Short News

ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಇಬ್ಬರ ಸೆರೆ

ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಇಬ್ಬರ ಸೆರೆ

ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಒರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿಯ ಮನೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಂಗಳೂರು ಹೊರವಲಯದ ಕೊಟ್ಟಾರ ಚೌಕಿ ಪಂಪ್ ಹೌಸ್ ಬಳಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಭಾರತವನ್ನು ತಾಲಿಬಾನ್ ಹಿಂದೂ ಧರ್ಮ ಮಾಡಲು ಹೊರಟಿದೆ ಬಿಜೆಪಿ: ಮಮತಾ ಬ್ಯಾನರ್ಜಿ

ಭಾರತವನ್ನು ತಾಲಿಬಾನ್ ಹಿಂದೂ ಧರ್ಮ ಮಾಡಲು ಹೊರಟಿದೆ ಬಿಜೆಪಿ: ಮಮತಾ ಬ್ಯಾನರ್ಜಿ

ಬಿಜೆಪಿ ದೇಶದಲ್ಲಿ ತಾಲಿಬಾನ್ ಹಿಂದೂ ಧರ್ಮ ಮತ್ತು ತಾಲಿಬಾನ್ ಕೋಮುವಾದವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದಕ್ಕಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂದು ಪಣ ತೊಟ್ಟಿದ್ದಾರೆ. ರಾಜಸ್ತಾನದ ಅಲ್ವರ್ ಜಿಲ್ಲೆಯಲ್ಲಿ 28 ವರ್ಷದ ಅಕ್ಬರ್ ಖಾನ್ ಎಂಬ ಯುವಕ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ಸಂಶಯದ ಮೇಲೆ ಸಾಮೂಹಿಕ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿ ಈ ಹೇಳಿಕೆ ನೀಡಿದ್ದಾರೆ. ಜೊತೆಗೆ ಬಿಜೆಪಿಯನ್ನು ಓಡಿಸಿ, ದೇಶ ರಕ್ಷಿಸಿ ಎಂಬ ಸಾಮೂಹಿಕ ರ್ಯಾಲಿಗೆ ಕರೆ ನೀಡಿದ್ದಾರೆ.
ಗೇಮಿಂಗ್‌ಗೆ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು..!

ಗೇಮಿಂಗ್‌ಗೆ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು..!

ಮೆಮೊರಿ ಮತ್ತು ಪ್ರೊಸೆಸರ್ ಗಳ ವಿಚಾರದಲ್ಲಿ ವರ್ಷದಿಂದ ವರ್ಷಕ್ಕೆ ಸ್ಮಾರ್ಟ್ ಫೋನ್ ಗಳು ಅಭಿವೃದ್ಧಿ ಹೊಂದುತ್ತಲೇ ಇದೆ. ಇತ್ತೀಚೆಗಿನ ಮೊಬೈಲ್ ನಗಳು ಗ್ರಾಫಿಕ್ ನಲ್ಲಿ ಅಧ್ಬುತವಾಗಿರುವ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಆಟಗಳನ್ನು ಆಡುವುದಕ್ಕೆ ಸಹಕಾರ ನೀಡುತ್ತವೆ. ಹೊಸ ಜನರೇಷನ್ನಿನ ಸ್ಪೆಷಲೈಸ್ಟ್ ಫೋನ್ ಗಳು ಗೇಮ್ ಗಳಿಗೆ ಹೇಳಿ ಮಾಡಿಸಿರುವಂತೆಯೇ ರೂಪಗೊಂಡು ಹೊರಬರುವುದಿದೆ. ಹಾಗಾದ್ರೆ 2018 ರಲ್ಲಿ ಯಾವೆಲ್ಲ ಹೊಸ ಫೋನ್ ಗಳು ಗೇಮಿಂಗ್ ಗೆ ಅತ್ಯದ್ಭುತವಾಗಿವೆ ಎಂಬ ಬಗ್ಗೆ ನಾವೊಂದು ಪಟ್ಟಿ ತಯಾರಿಸಿದ್ದೇವೆ. ಆ ಪಟ್ಟಿ ಇಲ್ಲಿದೆ. ನೀವೂ ಒಮ್ಮೆ ಕಣ್ಣಾಡಿಸಿ.

ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ : ಭಾರತದ  ಲಕ್ಷಯ ಸೇನ್ ಗೆ ಬಂಗಾರದ ಪದಕ

ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ : ಭಾರತದ ಲಕ್ಷಯ ಸೇನ್ ಗೆ ಬಂಗಾರದ ಪದಕ

ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷಯ ಸೇನ್ ಚಿನ್ನ ಗೆದ್ದುಕೊಂಡಿದ್ದಾರೆ. ಇಂಡೋನೇಷಿಯಾದ ಅಗ್ರ ಶ್ರೇಯಾಂಕಿತ ಆಟಗಾರ ಕುನ್ಲವುತ್ ವಿಟಿದಾರನ್ ಅವರ ವಿರುದ್ಧ 21-19, 21-18 ಅಂತರದ ಗೆಲುವು ಸಾಧಿಸಿದ ಸೇನ್ ಆರು ವರ್ಷದ ಬಳಿಕ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಗೌತಮ್ ಠಾಕೂರ್ - ಚಿನ್ನ- 1965, ಪ್ರಣವ್ ಚೋಪ್ರಾ/ ಪ್ರಜ್ಕ್ತಾ ಸಾವಂತ್ - ಕಂಚು - 2009, ಸಮೀರ್ ವರ್ಮಾ -ಬೆಳ್ಳಿ - 2011, ಪಿವಿ ಸಿಂಧೂ 2011ರಲ್ಲಿ ಕಂಚು ಮತ್ತು 2012ರಲ್ಲಿ ಚಿನ್ನ ಗೆದ್ದಿದ್ದಾರೆ. ಸಮೀರ್ ವರ್ಮಾ - ಕಂಚು - 2012 ರಲ್ಲಿ ಗೆದ್ದಿದ್ದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more