Short News

ವ್ಯಾಲೆಂಟೈನ್ಸ್‌ ಡೇ ಬದಲು ಮಾತೃ-ಪಿತೃ ಪೂಜನೀಯ ದಿನ ಆಚರಿಸಲು ಕರೆ

ವ್ಯಾಲೆಂಟೈನ್ಸ್‌ ಡೇ ಬದಲು ಮಾತೃ-ಪಿತೃ ಪೂಜನೀಯ ದಿನ ಆಚರಿಸಲು ಕರೆ

ನಾಳೆ ಫೆಬ್ರವರಿ 14. ವ್ಯಾಲೆಂಟೈನ್ಸ್‌ ಡೇ; ಪ್ರೇಮಿಗಳ ಹಬ್ಬ. ವ್ಯಾಲೆಂಟೈನ್ಸ್‌ ಡೇಗಾಗಿ ಯುವ ಮನಸ್ಸುಗಳು ಮಿಡಿಯಲಾರಂಭಿಸಿವೆ. ಹಿಂದೂ ಪರ ಸಂಘಟನೆಗಳ ವಿರೋಧದ ನಡುವೆಯೂ ಪ್ರೇಮ ನಿವೇದನೆಗಾಗಿ ಕಾತರದಿಂದ ಕಾಯುತ್ತಿವೆ.

ಆದರೆ, ಹಿಂದೂ ಜನ ಜಾಗೃತಿ ಸಮಿತಿಯು ವ್ಯಾಲೆಂಟೈನ್ಸ್‌ ಡೇಯನ್ನು 'ಮಾತೃ-ಪಿತೃ ಪೂಜನೀಯ ದಿನ'ವಾಗಿ ಆಚರಿಸಲು ಕರೆ ನೀಡಿದೆ.

ವ್ಯಾಲೆಂಟೈನ್ಸ್‌ ಡೇ ಹೆಸರಿನಲ್ಲಿ ನಡೆಯುವ ಅನೈತಿಕ ಕೃತ್ಯಗಳನ್ನು ತಡೆಯಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಮಾತೃ-ಪಿತೃ ಪೂಜನೀಯ ದಿನವಾಗಿ ಆಚರಿಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಕರ್ನಾಟಕ ಎಲೆಕ್ಷನ್  : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್

ಕರ್ನಾಟಕ ಎಲೆಕ್ಷನ್ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಶುಕ್ರವಾರ ಜೆಡಿಎಸ್‌ 58 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ವಲಸೆ ಬಂದ ಹಲವು ನಾಯಕರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜಿ.ಎಚ್.ರಾಮಚಂದ್ರ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ನಟ ಶಶಿಕುಮಾರ್ ಹೊಸದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ. 
ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ (impeachment) ನಿಲುವಳಿಯನ್ನು ಕಾಂಗ್ರೆಸ್ ನೇತೃತ್ವದ ಏಳು ವಿಪಕ್ಷಗಳು ಮಂಡಿಸಿವೆ.

ಭಾರತೀಯ ಸಂವಿಧಾನದ 217 ಮತ್ತು 124(4)ನೇ ವಿಧಿಯ ಅಡಿಯಲ್ಲಿ ದೀಪಕ್ ಮಿಶ್ರಾ ಅವರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿ ಮಹಾಭಿಯೋಗ ನಿಲುವಳಿ ಮಂಡಿಸಲಾಗಿದೆ.

ಕಾಂಗ್ರೆಸ್, ನ್ಯಾಶ್ನಲ್ ಕಾಂಗ್ರೆಸ್ ಪಕ್ಷ, ಸಿಪಿಐ-ಎಂ ಮತ್ತು ಸಿಪಿಐ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳು ಈ ನಿಲುವಳಿಗೆ ಸಹಿ ಮಾಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ್, '64 ಸಂಸದರು ಈ ನಿಲುವಳಿಗೆ ಸಹಿ ಮಾಡಿದ್ದಾರೆ.

ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!

ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!

ಅತಿಯಾದ ಫೋನ್ ಬಳಕೆಯ ಚಟ ತಪ್ಪಿಸುವ ಸಲುವಾಗಿ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆಯು ಒಂದು ಉಪಾಯ ಹೂಡಿದ್ದು, ಥೇಟ್ ಫೋನ್‌ನಂತೆಯೇ ಕಾಣುವ, ಫೋನ್‌ನಷ್ಟೇ ಅಳತೆಯದ್ದಾಗಿರುವ, ಆದರೆ ಫೋನ್‌ನಿಂದ ಮನಸ್ಸನ್ನು ದೂರವುಳಿಸುವ ಒಂದು ಪುಟ್ಟ ಪುಸ್ತಕವನ್ನು ಹೊರತಂದಿದೆ. ಅದಕ್ಕೆ 'ಫೋನ್ ಡಿಟಾಕ್ಸ್' ಎಂದು ಹೆಸರಿಟ್ಟಿದೆ. 'ಈ ಫೋನ್ ಡಿಟಾಕ್ಸ್ ಅನ್ನು ನಾವೆಷ್ಟು ಫೋನ್‌ಗಳನ್ನು ಪ್ರೀತಿಸುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ತಯಾರು ಮಾಡಿರುವುದಾಗಿ ಹೇಳಿಕೊಡಿರುವ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆ, ಮೊಬೈಲ್ ಬಿಟ್ಟು ಅದರ ಜಾಗದಲ್ಲಿ ಈ ಪುಸ್ತಕ ಇಟ್ಟುಕೊಂಡರೆ, ಅದರಿಂದಾದ ಬದಲಾವಣೆ ನಿಮಗೇ ಗೋಚರಿಸೀತು ಎಂದು ಹೇಳಿಕೊಂಡಿದೆ.