Short News

ಚುನಾವಣೆಗೆ ಸ್ಪರ್ಧಿಸುವುದು ಖಚಿತ : ಗೋಪಾಲ ಕುಲಕರ್ಣಿ

ಚುನಾವಣೆಗೆ ಸ್ಪರ್ಧಿಸುವುದು ಖಚಿತ : ಗೋಪಾಲ ಕುಲಕರ್ಣಿ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ಅವರು ಜನರು ಮುಂಬರುವ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ, ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು. ರಾಷ್ಟ್ರೀಯ ಪಕ್ಷಗಳು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಜನ ಸಾಮಾನ್ಯರಿಗೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿ ನೀತಿ ಸಂಹಿತಿ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

ಯಾವುದೇ ವ್ಯಾಯಾಮದ ಮೊದಲು ಸ್ಟ್ರೆಚಿಂಗ್ ಮಾಡಲು ಸೂಚಿಸಲಾಗುತ್ತದೆ. ಇದು ಸ್ನಾಯುಗಳನ್ನು ಸಡಿಲಗೊಳಿಸುವುದು ಮಾತ್ರವಲ್ಲದೆ ಅದನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸುವುದು. ಇದರಿಂದ ವ್ಯಾಯಾಮದ ವೇಳೆ ಸ್ನಾಯುಗಳ ಮೇಲೆ ಬಲ ಬೀಳುವ ಅಪಾಯವು ಕಡಿಮೆಯಾಗುವುದು. ಸ್ವಲ್ಪ ನಡೆದಾಡಿ, ಸೈಕಲ್ ಓಡಿಸಿ, ಅಥವಾ ಸ್ವಲ್ಪ ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೆ ಅದರಿಂದ ಭಾರ ಎತ್ತುವಾಗ ಗಾಯಾಳುವಾಗದಂತೆ ದೇಹಕ್ಕೆ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುವುದು. ಇದು ಕ್ಯಾಲರಿ ದಹಿಸುವುದು ತುಂಬಾ ಕಡಿಮೆ. ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದಿಲ್ಲ. ಆದರೆ ದೇಹವನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸಲು ಇದು ನೆರವಾಗುವುದು.
ನಾಮಪತ್ರ ಅಂಗಿಕಾರ, ನಿಟ್ಟುಸಿರು ಬಿಟ್ಟ ಅಶೋಕ್ ಖೇಣಿ

ನಾಮಪತ್ರ ಅಂಗಿಕಾರ, ನಿಟ್ಟುಸಿರು ಬಿಟ್ಟ ಅಶೋಕ್ ಖೇಣಿ

ಬೀದರ್ ದಕ್ಷಿಣ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಖೇಣಿ ಅವರ ನಾಮಪತ್ರ ಅಡಕತ್ತರಿಯಲ್ಲಿತ್ತು ಆದರೆ ನಿನ್ನೆ ಅವರ ನಾಮಪತ್ರ ಅಂಗೀಕೃತ ಆಗುವ ಮೂಲಕ ಅಶೋಕ್ ಖೇಣಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಎಂಬುವರು ಖೇಣಿ ಅವರ ನಾಮಪತ್ರ ಅಂಗೀಕಾರ ಮಾಡದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನಲ್ಲಿ, ಅಶೋಕ್ ಖೇಣಿ ಅಮೆರಿಕದಲ್ಲಿ ಹೊಂದಿರುವ ನಿವಾಸದ ವಿಳಾಸ ಮತ್ತಿತರೆ ದಾಖಲೆಗಳನ್ನು ನೀಡಿ ಅಶೋಕ್ ಖೇಣಿ ಅವರು ಅಮೆರಿಕದ ನಿವಾಸಿ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಹಾಗಾಗಿ ಅವರ ನಾಮಪತ್ರವನ್ನು ತಿರಸ್ಕಾರ ಮಾಡಬೇಕು ಎಂದು ದೂರು ಸಲ್ಲಿಸಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಕಹಳೆ

ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಪ್ರಧಾನಿ ಮೋದಿ ಕಹಳೆ

ರಾಜ್ಯದಲ್ಲಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಗುರುವಾರ ನಮೋ ಆಪ್ ಮೂಲಕ ರಾಜ್ಯದ ಬಿಜೆಪಿ ಕಾರ್ಯಕರ್ತರ ಜತೆ ಸಂವಾದ ನಡೆಸಿದ ಮೋದಿ ಅವರು, ಅಭಿವೃದ್ಧಿ ಮಂತ್ರ ಚುನಾವಣಾ ಪ್ರಚಾರದ ಮೂಲ ಧ್ಯೇಯವಾಗಿರಬೇಕು ಎಂದು ಹೇಳಿದರು. 'ಅಭಿವೃದ್ಧಿ, ತ್ವರಿತ ಅಭಿವೃದ್ಧಿ ಮತ್ತು ಸಮಗ್ರ ಅಭಿವೃದ್ಧಿ'- ಇವು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಪಕ್ಷದ ಮೂರು ಅಂಶಗಳ ಕಾರ್ಯಸೂಚಿ. ದೇಶದ ರಾಜಕೀಯವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳಿಸಬೇಕು ಎಂದು ಅವರು ಕರೆ ನೀಡಿದರು. ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ಅದಕ್ಕೆ ತನ್ನ ಕೆಲಸಗಳ ಕುರಿತು ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದರು.