Short News

ಸರಕಾರ ರಚನೆಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ರಾಜ್ಯಪಾಲರ ಮುಂದಿನ ತೀರ್ಮಾನ

ಸರಕಾರ ರಚನೆಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ರಾಜ್ಯಪಾಲರ ಮುಂದಿನ ತೀರ್ಮಾನ

ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರಕಾರಕ್ಕೆ ಬೆಂಬಲ ಸೂಚಿಸಿ 117 ಶಾಸಕರು ಸಹಿ ಹಾಕಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವ ಭರವಸೆಯನ್ನು ಈ ವೇಳೆ ರಾಜ್ಯಪಾಲರು ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯಪಾಲರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಿಯೋಗ ಭೇಟಿಯಾಗಿ ಬಂದ ನಂತರ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಜಂಟಿಯಾಗಿ ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಎಚ್ಚರ, ರಾತ್ರಿ ಮಧ್ಯಪಾನ ಸೇವಿಸುವುದನ್ನು ಬಿಟ್ಟುಬಿಡಿ

ಎಚ್ಚರ, ರಾತ್ರಿ ಮಧ್ಯಪಾನ ಸೇವಿಸುವುದನ್ನು ಬಿಟ್ಟುಬಿಡಿ

ಮಲಗುವ ಮುನ್ನ ಆಲ್ಕೋಹಾಲ್ ಸೇವಿಸುವುದರಿಂದ ಕ್ಯಾಲೋರಿ ಕಡಿಮೆ ಮಾಡಲು ಸಾಧ್ಯವಿಲ್ಲ. ದೇಹವು ಆಲ್ಕೋಹಾಲನ್ನು ಚಯಾಪಚಯ ಕ್ರಿಯೆಗೆ ಒಳಪಡಿಸುತ್ತೆ.ಇದು ತೂಕ ಇಳಿಸುವ ಪ್ರಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಆದರೆ ಊಟಕ್ಕೂ ಮುನ್ನ ಒಂದು ಗ್ಲಾಸ್ ವೈನ್ ಸೇವಿಸುವುದು ಪರವಾಗಿಲ್ಲ, ಆದರೆ ಅದು ಮಲಗುವುದಕ್ಕೂ 3ಗಂಟೆಗಳ ಮುನ್ನವಾಗಿದ್ದರೆ ಮಾತ್ರ ಓಕೆ. ಎರಡನೆಯದಾಗಿ ರಾತ್ರಿ ಅತಿಯಾಗಿ ಆಹಾರ ಸೇವಿಸಿದರೆ, ಅದು ಜೀರ್ಣವಾಗಲು ದೇಹಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದು ಮಧ್ಯಪಾನ ಸೇವಿಸಿದಂತೆಯೇ ಸರಿ. ಅತಿಯಾಗಿ ಆಹಾರ ಸೇವಿಸಿದರೆ ಜೀರ್ಣಕ್ರಿಯೆ ತಡವಾಗಿ,ಆಹಾರವು ಕೊಬ್ಬಿನಾಂಶವಾಗಿ ದೇಹದಲ್ಲಿ ಹಾಗೆ ಉಳಿದು ದಪ್ಪವಾಗುತ್ತೀರಿ.
ನಿದ್ದೆಗೆ ನಿಮ್ಮ ಸಮಯ ಕೊಡಿ, ತೂಕ ಇಳಿಸಿ

ನಿದ್ದೆಗೆ ನಿಮ್ಮ ಸಮಯ ಕೊಡಿ, ತೂಕ ಇಳಿಸಿ

7-8 ಗಂಟೆಯ ನಿದ್ದೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಈ ನಿದ್ದೆಯು ಸರಿಯಾಗಿದ್ದರೆ,ನಿಮ್ಮ ಕ್ಯಾಲೋರಿಯನ್ನು ಕರಗಿಸಲು ಇದು ಸಹಾಯ. ಯಾರು ಸರಿಯಾಗಿ ವಿರಾಮ ತೆಗೆದುಕೊಳ್ಳುತ್ತಾರೋ, ಅವರು ಶೇಕಡಾ 5 ರಷ್ಟು ಪ್ರಮಾಣದ ಹೆಚ್ಚು ಪ್ರಮಾಣದ ಶಕ್ತಿಯನ್ನು ಕರಗಿಸುವ ಸಾಮರ್ಥ್ಯವನ್ನು ವಿರಾಮ ತೆಗೆದುಕೊಳ್ಳದೇ ಇರುವವರಿಗಿಂತ ಹೊಂದಿರುತ್ತಾರೆ ಅನ್ನುವುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿಯು ಶೇಕಡಾ 20 ರಷ್ಟು ಕ್ಯಾಲೋರಿಯನ್ನು ಊಟದ ನಂತರ ಕರಗಿಸಲು ಸಾಧ್ಯವಿದೆ. ಆದರೆ ಅತಿಯಾಗಿ ನಿದ್ರಿಸುವವರಲ್ಲಿ ಫ್ಯಾಟ್ ಸೆಲ್ ಗಳು ಕಡಿಮೆ ಸೂಕ್ಷ್ಮ ಮತಿಗಳಾಗುತ್ತವೆ ಮತ್ತು ಚುರುಕಾಗಿ ಇರುವುದಿಲ್ಲ.
ನಿರ್ದೇಶಕ ಪ್ರೇಮ್ ಈ ಚಿತ್ರವನ್ನ ಮಾಡಲೇಬಾರದಾಗಿತ್ತಂತೆ.!

ನಿರ್ದೇಶಕ ಪ್ರೇಮ್ ಈ ಚಿತ್ರವನ್ನ ಮಾಡಲೇಬಾರದಾಗಿತ್ತಂತೆ.!

'ಕರಿಯ','ಎಕ್ಸ್ ಕ್ಯೂಸ್ ಮಿ' ಮತ್ತು 'ಜೋಗಿ' ಚಿತ್ರಗಳನ್ನು ನಿರ್ದೇಶಿಸಿ,ಯಶಸ್ವಿಯಾಗಿ, 'ಹ್ಯಾಟ್ರಿಕ್ ಡೈರೆಕ್ಟರ್' ಎಂಬ ಹಣೆಪಟ್ಟಿ ಪಡೆದ ಪ್ರೇಮ್ ಬಳಿಕ 'ಪ್ರೀತಿ ಏಕೆ ಭೂಮಿ ಮೇಲಿದೆ?'ಎಂದು ಪ್ರಶ್ನಿಸುವ ಮೂಲಕ ನಾಯಕ ನಟರಾದರು. ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಪ್ರೀತಿ ಏಕೆ ಭೂಮಿ ಮೇಲಿದೆ?' ಸಿನಿಮಾ ಬಿಡುಗಡೆ ಆದ್ಮೇಲೆ ಮಕಾಡೆ ಮಲಗಿತು.ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ಪ್ರೇಮ್, ನಾಯಕನಾದ್ಮೇಲೆ ಮೊದಲ ಸೋಲು ಕಂಡರು. ಹೀಗಾಗಿ, 'ಪ್ರೀತಿ ಏಕೆ ಭೂಮಿ ಮೇಲಿದೆ.?' ಸಿನಿಮಾ ಮಾಡಲೇಬಾರದಿತ್ತು ಎಂದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.