Short News

ರಾಹುಲ್ ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆದರೆ ?: ಬಿಎಸ್‌ವೈ ಗಂಭೀರ ಆರೋಪ

ರಾಹುಲ್ ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆದರೆ ?: ಬಿಎಸ್‌ವೈ ಗಂಭೀರ ಆರೋಪ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರ್ನಾಟಕ ಪ್ರವಾಸ ಮುಂದುವರೆದಿರುವಂತೆಯೇ ಅವರ ವಿರುದ್ಧ ಟ್ವೀಟ್ ವಾರ್ ಮುಂದವರೆಸಿರುವ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯೋ ರಾಹುಲ್ 'ಎಲೆಕ್ಷನ್ ಹಿಂದೂ' ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು ಪತ್ರಿಕೆಗಳ ಎರಡು ವರದಿಗಳನ್ನು ಹಿನ್ನಲೆಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ನೋಡ ಬನ್ನಿ ಮಾರಿಕಾಂಬಾ ಜಾತ್ರೆ

ನೋಡ ಬನ್ನಿ ಮಾರಿಕಾಂಬಾ ಜಾತ್ರೆ

ಮಲೆನಾಡಿನಲ್ಲಿ ಬಹು ಪ್ರಸಿದ್ಧ ಜಾತ್ರೆಯೆಂದು ಪ್ರಸಿದ್ಧವಾಗಿರುವ ಮಾರಿಕಾಂಬಾ ಜಾತ್ರೆ ಇಂದಿನಿಂದ ಶಿವಮೊಗ್ಗದಲ್ಲಿ ಪ್ರಾರಂಭಗೊಂಡಿದೆ. ಜಾತ್ರೆಗೆ ಸಮಿತಿಯು ಎಲ್ಲಾ ರೀತಿಯ ತಯಾರಿಯನ್ನೂ ಮಾಡಿದ್ದು, ಭಕ್ತಾಧಿಗಳ ಅನುಕೂಲತೆಗೆ ಪೊಲೀಸ್ ಸೇರಿದಂತೆ ಹಲವು ಇಲಾಖೆಗಳ ಸೇವೆ ಪಡೆದಿದೆ. ಹಲವಾರು ವರ್ಷಗಳಿಂದಲೂ ನಡೆಸಿಕೊಂಡು ಬಂದಿರುವ ಈ ಜಾತ್ರೆಗೆ ದೊಡ್ಡ ಐತಿಹ್ಯ ಇದೆ. ಜಾತ್ರೆ ಪ್ರಯುಕ್ತ ಹಲವು ಮನೊರಂಜನಾ ಕಾರ್ಯಕ್ರಮಗಳ ಜೊತೆಗೆ ಕ್ರೀಡೆಗಳನ್ನೂ ಆಯೋಜಿಸಲಾಗಿದ್ದು, ಬಯಲು ಕುಸ್ತಿ ಪ್ರಮುಖ ಆಕರ್ಷಣೆ.

ಬಿಗ್ ಬಾಸ್  ಚಂದನ್ ಶೆಟ್ಟಿಯ ವಿಚಿತ್ರ ಪ್ರೇಮ ಕಥೆ

ಬಿಗ್ ಬಾಸ್ ಚಂದನ್ ಶೆಟ್ಟಿಯ ವಿಚಿತ್ರ ಪ್ರೇಮ ಕಥೆ

ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿಯ ಚಂದನ್ ಶೆಟ್ಟಿ ‘ವಿಚಿತ್ರ ಪ್ರೇಮ ಕಥೆ' ಎಂಬ ಸಿನೆಮಾದ ಮೂಲಕ ನಾಯಕ ನಟ ನಾಗುತ್ತಿದ್ದಾರೆ. ವಾಸು ನಾನ್​ ಪಕ್ಕಾ ಕಮರ್ಶಿಯಲ್​ ಹಾಗೂ ಅಮ್ಮ ಐ ಲವ್​ ಯು ಸಿನಿಮಾದಲ್ಲಿ ನಟಿಸುತ್ತಿರುವ ನಿಶ್ವಿಕಾ ನಾಯ್ಡು ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗಣೇಶ್‌ ಅಭಿನಯದ ಸಂಗಮ ಹಾಗೂ ಅಜಯ್​ರಾವ್​​ರ ಜೈಭಜರಂಗ ಬಲಿ ಸಿನಿಮಾಗಳಿಗೆ ಆಕ್ಷನ್​ ಕಟ್​ ಹೇಳಿದ್ದ ರವಿವರ್ಮ ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ.
ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ನೈಟ್ ಶೂಟಿಂಗ್ ಮಾಡಿದ ಅಂಬಿ

ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ನೈಟ್ ಶೂಟಿಂಗ್ ಮಾಡಿದ ಅಂಬಿ

ಅಂಬರೀಶ್ ಅವರ ಇಷ್ಟು ವರ್ಷದ ಕೆರಿಯರ್ ನಲ್ಲಿ ಎಂದು ಕೂಡ ರಾತ್ರಿ ಶೂಟಿಂಗ್ ಮಾಡಿರಲಿಲ್ಲವಂತೆ. ಆದರೆ ಇದೇ ಮೊದಲ ಬಾರಿಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ರಾತ್ರಿ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದಾರೆ.ಕೆಲದಿನಗಳ ಹಿಂದೆ ಚಿತ್ರದ ಚಿತ್ರೀಕರಣ ನಾಗರಬಾವಿ ಹತ್ತಿರ ನಡೆದಿದೆ. ಬೆಳ್ಳಗೆ 12 ಗಂಟೆಗೆ ಶುರುವಾದ ಶೂಟಿಂಗ್ ರಾತ್ರಿ 2 ಗಂಟೆವರೆಗೆ ಸಾಗಿದೆ. ಅಂಬರೀಶ್ ಮೊದಲ ಬಾರಿಗೆ ತಡ ರಾತ್ರಿಯ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಚಿತ್ರೀಕರಣ ಅನುಭವದ ಬಗ್ಗೆ ಮಾತನಾಡಿದ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ ನಿರ್ದೇಶಕ ಗುರುದತ್ ''ತುಂಬ ಖುಷಿ ಆಗುತ್ತಿದೆ.