Short News

ಪರಿಶಿಷ್ಟ ಜಾತಿ, ಪಂಗಡ ನೌಕರರಿಗೆ ಸಂತಸದ ಸುದ್ದಿ

ಪರಿಶಿಷ್ಟ ಜಾತಿ, ಪಂಗಡ ನೌಕರರಿಗೆ ಸಂತಸದ ಸುದ್ದಿ

ಬಡ್ತಿ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ-2017ಯನ್ನು ಮರುಪರಿಶೀಲನೆ ಮಾಡುವುದಿಲ್ಲ. ಈಗಿರುವುದನ್ನೇ ಜಾರಿ ಮಾಡಲು ಬದ್ಧರಾಗಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದಾರೆ. ಪರಿಶಿಷ್ಟ ಜಾತಿ-ಪಂಗಡ ನೌಕರರ ಹಿತ ರಕ್ಷಣೆಗಾಗಿ ರಾಜ್ಯ ಸರ್ಕಾರ 2017ರಲ್ಲಿ ತಿದ್ದುಪಡಿ ಮಸೂದೆಯೊಂದನ್ನು ರೂಪಿಸಿದೆ. ಅದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರಪತಿಯವರಿಂದ ಅಂಗೀಕರಾರವಾಗಿದೆ. ಆದರೆ,ಕಾಯ್ದೆ ಜಾರಿಯಾಗಿಲ್ಲ. ಸರ್ಕಾರ ತಾನೇ ರೂಪಿಸಿದ ಕಾಯ್ದೆಯನ್ನು ಜಾರಿ ಮಾಡದಿದ್ದರೆ ಹೇಗೆ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಕೇಳಿದ ಪ್ರಶ್ನೆಗೆ ಬೈರೇಗೌಡ ಈ ಉತ್ತರ ನೀಡಿದ್ದಾರೆ.
ದಿ ವಿಲನ್ ಚಿತ್ರದ ಎರಡನೇ ಸಾಂಗ್ ಟಿಕ್... ಟಿಕ್... ಟಿಕ್... ರಿಲೀಸ್

ದಿ ವಿಲನ್ ಚಿತ್ರದ ಎರಡನೇ ಸಾಂಗ್ ಟಿಕ್... ಟಿಕ್... ಟಿಕ್... ರಿಲೀಸ್

ಚಂದನವನದ ಬಹುನಿರೀಕ್ಷಿತ ಚಿತ್ರ ದಿ ವಿಲನ್. ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ರವರು ಅಭಿನಯಿಸುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಭಾರೀ ಹವಾ ಸೃಷ್ಟಿ ಮಾಡಿದೆ. ಈಗ ಚಿತ್ರದ 2ನೇ ಹಾಡನ್ನು ರಿಲೀಸ್ ಮಾಡಿದೆ ಚಿತ್ರತಂಡ. 'ಟಿಕ್... ಟಿಕ್...ಟಿಕ್​​' ಅನ್ನೋ ಸಾಲುಗಳಿಂದ ಪ್ರಾರಂಭವಾಗುವ ಈ ಸಾಂಗ್​ಗೆ ಪ್ರಸಿದ್ಧ ಗಾಯಕ ಕೈಲಾಸ್​ ಖೇರ್​, ಕನ್ನಡದ ವಿಜಯ್ ಪ್ರಕಾಶ್​ ಹಾಗೂ ನಿರ್ದೇಶಕ ಪ್ರೇಮ್ ಅವರು ಧ್ವನಿಯಾಗಿದ್ದಾರೆ. ನಿನ್ನೆ ಮೊನ್ನೆ ಬಂದವರೆಲ್ಲ ನಂಬರ್​ ಒನ್ ಅಂತಾರೋ.. ಅವರವರೇ ಸಂಘ ಕಟ್ಕೋಂಡು ಬಿರುದು ಹಿಡಕೊಂಡ ನಿಂತವರೋ ಎನ್ನುವ ಸಾಲುಗಳು ಹಾಡಿನಲ್ಲಿವೆ.
ಹಾಕಿ ಆಡಲು ಹೆತ್ತವರು ಅನುಮತಿ ನಿರಾಕರಿಸಿದ್ದರು: ರಾಣಿ ಕಣ್ಣೀರು!

ಹಾಕಿ ಆಡಲು ಹೆತ್ತವರು ಅನುಮತಿ ನಿರಾಕರಿಸಿದ್ದರು: ರಾಣಿ ಕಣ್ಣೀರು!

ಲಂಡನ್ ನಲ್ಲಿ ನಾಳೆ(ಜು. 21)ಯಿಂದ ಆರಂಭಗೊಳ್ಳಲಿರುವ ವನಿತಾ ಹಾಕಿ ವಿಶ್ವಕಪ್ ಪಂದ್ಯಾಟದ ಪ್ರಚಾರಾರ್ಥವಾಗಿ ಲಂಡನ್ ನ ಥೀಮ್ಸ್ ನದಿ ದಡದಲ್ಲಿ, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 16 ರಾಷ್ಟ್ರಗಳ ಧ್ವಜಗಳ ಮಧ್ಯೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಭಾರತದ ನಾಯಕಿ ರಾಣಿ ರಾಂಪಾಲ್ ಕಣ್ಣಲ್ಲಿ ನೀರಾಡಿತು; ಆದರದು ಖುಷಿಯ ಕಣ್ಣೀರು. ರಾಣಿ ರಾಂಪಾಲ್ ತನ್ನ ಬಾಲ್ಯದ ದಿನಗಳನ್ನು ನೆನೆದುಕೊಂಡು ಕಣ್ಣೀರಿತ್ತರು. ಅದರಲ್ಲೂ ತನ್ನ ಮೊದಲ ಕೋಚ್ ಬಲದೇವ್ ಸಿಂಗ್ ಅವರನ್ನು ನೆನೆದು ಹೆಚ್ಚು ಭಾವುಕರಾದರು. ಯಾಕೆಂದರೆ ಬಾಲ್ಯದ ದಿನಗಳಲ್ಲಿ ತನ್ನ ಸಾಧನೆಗೆ ಹೆಚ್ಚು ಬೆಂಗಾವಲಾಗಿ ನಿಂತವರು ಬಲದೇವ್ ಎಂದು ರಾಣಿ ತಿಳಿಸಿದರು.
ಜು.22 ರಂದು 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಪುಸ್ತಕ ಬಿಡುಗಡೆ

ಜು.22 ರಂದು 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಪುಸ್ತಕ ಬಿಡುಗಡೆ

ಕಂಪ್ಯೂಟರ್ ಬಳಕೆ ಎಂಬುದು ಹೊಸ ತಲೆಮಾರಿನ 'ಅತ್ಯವಶ್ಯಕ'ಗಳಲ್ಲೊಂದಾಗಿರುವ ಈ ಹೊತ್ತಲ್ಲಿ, ಕಂಪ್ಯೂಟರ್ ಸಾಕ್ಷರತೆ ಪ್ರತಿಯೊಬ್ಬರಿಗೂ ಅನಿವಾರ್ಯ. ಅದಕ್ಕೆಂದೇ ಕಂಪ್ಯೂಟರ್ ಕುರಿತು ಕನ್ನಡ ಭಾಷೆಯಲ್ಲಿಯೇ ಸಮಗ್ರ ಮಾಹಿತಿ ನೀಡುವ ಪ್ರಯತ್ನವಾಗಿ 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಎಂಬ ಪುಸ್ತಕವನ್ನು ವೃತ್ತಿಯಲ್ಲಿ ಉಪನ್ಯಾಸಕರಾದ ಪ್ರೊ.ಮಹದೇವಯ್ಯ ಅವರು ಹೊರತರುತ್ತಿದ್ದಾರೆ. ಜುಲೈ 22, ಭಾನುವಾರದಂದು ಬೆಳಿಗ್ಗೆ 10:30 ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜ ಪರಿಷನ್ಮಂದಿರದಲ್ಲಿ (ಚಾಮರಾಜಪೇಟೆ) ಪುಸ್ತಕ ಬಿಡುಗಡೆಗೊಳ್ಳಲಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more