Short News

ಕರ್ನಾಟಕ ರಾಜ್ಯಪಾಲರ ನಡೆ ಸರಿಯಲ್ಲ: ಡಿಎಂಕೆ ಸ್ಟಾಲಿನ್ ಟ್ವೀಟ್

ಕರ್ನಾಟಕ ರಾಜ್ಯಪಾಲರ ನಡೆ ಸರಿಯಲ್ಲ: ಡಿಎಂಕೆ ಸ್ಟಾಲಿನ್ ಟ್ವೀಟ್

ಐಎನ್‌ಸಿ, ಜೆಡಿಎಸ್‌, ಬಿಎಸ್‌ಪಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇರುವ ಹೊರತಾಗಿಯೂ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಿಜೆಪಿಗೆ ಸರಕಾರ ರಚಿಸುವಂತೆ ಆಹ್ವಾನಿಸಿರುವುದು ಸ್ವೇಚ್ಚಾಚಾರದ ಮತ್ತು ಅಸಂವಿಧಾನಿಕ ನಡೆಯಾಗಿದ್ದು, ಇದು ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದಲ್ಲದೆ ಪ್ರಜಾಸತ್ತೆಯ ಅಡಿಗಲ್ಲನ್ನು ನಾಶಪಡಿಸುವಂತಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಟ್ವೀಟ್‌ ಮಾಡಿದ್ದಾರೆ. ಸ್ಪಷ್ಟ ಬಹುಮತವಿಲ್ಲದ ಭ್ರಷ್ಟ ಎಐಎಡಿಎಂಕೆ ಸರಕಾರವನ್ನು ರಕ್ಷಿಸುವ ಬಿಜೆಪಿ ಯತ್ನ ತಮಿಳು ನಾಡಿನ ಜನತೆಗೂ ಪರಿಚಿತ ಎಂದು ಸ್ಟಾಲಿನ್ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಭೀಕರ ರಸ್ತೆ ಅಪಘಾತ: ಖ್ಯಾತ  ನಟಿ  ಸಾವು

ಭೀಕರ ರಸ್ತೆ ಅಪಘಾತ: ಖ್ಯಾತ ನಟಿ ಸಾವು

ಚಿತ್ರೀಕರಣದ ಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಖ್ಯಾತ ಭೋಜ್ ಪುರಿ ನಟಿ 45 ವರ್ಷದ ನಟಿ ಮನೀಶಾ ರೈ ಮೃತಪಟ್ಟಿರುವ ಘಟನೆ ನಡೆದಿದೆ. ತನ್ನ ಸಹವರ್ತಿ ಸಂಜೀವ್ ಮಿಶ್ರಾ ಜತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಸಂಜೀವ್ ಮಿಶ್ರಾ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ ಉತ್ತರಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗುವ ಸಲುವಾಗಿ ನಟಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ನಿರ್ಣಾಯಕ ಪಂದ್ಯ: ಮುಂಬೈಗೆ 175 ರನ್  ಟಾರ್ಗೆಟ್ ನೀಡಿದ ಡೆಲ್ಲಿ

ನಿರ್ಣಾಯಕ ಪಂದ್ಯ: ಮುಂಬೈಗೆ 175 ರನ್ ಟಾರ್ಗೆಟ್ ನೀಡಿದ ಡೆಲ್ಲಿ

ದೆಹಲಿಯ ಫಿರೂಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ ಮತ್ತು ಮುಂಬೈ ಇಂಡಿಯನ್ಸ್ ಟಿ-20 ಟೂರ್ನಿಯ ನಿರ್ಣಾಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ರಿಷಭ್ ಪಂತ್ ಆಕರ್ಷಕ ಅರ್ಧಶತಕದ (64) ನೆರವಿನೊಂದಿಗೆ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 174 ರನ್‌ ಟಾರ್ಗೆಟ್ ನೀಡಿದೆ. ವಿಜಯದ ಗುರಿ ಬೆನ್ನು ಹತ್ತಿರುವ ಮುಂಬೈ ಈಗಾಗಲೇ 12 ಓವರ್ ಗೆ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿ. ಆಟ ಮುಂದುವರೆಸಿದೆ.
ದಕ್ಷಿಣ ಕೊಡಗಿನಲ್ಲಿ  ಕೆಸರು ಎರಚಿ ಹರಕೆ ತೀರಿಸುವ ಅಪರೂಪದ ಹಬ್ಬ

ದಕ್ಷಿಣ ಕೊಡಗಿನಲ್ಲಿ ಕೆಸರು ಎರಚಿ ಹರಕೆ ತೀರಿಸುವ ಅಪರೂಪದ ಹಬ್ಬ

ಕೊಡಗಿನ ವಿಶಿಷ್ಟ ಹಬ್ಬ 'ಬೋಡ್ ನಮ್ಮೆ' ಸಾಮಾನ್ಯವಾಗಿ ಜಿಲ್ಲೆಯಾದ್ಯಂತ ನಡೆಯುತ್ತದೆಯಾದರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಚರಣೆಯಲ್ಲಿ ವಿಭಿನ್ನತೆ ಇರುವುದನ್ನು ನಾವು ಕಾಣಬಹುದಾಗಿದೆ.

ಇದೀಗ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಆರಂಭವಾಗಿದ್ದು, ಗ್ರಾಮದಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಯಾಗಿದೆ.

ಹಬ್ಬವು ಶನಿವಾರ (ಮೇ.19) ರಂದು ಆರಂಭವಾಗಿದ್ದು ಭಾನುವಾರ (ಮೇ.20) ಮುಕ್ತಾಯಗೊಳ್ಳಲಿದೆ. ಈ ಎರಡು ದಿನಗಳ ಕಾಲ ಹಬ್ಬದ ಅಂಗವಾಗಿ ಹಲವು ಸಂಪ್ರದಾಯದ ಕಾರ್ಯಕ್ರಮಗಳು, ಪೂಜಾ ಕಾರ್ಯಗಳು ನಡೆಯಲಿವೆ.