Short News

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು ಆರಂಭ

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸಂಜೆ ಕಾಲೇಜು ಆರಂಭ

ಕಲೆಯ ವಿವಿಧ ಪ್ರಕಾರಗಳಲ್ಲಿ ತರಬೇತಿ ನೀಡುವ ಮೂಲಕ ಯುವ ಕಲಾವಿದರನ್ನು ಕಲಾ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಕರ್ನಾಟಕ ಚಿತ್ರ ಕಲಾ ಪರಿಷತ್ತಿನಲ್ಲಿ ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭಗೊಂಡಿದೆ. ದೃಶ್ಯಕಲೆ ಕುರಿತಂತೆ ಸಾಮಾನ್ಯ ಕಾಲೇಜುಗಳು ಬೆಂಗಳೂರು ಸೇರಿದಂತೆ ಸೇಶದ ನಾನಾ ಭಾಗಗಳಲ್ಲಿದೆ, ಆದರೆ ಸಂಜೆ ಕಾಲೇಜು ಮೊದಲ ಬಾರಿಗೆ ಸ್ಥಾಪನೆಯಾಗಿದ್ದು, ಜುಲೈ ತಿಂಗಳಿಂದ ಪ್ರವೇಶ ಆರಂಭವಾಗಲಿದೆ. ತಲಾ 30 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5.30ರಿಂದ ರಾತ್ರಿ 9.30ರವರೆಗೆ ತರಗತಿಗಳು ನಡೆಯಲಿವೆ.
ಭೂತಾನ್ ಪ್ರವಾಸ, ಸಿಒಎ ನಿಂದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ನೋಟೀಸ್ ಜಾರಿ

ಭೂತಾನ್ ಪ್ರವಾಸ, ಸಿಒಎ ನಿಂದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ನೋಟೀಸ್ ಜಾರಿ

ಕ್ರಿಕೆಟ್ ಉಪಕರಣಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಭೂತಾನ್ ಪ್ರವಾಸಕ್ಕೆ ಬಿಸಿಸಿಐ ಕೈಗೊಂಡಿದ್ದ ತೀರ್ಮಾನ ಕುರಿತಂತೆ ವಿನೋದ್ ರಾಯ್ ನೇತೃತ್ವದ ಸಿಒಎ ಬಿಸಿಸಿಐ ನ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿಗೆ ನೋಟೀಸ್ ನೀಡಿದ್ದು, ಜುಲೈ 4 ರೊಳಗೆ ಉತ್ತರಿಸುವಂತೆ ಆದೇಶಿಸಿದೆ. ಪ್ರಮುಖವಾಗಿ ಎರಡು ಅಂಶಗಳಿಗೆ ಸಿಒಎ ವಿವರಣೆ ಕೇಳಿದೆ. ಒಂದು ಭೂತಾನ್ ಪ್ರವಾಸವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ. ಭೂತಾನ್ ಪ್ರವಾಸದ ಬಗ್ಗೆ ಪ್ರಸ್ತಾವನೆ ಆಗಲಿ, ಆಹ್ವಾನ ಬಂದಿರುವ ಬಗ್ಗೆಯಾಗಲಿ ದಾಖಲೆಯಿಲ್ಲ ಎಂದು. ಎರಡನೆಯದಾಗಿ ಪ್ರವಾಸಕ್ಕೂ ಮುನ್ನ ಏಕೆ ಸಿಒಎ ಅನುಮತಿ ಪಡೆಯಲಿಲ್ಲ ಎಂದು.
ನೀವು ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುತ್ತಿದ್ದರೆ ಈ ಶಾಕಿಂಗ್ ಸುದ್ದಿ ನೋಡಿ!

ನೀವು ಮೊಬೈಲ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುತ್ತಿದ್ದರೆ ಈ ಶಾಕಿಂಗ್ ಸುದ್ದಿ ನೋಡಿ!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ತೆರೆದು ಒಂದು ಸ್ಮಾರ್ಟ್‌ಫೋನ್ ಬಗ್ಗೆ ಸರ್ಚ್ ಮಾಡಿ ಹೊರಬಂದರೆ ಅಷ್ಟಕ್ಕೇ ಅದು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಗೂಗಲ್ ನಮಗೆ ಎಲ್ಲೆಲ್ಲಿ ಜಾಹಿರಾತು ನೀಡಲು ಸಾಧ್ಯವೋ ಅಲ್ಲೆಲ್ಲಾ ನಾವು ಹುಡುಕಿದ ಸ್ಮಾರ್ಟ್‌ಫೋನಿಗೆ ಸರಿಸಮನಾದ ವಿವಿಧ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜಾಹಿರಾತನ್ನು ಹರಿಬಿಡುತ್ತದೆ.ಇದರ ಅಥವನ್ನು ಸೂಕ್ಮವಾಗಿ ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಈ ಘಟನೆಯಿಂದ ನಿಮ್ಮ ಅನುಮತಿ ಇಲ್ಲದೇ ನಿಮ್ಮ ಖಾಸಗಿ ಮಾಹಿತಿ ಬೇರೆಯವರ ಪಾಲಾಗುತ್ತಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ.

ತಾತ್ಕಲಿಕ ಅಂತ್ಯ ಕಂಡ ಲಾರಿ ಮುಷ್ಕರ

ತಾತ್ಕಲಿಕ ಅಂತ್ಯ ಕಂಡ ಲಾರಿ ಮುಷ್ಕರ

ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ನಡೆಯುತ್ತಿರುವ ಟ್ರಕ್ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಸಂಜೆ ತಾತ್ಕಾಲಿಕ ಅಂತ್ಯ ಕಂಡಿದೆ.ಕೇಂದ್ರ ಮಂತ್ರಿಗಳು ಜೂನ್ 27 ರ ನಂತರ ಬೇಡಿಕೆಗಳ ಈಡೇರಿಕೆಯ ಬಗ್ಗೆ ಮಾತುಕತೆಯನ್ನು ನಡೆಸುವುದಾಗಿ ತಿಳಿಸಿರುವ ಹಿನ್ನಲೆಯಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಲಾರಿ ಮಾಲೀಕರ ಮುಷ್ಕರವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘಗಳ ಮಹಾಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಹೇಳಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more