Short News

ಜೋರು ಮಳೆಗೆ ತುಂಬಿದ ಕಬಿನಿ ಜಲಾಶಯ: ಸಂತಸಗೊಂಡ ರೈತರು

ಜೋರು ಮಳೆಗೆ ತುಂಬಿದ ಕಬಿನಿ ಜಲಾಶಯ: ಸಂತಸಗೊಂಡ ರೈತರು

ಕೇರಳದ ವೈನಾಡಿನಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ಸ್ ಒಳಹರಿವು ಹೆಚ್ಚಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಸಂಜೆ ವೇಳೆಗೆ 10 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡಲು ನಿರ್ಧರಿಸಲಾಗಿದ್ದು, ಕಬಿನಿ ತುಂಬಿರುವುದರಿಂದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಸುರಿದ ಮಳೆಗೆ ಜಲಾಶಯದಲ್ಲಿ ನೀರಿನಮಟ್ಟ ಒಂದೇ ದಿನಕ್ಕೆ 5 ಅಡಿ ಏರಿಕೆಯಾಗಿದ್ದು, ಸದ್ಯ ನೀರಿನ ಮಟ್ಟ 77 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 84 ಅಡಿ ಇದೆ.
ಭೂ ವಿವಾದ: ಮಹಿಳೆಯ ಎದೆಗೆ ಒದ್ದ ತೆಲಂಗಾಣ ಸ್ಥಳೀಯ ಸಂಸ್ಥೆ ಅಧ್ಯಕ್ಷ!

ಭೂ ವಿವಾದ: ಮಹಿಳೆಯ ಎದೆಗೆ ಒದ್ದ ತೆಲಂಗಾಣ ಸ್ಥಳೀಯ ಸಂಸ್ಥೆ ಅಧ್ಯಕ್ಷ!

ಆಸ್ತಿ ವಿವಾದದ ಜಗಳಕ್ಕೆ ತೆಲಂಗಾಣ ರಾಷ್ಟ್ರ ಸಮಿತಿಯ ಮಂಡಲ ಪರಿಷತ್ ಅಧ್ಯಕ್ಷರೊಬ್ಬರು ಮಹಿಳೆಗೆ ಒದ್ದಿರುವ ಘಟನೆ ನಿಜಾಮಾಬಾದ್ ನಲ್ಲಿ ನಡೆದಿದೆ. ಇಮ್ಮಾಡಿ ಗೋಪಿ ಎಂಬ ಹೆಸರಿನ ಈ ನಾಯಕ ಮಹಿಳೆಯೊಬ್ಬರಿಗೆ 33 ಲಕ್ಷ ರೂ ಬೆಲೆಬಾಳುವ ಆಸ್ತಿಯೊಂದನ್ನು ಮಾರಿದ್ದರು. ಹಣ ಪಡೆದು ನಂತರ ಆಸ್ತಿಯನ್ನು ಮಹಿಳೆಗೆ ಹಸ್ತಾಂತರಿಸಲು ಒಪ್ಪದೆ, ಪೀಡಿಸುತ್ತಿದ್ದರು. ಇದರಿಂದ ಬೇಸೆತ್ತ ಮಹಿಳೆ ತಮ್ಮ ಸಮುದಾಯದ ಜನರೊಂದಿಗೆ ಗೋಪಿ ಮನೆ ಬಳಿ ತೆರಳಿ ಆಸ್ತಿಯನ್ನು ಹಸ್ತಾಂತರಿಸುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಕೋಪಗೊಂಡು ಚಪ್ಪಲಿಯಿಂದ ಹೊಡೆದ್ದಾರೆ. ಇದರಿಂದ ಕೋಪಗೊಂಡ ಗೋಪಿ ತಮ್ಮ ಕಾಲಿನಿಂದ ಮಹಿಳೆಯನ್ನು ಬಲವಾಗಿ ಒದ್ದಿದ್ದಾರೆ.
ದರ್ಗಾ ತಲುಪುವ ಮೊದಲೇ ಜವರಾಯನ ಅಟ್ಟಹಾಸಕ್ಕೆ ಯುವಕ ಬಲಿ

ದರ್ಗಾ ತಲುಪುವ ಮೊದಲೇ ಜವರಾಯನ ಅಟ್ಟಹಾಸಕ್ಕೆ ಯುವಕ ಬಲಿ

ರಸ್ತೆಯ ಪಕ್ಕದ ವಿದ್ಯುತ್ ಕಂಬ ತುಂಡಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಮನಗರದ ಮುತ್ತಯ್ಯನಕಟ್ಟೆ ಗ್ರಾಮದ ಬಳಿ ಭಾನುವಾರ ನಡೆದಿದೆ. ವಿದ್ಯುತ್ ಕಂಬದ ಅಡಿ ಸಿಲುಕಿ ಮೃತಪಟ್ಟ ಯುವಕ ರಾಮನಗರದ ನಿವಾಸಿ ಇಸ್ಮಾಯಿಲ್( 22). ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಹಂಚಿಕುಪ್ಪೆ ಗ್ರಾಮದಲ್ಲಿರುವ ದರ್ಗಾಕ್ಕೆ ತೆರಳುವ ಸಮಯದಲ್ಲಿ ದುರ್ಘಟನೆ ನಡೆದಿದೆ. ಇನ್ನು ಕೇವಲ ಅರ್ಧ ಕಿಲೋಮೀಟರ್ ಕ್ರಮಿಸಿದ್ದರೆ ದರ್ಗಾ ತಲುಪುತ್ತಿದ್ದ ದುರ್ದೈವಿ ಯುವಕ. ಆದರೆ ದರ್ಗಾ ತಲುಪುವ ಮೊದಲೇ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
ತಿರುಪತಿ 'ತಿಮ್ಮಪ್ಪನ' ಮೂರ್ತಿಯ ಹಿಂದಿದೆ ಚಿದಂಬರ ರಹಸ್ಯ..!

ತಿರುಪತಿ 'ತಿಮ್ಮಪ್ಪನ' ಮೂರ್ತಿಯ ಹಿಂದಿದೆ ಚಿದಂಬರ ರಹಸ್ಯ..!

ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೆಂದರೆ ತಮಿಳುನಾಡು. ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ. ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more