಿರುತ್ತದೆ.ಹಾಗಾದರೆ ಬನ್ನಿ, ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದಿರಿ ಎಂದು ಪರಿಶೀಲಿಸಿ. ಹಾ ಅಷ್ಟೇ ಅಲ್ಲ ಶೇರ್ ಮಾಡಲು ಕೂಡಾ ಮರೆಯದಿರಿ