Short News

ಹುಬ್ಬಳ್ಳಿ ಯುವಕರಿಂದ ವಿನೂತನ ರೀತಿಯಲ್ಲಿ ಚುನಾವಣಾ ಪ್ರಚಾರ

ಹುಬ್ಬಳ್ಳಿ ಯುವಕರಿಂದ ವಿನೂತನ ರೀತಿಯಲ್ಲಿ ಚುನಾವಣಾ ಪ್ರಚಾರ

ಎಲ್ಲ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಯೂಟ್ಯುಬ್, ಫೇಸ್ ಬುಕ್ ನಲ್ಲಿಯೂ ಪ್ರಚುರಪಡಿಸುತ್ತಿರುವುದು ಗೊತ್ತಿರುವ ವಿಷಯ. ಆದರೆ ಹುಬ್ಬಳಿಯಲ್ಲಿ ಆಮ್ ಆದ್ಮಿ ಬೆಂಬಲಿಗರು ಹೊಸ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿರುವುದು ಹೊಸ ವಿಷಯ. ಹೌದು, ಹುಬ್ಬಳ್ಳಿಯಲ್ಲಿ ಯುವಪಡೆಯೊಂದು ಸ್ವಚ್ಛ ರಾಜಕಾರಣ ಬೆಂಬಲಿಸುತ್ತಾ ವಿಭಿನ್ನ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸತತ ಮೂರು ದಿನಗಳಿಂದ ಹುಬ್ಬಳ್ಳಿಯ ಹಲವೆಡೆ ಫ್ಲಾಶ್-ಮಾಬ್ (ಬೀದಿ ನೃತ್ಯ) ಆಯೋಜಿಸಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
ನರೋದಾ ಪಾಟಿಯಾ ನರಮೇಧ ಪ್ರಕರಣ: ಸಚಿವೆ ಕೊಡ್ನಾನಿ ನಿರ್ದೋಷಿ, ಮಿಕ್ಕವರ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ

ನರೋದಾ ಪಾಟಿಯಾ ನರಮೇಧ ಪ್ರಕರಣ: ಸಚಿವೆ ಕೊಡ್ನಾನಿ ನಿರ್ದೋಷಿ, ಮಿಕ್ಕವರ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ

ಗುಜರಾತ್ ನ ನರೋದಾ ಪಾಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ನಿರ್ದೋಷಿ ಎಂದು ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. 2002ರಲ್ಲಿ ನಡೆದ ನರೋದಾ ಪಾಟಿಯಾ ನರಮೇಧದಲ್ಲಿ 97 ಮಂದಿಯ ಹತ್ಯೆಯಾಗಿತ್ತು. ಈ ಸಂಬಂಧ ಭಜರಂಗ ದಳದ ನಾಯಕ ಬಾಬು ಭಜರಂಗಿ ಅವರು ಸೇರಿದಂತೆ ಒಟ್ಟು 32 ಮಂದಿ ತಪ್ಪಿತಸ್ಥರೆಂದು ನ್ಯಾಯಲಯ ತೀರ್ಪು ನೀಡಿತ್ತು. ಕೊಡ್ನಾನಿಗೆ 28 ತಿಂಗಳ ಸೆರೆವಾಸ ವಿಧಿಸಿತ್ತು. ಇಂದು ತೀರ್ಪು ನೀಡಿದ ಗುಜರಾತ್ ಹೈಕೋರ್ಟ್ ಮಾಯಾಬೆನ್ ಕೊಡ್ನಾನಿ ನಿರ್ದೋಷಿ ಎಂದಿದ್ದು, ಭಜರಂಗಿ ಸೇರಿದಂತೆ ಉಳಿದ 31 ಆರೋಪಿಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
6,999 ರೂ ಗೆ ಪ್ಯಾನಸೋನಿಕ್ ಪಿ101  ಸ್ಮಾರ್ಟ್‌ಫೋನ್  ರಿಲೀಸ್

6,999 ರೂ ಗೆ ಪ್ಯಾನಸೋನಿಕ್ ಪಿ101 ಸ್ಮಾರ್ಟ್‌ಫೋನ್ ರಿಲೀಸ್

ಜಪಾನ್ ಮೂಲದ ದೈತ್ಯ ಎಲೆಕ್ಟ್ರಾನಿಕ್ ಸಂಸ್ಥೆ ಪ್ಯಾನಸೋನಿಕ್ ಅತಿ ನೂತನ ಪಿ101 ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಫೋನ್ ಬೆಲೆ 6,999 ರೂ. , 2,000 ರೂ.ಗಳ ಕ್ಯಾಶ್‌ಬ್ಯಾಕ್, ಐಡಿಯಾ ಸೆಲ್ಯೂಲರ್‌ನಿಂದ 60ಜಿಬಿ ಡೇಟಾ ಆಫರ್ ಇದರಲ್ಲಿದೆ. 5.45 ಇಂಚುಗಳ ಫುಲ್ ಸ್ಕ್ರೀನ್ , ಕ್ವಾಡ್ ಕೋರ್ ಮೀಡಿಯಾಟೆಕ್ MT6737 ಪ್ರೊಸೆಸರ್ ಡಿಸ್‌ಪ್ಲೇ, 2GB RAM, 16GB ಇಂಟರ್ನಲ್ ಸ್ಟೋರೆಜ್, 8MP ರಿಯರ್ ಕ್ಯಾಮೆರಾ ಜತೆ ಎಲ್‌ಇಡಿ ಫ್ಲ್ಯಾಶ್, 5MP ಫ್ರಂಟ್ ಕ್ಯಾಮೆರಾ ಮತ್ತು 2500mAh ಬ್ಯಾಟರಿ ಸಾಮರ್ಥ್ಯವಿದೆ.
ಫಾರ್ಚೂನ್‌ ನಿಯತಕಾಲಿಯ ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ಮೂವರಿಗೆ ಸ್ಥಾನ

ಫಾರ್ಚೂನ್‌ ನಿಯತಕಾಲಿಯ ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ಮೂವರಿಗೆ ಸ್ಥಾನ

ಫಾರ್ಚೂನ್‌ ನಿಯತಕಾಲಿಕೆ ಪ್ರಕಟಿಸಿರುವ 2018ರ ವಿಶ್ವದ ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಸ್ಥಾನ ಪಡೆದಿದ್ದಾರೆ. ವಿಶ್ವದ 50 ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ಭಾರತದ ಮಾನವ ಹಕ್ಕುಗಳ ಹೋರಾಟಗಾರ್ತಿ ಇಂದಿರಾ ಜೈಸಿಂಗ್(20ನೇ), ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ(43ನೇ ಸ್ಥಾನ) ಅವರೂ ಕೂಡ ಇದ್ದಾರೆ. ಮುಕೇಶ್‌ ಅಂಬಾನಿ ಅವರು ಅಗ್ಗದ ದರದಲ್ಲಿ ಮೊಬೈಲ್‌ ಡೇಟಾ ಒದಗಿಸಿ ಎರಡು ವರ್ಷಗಳ ಅಲ್ಪಾವಧಿಯಲ್ಲಿ ದೇಶದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಗಣನೀಯ ಬದಲಾವಣೆ ತಂದಿದ್ದಾರೆ ಎಂದು ನಿಯತಕಾಲಿಕೆಯು ವರ್ಣನೆ ಮಾಡಿದೆ ಈ ಪಟ್ಟಿಯಲ್ಲಿ ಅವರು 24ನೇ ಸ್ಥಾನ ಪಡೆದಿದ್ದಾರೆ.