Short News

ರಾಜ್ಯದ ಎಲ್ಲಾ ವಿವಿಗೆ ಒಂದೇ ಪಠ್ಯ, ಒಂದೇ ವೇಳಾಪಟ್ಟಿ ಎಂದ ಜಿಟಿಡಿ

ರಾಜ್ಯದ ಎಲ್ಲಾ ವಿವಿಗೆ ಒಂದೇ ಪಠ್ಯ, ಒಂದೇ ವೇಳಾಪಟ್ಟಿ ಎಂದ ಜಿಟಿಡಿ

ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಏಕರೂಪ ಪಠ್ಯಕ್ರಮ, ಖಾಲಿ ಹುದ್ದೆಗಳ ಭರ್ತಿ, ಎಲ್ಲ ವಿವಿಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೋರ್ಸ್‌ಗಳ ಆರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಪರಿಷತ್‌ಗೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಆರ್.ಪ್ರಸನ್ನಕುಮಾರ್ ಅವರ ಪರವಾಗಿ ಐವಾನ್ ಡಿಸೋಜಾ ಅವರು ಕೇಳಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾಸಗಿ ವಿವಿಗಳನ್ನು ಹೊರತುಪಡಿಸಿ ರಾಜ್ಯದ 19 ವಿವಿಗಳಲ್ಲಿ ರಾಜ್ಯಪಾಲರ ಅನುಮೋದನೆಯೊಂದಿಗೆ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ "ರಾಜಣ್ಣನ ಮಗ" ಮೂಲಕ ಮತ್ತೆ ಬಂದ್ರು ನಿರ್ದೇಶಕ ಕೋಲಾರ ಸೀನು

ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ "ರಾಜಣ್ಣನ ಮಗ" ಮೂಲಕ ಮತ್ತೆ ಬಂದ್ರು ನಿರ್ದೇಶಕ ಕೋಲಾರ ಸೀನು

'ಜಸ್ಟ್​ ಮದ್ವೇಲಿ' ಎನ್ನುವ ಚಿತ್ರ ನಿರ್ದೇಶಿಸಿದ್ದ ಕೋಲಾರ ಸೀನು, ಈಗ ನಾಲ್ಕು ವರ್ಷಗಳ ಬಳಿಕ ಮತ್ತೊಂದು ಸಿನೆಮಾ ಮಾಡಿದ್ದಾರೆ. ಈ ಚಿತ್ರಕ್ಕೆ 'ರಾಜಣ್ಣನ ಮಗ' ಎಂದು ಟೈಟಲ್ ಇಡಲಾಗಿದೆ. ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಅಪ್ಪಳಿಸಲಿರುವ 'ರಾಜಣ್ಣನ ಮಗ' ಚಿತ್ರದ ಟೀಸರ್​ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಆ್ಯಕ್ಷನ್, ಥ್ರಿಲ್ಲರ್​ನಿಂದ ಕೂಡಿರುವ ಟೀಸರ್​ಗೆ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರ ಗಮನ ಸೆಳೆದಿದೆ. ಬಿಡುಗಡೆಯಾದ ಕೇವಲ ಒಂದು ದಿನದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸಾರಿ ವೀಕ್ಷಣೆಯಾಗಿದೆ.
ತಲೆಹೊಟ್ಟು ನಿವಾರಣೆಗೆ ಒಂದೆರಡು ಚಮಚ ತೆಂಗಿನೆಣ್ಣೆ ಪರ್ಫೆಕ್ಟ್ ಮನೆಮದ್ದು

ತಲೆಹೊಟ್ಟು ನಿವಾರಣೆಗೆ ಒಂದೆರಡು ಚಮಚ ತೆಂಗಿನೆಣ್ಣೆ ಪರ್ಫೆಕ್ಟ್ ಮನೆಮದ್ದು

ನಿಮ್ಮ ತಲೆಯಲ್ಲಿರುವ ಕೊಳಕನ್ನು ಧೂಳನ್ನು ನಿವಾರಿಸಲು ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ಕೂದಲಿಗೆ ಹಚ್ಚುವುದು ಉತ್ತಮ ವಿಧಾನವಾಗಿದೆ. ತಲೆಯಲ್ಲಿರುವ ಈ ಕೊಳಕು ತಲೆಹೊಟ್ಟನ್ನು ಉಂಟುಮಾಡುತ್ತದೆ. ಆದ್ದರಿಂದ ಉತ್ತಮವಾಗಿ ಎಣ್ಣೆ ಮಸಾಜ್ ಅನ್ನು ನಿಮ್ಮ ಕೂದಲಿಗೆ ನೀವು ಮಾಡಬೇಕಾಗುತ್ತದೆ. ನಿಮ್ಮ ಕೂದಲಿನ ಕಿರಿಕಿರಿ ಮತ್ತು ತುರಿಕೆಯನ್ನು ನಿವಾರಣೆ ಮಾಡಲು ಲಿಂಬೆರಸ ಸೂಕ್ತವಾದುದು. ಇದು ತಲೆಹೊಟ್ಟನ್ನು ಬೇಗನೇ ನಿವಾರಿಸುತ್ತದೆ. ಹಾಗೇ ರೋಸ್‌ಮೇರಿ ಎಣ್ಣೆಯು ಅತ್ಯುನ್ನತ ಶಮನಕಾರಿ ಗುಣವನ್ನು ಹೊಂದಿದ್ದು ಇದನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡುವುದರಿಂದ ಇದು ತುರಿಕೆ ಮತ್ತು ಒಣ ತಲೆಬುಡದ ಸಮಸ್ಯೆ ನಿವಾರಿಸುತ್ತದೆ.
ಹುಬ್ಬಳ್ಳಿಯಲ್ಲಿ ದೇಶದ ಅತಿದೊಡ್ಡ ಸ್ಟಾರ್ಟ್ಅಪ್ ಇನ್‌ಕ್ಯುಬೇಷನ್ ಕೇಂದ್ರ

ಹುಬ್ಬಳ್ಳಿಯಲ್ಲಿ ದೇಶದ ಅತಿದೊಡ್ಡ ಸ್ಟಾರ್ಟ್ಅಪ್ ಇನ್‌ಕ್ಯುಬೇಷನ್ ಕೇಂದ್ರ

ದೇಶದಲ್ಲೇ ಅತಿ ದೊಡ್ಡ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್‌ ಕೇಂದ್ರವನ್ನು ನೀತಿ ಆಯೋಗದ ನೀತಿ ಅಧ್ಯಕ್ಷ ಅಮಿತಾಭ್ ಕಾಂತ್ ಬುಧವಾರ ಉದ್ಘಾಟಿಸಿದರು. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸ್ಯಾಂಡ್ ಬಾಕ್ಸ್ ಸ್ಡಾರ್ಟ್ಅಪ್‌ನ ಭಾರತದ ಅತಿದೊಡ್ಡ ತಂತ್ರಜ್ಞಾನ ವಾಣಿಜ್ಯೋದ್ಯಮ ಇನ್‌ಕ್ಯುಬೇಟರ್ ಇದಾಗಿದ್ದು, ಒಂದು ಲಕ್ಷ ಚದರ ಅಡಿ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ. ಬಳಿಕ ಮಾತನಾಡಿದ ಅಮಿತಾಭ್ ಕಾಂತ್, 'ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಕಾಯಕಲ್ಪ ನೀಡಲು ಭಾರತವು ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more