Short News

ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಮೊದಲ ಟ್ವೀಟ್

ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಮೊದಲ ಟ್ವೀಟ್

"ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ. ನಾಡಿನ ಸರ್ವಾಂಗೀಣ ಏಳಿಗೆಯನ್ನು ಗುರಿಯಾಗಿಟ್ಟಕೊಂಡು ಕಾರ್ಯೋನ್ಮುಖವಾಗಿದ್ದೇವೆ" ಇದು ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪನವರ ಟ್ವೀಟ್. ಅವರು ಮುಖುಯಮಂತ್ರಿಯಾದ ನಂತರ ಮಾಡಿದ ಮೊದಲ ಟ್ವೀಟ್ ಸಹ ಹೌದು. ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪನವರು(75) ಇಂದು(ಮೇ 17) ಬೆಳಿಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟರೆ ಮೂರನೇ ಭಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ದಾಖಲೆ ಬರೆದಿದ್ದಾರೆ ಯಡಿಯೂರಪ್ಪ.
ಫ್ರಾನ್ಸ್ ನಲ್ಲಿ ಕರ್ನಾಟಕದ ಗಂಡುಕಲೆ ಯಕ್ಷಗಾನದ ಕಲರವ

ಫ್ರಾನ್ಸ್ ನಲ್ಲಿ ಕರ್ನಾಟಕದ ಗಂಡುಕಲೆ ಯಕ್ಷಗಾನದ ಕಲರವ

ಎಲ್ಲಿಯ ಕರಾವಳಿಯ ಗಂಡುಕಲೆ ಯಕ್ಷಗಾನ, ಎಲ್ಲಿಯ ಫ್ರಾನ್ಸ್ ದೇಶ? ಕಲೆಗೆ ದೇಶ ಭಾಷೆ ಗಡಿಯ ಹಂಗಿಲ್ಲ.... ವಿಷಯ ಏನಪ್ಪಾ ಅಂದ್ರೆ ವಿದೇಶಗಳಲ್ಲೂ ಕರ್ನಾಟಕದ ಶಾಸ್ತ್ರೀಯ ಕಲೆ ಯಕ್ಷಗಾನ ಸದ್ದು ಮಾಡುತ್ತಿದೆ. ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಫ್ರಾನ್ಸ್ ದೇಶದಲ್ಲಿ ಅಲ್ಲಿನ ಪುಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ಕನ್ನಡದ ಹೆಮ್ಮೆಯ ಕಲೆಯ ಪರಿಚಯ ಮಾಡುತ್ತಿದ್ದಾರೆ. ಒಂದು ತಿಂಗಳ ಫ್ರಾನ್ಸ್ ಪ್ರವಾಸದಲ್ಲಿರುವ ಸುವರ್ಣರು, ಯಕ್ಷಗುರು ಶೈಲೇಶ್ ನಾಯ್ಕ್ ಜೊತೆಗೂಡಿ, ಅಲ್ಲಿನ ಮಕ್ಕಳಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ಕಲೆ ವಿದೇಶಗಳಲ್ಲೂ ಕಲರವ ಮಾಡುತ್ತಿದೆ.
ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಈ ಸಾಲಿನ ಮೀನುಗಾರಿಕಾ ಋತುವಿನ ಮುಕ್ತಾಯ ಸಮೀಪಿಸಿದೆ. ಜೂನ್ 1ರಿಂದ 61 ದಿನಗಳ ಕಾಲ ಮೀನುಗಾರಿಕಾ ರಜೆ ಆರಂಭವಾಗಲಿರುವ ಹಿನ್ನಲೆಯಲ್ಲಿ ಆಳ ಸಮುದ್ರದಿಂದ ಮೀನುಗಾರಿಕಾ ದೋಣಿಗಳು ಕಡಲ ತಡಿಯತ್ತ ಮರಳುತ್ತಿವೆ. ಫಿಶ್ ಕ್ಯಾಚ್ ಈ ಬಾರಿ ಉತ್ತಮವಾಗಿದ್ದರೂ ಮೀನುಗಾರರ ದೋಣಿಗಳ ಸಂಖ್ಯೆ ಏರಿಕೆಯಿಂದ ಮೀನುಗಾರರಿಗೆ ನಿರೀಕ್ಷಿತ ಪ್ರಮಾಣದ ಲಾಭ ದೊರಕಿಲ್ಲ. ಅತ್ತ ಲಾಭವೂ ಇಲ್ಲದೇ ಇತ್ತ ನಷ್ಟವೂ ಇಲ್ಲದೇ ಸಾಧಾರಣ ಮೀನುಗಾರಿಕಾ ಋತು ಅಂತ್ಯಗೊಂಡಿದೆ. ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲ ಮಕ್ಕಳಿಗೆ ಮೀನುಗಾರಿಕಾ ರಜೆ ಆರಂಭವಾಗುತ್ತದೆ.
ಎಲೆಕ್ಷನ್ ಡ್ಯೂಟಿ: ಗೌರವ ಧನ ಹೆಚ್ಚಳ

ಎಲೆಕ್ಷನ್ ಡ್ಯೂಟಿ: ಗೌರವ ಧನ ಹೆಚ್ಚಳ

ಚುನಾವಣೆ ವೇಳೆ ಕಾರ್ಯನಿರ್ವಹಿಸುವ ಸರ್ಕಾರ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಂಭಾವನೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಚುನಾವಣಾ ಆಯೋಗದ ಕೆಲಸಗಳನ್ನು ಮಾಡುವಾಗ ಇದಕ್ಕೆ ಪ್ರತಿಯಾಗಿ ನೀಡುವ ಸಂಭಾವನೆ ಕಡಿಮೆ ಎಂಬ ದೂರುಗಳಿತ್ತು, ಆದರೀಗ ಹಾಲಿ ಪಾವತಿ ಮಾಡುತ್ತಿರುವ ದರದಲ್ಲಿ ಪರಿಷ್ಕರಣೆ ಮಾಡಿರುವುದು ಅಧಿಕಾರಿಗಳ ಸಂತೋಷಕ್ಕೆ ಕಾರಣವಾಗಿದೆ. ಸಂಚಾರಿ ಜಾಗೃತಾದಳಕ್ಕೆ ಸ್ಟಾಟಿಕ್ ಸರ್ವೆಲೆನ್ಸ್‌ ತಂಡಗಳಿಗೆ 30ದಿನಗಳ ಭತ್ಯೆಯನ್ನು 1200ರೂ.ನಿಂದ 6000ಕ್ಕೆ ಹೆಚ್ಚಿಸಲಾಗಿದೆ. ಚುನಾವಣಾ ದಿನ, ಮತ ಎಣಿಕೆ ದಿನ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಭತ್ಯೆಯನ್ನು 350ರೂ ನಿಂದ 500ರೂ.ಗಳಿಗೆ ಹೆಚ್ಚಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more