Short News

ಮಹಿಳಾ ಮತದಾರರ ಪ್ರಮಾಣದಲ್ಲಿ ಹೆಚ್ಚಳ

ಮಹಿಳಾ ಮತದಾರರ ಪ್ರಮಾಣದಲ್ಲಿ ಹೆಚ್ಚಳ

2018ರ ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ 4,95,56,059 ಮತದಾರರಿದ್ದು, ಅವರಲ್ಲಿ ಮಹಿಳೆಯರು 2,44,72,288 ಮಂದಿ ಇದ್ದಾರೆ. ಬೆಂಗಳೂರಿನಲ್ಲಿ 41,92,706 ಮಹಿಳಾ ಮತದಾರರಿದ್ದಾರೆ. 46,04,190 ಪುರುಷ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 2013ರ ಮತದಾರರ ಪಟ್ಟಿಗೆ ಹೋಲಿಸಿದರೆ ಈ ಸಲದ ಪಟ್ಟಿಯ ಪರಿಷ್ಕರಣೆಯಲ್ಲಿ ಮಹಿಳಾ ಮತದಾರರ ನೋಂದಣಿ ಪ್ರಮಾಣದಲ್ಲಿ ಶೇ.13ರಷ್ಟು ಹೆಚ್ಚಾಗಿದದ್ದು, ಮಹಿಳೆಯರಲ್ಲಿ ಮತದಾನದ ಕುತರಿತು ಜಾಗೃತಿ ಮೂಡಿದೆ.
ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ಅಲೊವೇರಾ ಫೇಸ್ ಮಾಸ್ಕ್

ಹೊಳೆಯುವ ಕಾಂತಿಯುಕ್ತ ತ್ವಚೆಗಾಗಿ ಅಲೊವೇರಾ ಫೇಸ್ ಮಾಸ್ಕ್

ಲೋಳೆಸರ ಒಂದು ಬಹುಪಯೋಗಿ ಸಸ್ಯವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಒಂದು ಅತ್ಯುತ್ತಮ ಮನೆ ಔಷಧಿಯ ಮೂಲವೆಂದು ಅನುಮೋದಿಸಲ್ಪಟ್ಟಿದೆ. ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಉಪಯುಕ್ತವಾಗಿದ್ದು, ಈ ಕಾರಣದಿಂದಾಗಿ ಇದು ಅನೇಕ ಸಾವಯವ ದ್ರಾವಣಗಳ ತಯಾರಕರ ಪಾಲಿಗೆ ಒಂದು ವರದಾನದಂತಿದೆ.ಆರೋಗ್ಯಕ್ಕೆ ಸಂಬಂಧಿಸಿದಂತೆ ಲೋಳೆಸರದ ನಾನಾ ಬಗೆಯ ಉಪಯೋಗಗಳನ್ನು ಪಟ್ಟಿ ಮಾಡಿದ್ದು, ಇವು ನಿಮಗೆ ಖಂಡಿತವಾಗಿಯೂ ಕುತೂಹಲಕಾರಿಯಾಗಿರುತ್ತದೆ. ಕೈಂಗಟಿಕೊಳ್ಳುವಂತಹ ಲೋಳೆ ಇರುವಂತಹ ಹಸಿರು ಬಣ್ಣದ ಎಲೆ ಅಲೊವೇರಾದ ಅದು ಕಂಡುಬರುವುದಕ್ಕಿಂತ ಹೆಚ್ಚಿನ ಗುಣಗಳನ್ನು ಹೊಂದಿದೆ.

ಎಚ್ಚರ! ಜಾಸ್ತಿ ಬ್ರೆಡ್ ತಿಂದರೆ ಲೂಸ್ ಮೋಷನ್ ಆಗಬಹುದು!

ಎಚ್ಚರ! ಜಾಸ್ತಿ ಬ್ರೆಡ್ ತಿಂದರೆ ಲೂಸ್ ಮೋಷನ್ ಆಗಬಹುದು!

ಬ್ರೆಡ್ ಕೆಲವು ರೀತಿಯಲ್ಲಿ ಆರೋಗ್ಯಕರವಾದ ತಿನಿಸು ಅಥವಾ ಆಹಾರ ಪದಾರ್ಥ ಎಂದು ಹೇಳಲಾಗುತ್ತದೆ. ಆದರೂ ಗಣನೀಯವಾಗಿ ಬ್ರೆಡ್ ಸೇವನೆ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವವಾಗುವುದು. ಬ್ರೆಡ್ ಸಂಸ್ಕರಿಸಿದ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಬರುತ್ತದೆ. ಒತ್ತಡದ ಬದುಕು ಅಥವಾ ಗಡಿಬಿಡಿಯ ಜೀವನ ಶೈಲಿಯಲ್ಲಿ ಬ್ರೆಡ್ ಸೇವನೆ ಸರಳ ಹಾಗೂ ಸುಲಭ ವಿಧಾನವಾಗಿದೆ. ಇದರಿಂದ ಅಷ್ಟೇ ಸುಲಭವಾಗಿ ರಕ್ತದೊತ್ತಡ, ಉದರ ಕಾಯಿಲೆ, ಫ್ರಕ್ಟೋಸ್, ಕೊಲೆಸ್ಟ್ರಾಲ್, ಅಧಿಕ ಕ್ಯಾಲೋರಿ, ಅನಗತ್ಯ ಪೋಷಕಾಂಶಗಳು, ಮಲಬದ್ಧತೆಯಂತಹ ಸಮಸ್ಯೆಗಳು ಕಾಡುತ್ತವೆ.

ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿಗೆ?

ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿಗೆ?

ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಬಿಜೆಪಿ ಸೇರುವ ಸಾಧ್ಯತೆ ಇದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿದೆ. ನಂತರ ಅವರು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದಾರೆ. ಆದರೆ, ಅಧಿಕೃತವಾಗಿ ಪಕ್ಷವನ್ನು ಸೇರಿಲ್ಲ. ಯುಗಾದಿ ಶುಭಾಶಯಗಳನ್ನು ಕೋರುವ ನೆಪದಲ್ಲಿ ಆಪ್ತರನ್ನು ಭೇಟಿ ಮಾಡಿ ಬಿಜೆಪಿ ಸೇರುವ ಕುರಿತು ಮಾತುಕತೆಯನ್ನು ನಡೆಸುತ್ತಿದ್ದಾರೆ. 'ನಾನು ಯಾವುದೇ ಪಕ್ಷ ಸೇರುವುದಾದದರೂ ಅಧಿಕೃತವಾಗಿ ಘೋಷಣೆ ಮಾಡುವೆ' ಎಂದು ನಡಹಳ್ಳಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.