Short News

ಸಿದ್ದರಾಮಯ್ಯಗೆ ಕೆಪಿಸಿಸಿ ಸಾರಥ್ಯ ನೀಡಿ: ಎ.ಮಂಜು ಆಗ್ರಹ

ಸಿದ್ದರಾಮಯ್ಯಗೆ ಕೆಪಿಸಿಸಿ ಸಾರಥ್ಯ ನೀಡಿ: ಎ.ಮಂಜು ಆಗ್ರಹ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯವಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮೊದಲ ಆದ್ಯತೆ ಅವರಿಗೆ ನೀಡಬೇಕು ಎಂದು ಮಾಜಿ ಸಚಿವ ಎ. ಮಂಜು ಹೇಳಿದರು. ಗುರುವಾರ ಖಾಸಗಿ ಹೋಟೆಲ್‌ ಒಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜತೆಗೆ ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ್, ಕೆ.ಎಚ್. ಮುನಿಯಪ್ಪ ಅವರನ್ನೂ ಪರಿಗಣಿಸಬಹುದು. ಭವಿಷ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ ಇವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಯೋಚನೆ ಮಾಡುವ ಮೊದಲೇ ಮಾತನಾಡುವ ಮಂದಿ ಇವರು

ಯೋಚನೆ ಮಾಡುವ ಮೊದಲೇ ಮಾತನಾಡುವ ಮಂದಿ ಇವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ಮಾತನಾಡುವಾಗ ಅಥವಾ ತಮ್ಮ ವರ್ತನೆಯನ್ನು ತೋರುವಾಗ ಹಿಂದೆ ಮುಂದೆ ಯೋಚಿಸದೆಯೇ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಅದು ಆ ಸಂದರ್ಭಕ್ಕೆ ಅಗತ್ಯವಿದೆಯೇ? ಅದರಿಂದ ಬೇರೆಯವರ ಮನಸ್ಸಿಗೆ ನೋವುಂಟಾಗುವುದೇ? ಎನ್ನುವುದನ್ನು ಕೊಂಚವು ಚಿಂತಿಸುವುದಿಲ್ಲ. ಬಾಯಿಗೆ ಬಂದಿದ್ದು, ಮನಸ್ಸಿಗೆ ತೋಚಿದ್ದನ್ನು ಮಾಡಿ ಮುಗಿಸಿಬಿಡುತ್ತಾರೆ. ಕೆಲವರಲ್ಲಿ ತಮ್ಮ ವರ್ತನೆಯ ಬಗ್ಗೆ ಸೂಕ್ತ ಚಿಂತನೆಗಳಿರುತ್ತವೆ. ಜೊತೆಗೆ
ತಮ್ಮ ಮಾತಿನ ಮೇಲೆ ಹಿಡಿತವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಪತ್ನಿ ಮೇಲಿನ ಕೋಪಕ್ಕೆ ಮಗುವನ್ನು ತುಳಿದು ಕೊಂದ ತಂದೆ!

ಪತ್ನಿ ಮೇಲಿನ ಕೋಪಕ್ಕೆ ಮಗುವನ್ನು ತುಳಿದು ಕೊಂದ ತಂದೆ!

ಇತ್ತೀಚೆಗಷ್ಟೇ ತಂದೆಯರ ದಿನ ಆಚರಿಸಿ ಸಂಭ್ರಮಿಸಿದ್ದೇವೆ. ಆದರೆ ಅಪ್ಪಂದಿರ ದಿನಕ್ಕೆ ಅವಮಾನ ಮಾಡುವಂಥ ಘಟನೆಯೊಂದು ಉತ್ತರ ಪ್ರದೇಶದ ಸಂಭಾಲ್ ಎಂಬಲ್ಲಿ ನಡೆದಿದೆ. ಪತ್ನಿಯ ಮೇಲೆ ಕೋಪಿಸಿಕೊಂಡಿದ್ದ ಪತಿ ತನ್ನ ಒಂದು ತಿಂಗಳ ಮಗುವನ್ನು ಕಾಲಿನಲ್ಲಿ ತುಳಿದುಕೊಂದ ಘಟನೆ ಶುಕ್ರವಾರ ನಡೆದಿದೆ. ಯಾವುದೋ ವಿಷಯಕ್ಕಾಗಿ ಪತಿ-ಪತ್ನಿಯ ಮಧ್ಯೆ ಮಾತಿನ ಚಕಮಕಿ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೋಪಗೊಂಡ ಪತಿ, ತನ್ನ ಕೋಪವನ್ನು ಮಲಗಿದ್ದ ಒಂದು ತಿಂಗಳ ಪುಟ್ಟ ಕಂದನ ಮೇಲೆ ತೋರಿಸಿದ್ದಾನೆ. ಆ ಮಗುವನ್ನು ಕಾಲಿನಿಂದ ತುಳಿದು ಕೊಂದು ನಂತರ ಪರಾರಿಯಾಗಲು ಯತ್ನಿಸಿದ್ದಾನೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ: ಬಿಜೆಪಿಯಿಂದ ಶ್ರದ್ಧಾಂಜಲಿ

ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ: ಬಿಜೆಪಿಯಿಂದ ಶ್ರದ್ಧಾಂಜಲಿ

ಭಾರತೀಯ ಜನಸಂಘವನ್ನು ಸ್ಥಾಪಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ನಿಧನರಾಗಿ ಇಂದಿಗೆ 65 ವರ್ಷ. ಅವರು ನಿಧನರಾದ ದಿನವನ್ನು(ಜೂನ್ 23) ಬಿಜೆಪಿ ನಾಯಕರು ಬಲಿದಾನ ದಿನವನ್ನಾಗಿ ಆಚರಿಸಿ, ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದು ವಾಡಿಕೆ. ಈ ಬಾರಿಯೂ ಬಿಜೆಪಿಯ ಹಲವು ನಾಯಕರು ಮುಖರ್ಜಿ ಅವರ ಪುಣ್ಯತಿಥಿಯನ್ನು ಸ್ಮರಿಸಿದ್ದಾರೆ. ಭಾರತೀಯ ಜನಸಂಘವೇ ನಂತರ ಭಾರತೀಯ ಜನತಾಪಕ್ಷ(ಬಿಜೆಪಿ)ವಾಗಿ ಬದಲಾಗಿ, ಇದೀಗ ದೇಶದ ಬಹುಪಾಲು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more