Short News

ಕನ್ನಡ ಪುಸ್ತಕ ಪ್ರಾಧಿಕಾರ: ಪ್ರಕಾಶಕರ ನೋಂದಣಿಗೆ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರ: ಪ್ರಕಾಶಕರ ನೋಂದಣಿಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿ ನೂರಾರು ಪ್ರಕಾಶಕರು ಇದ್ದು, ದಿನವಿಡಿ ಹತ್ತಾರು ಪುಸ್ತಕಗಳು ಪ್ರಕಟವಾಗುತ್ತವೆ. ರಾಜ್ಯದಲ್ಲಿ ಪ್ರಕಟಿತ ಪುಸ್ತಕಗಳ ಹಾಗೂ ಪುಸ್ತಕ ಪ್ರಕಾಶಕರ ವಿವರಗಳು ಒಂದೆಡೆ ಲಭ್ಯವಾದಲ್ಲಿ ಸಾಹಿತ್ಯಾಸಕ್ತರಿಗೆ ಅನುಕೂಲವಾಗುವ ದೃಷ್ಟಿಕೋನದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಾಶಕರ ನೋಂದಣಿ ಯೋಜನೆಯೊಂದನ್ನು ಆರಂಭಿಸುತ್ತಿದೆ. ಈ ದಿಸೆಯಲ್ಲಿ ರಾಜ್ಯದೆಲ್ಲಡೆ ಇರುವ ಪ್ರಕಾಶಕರು ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದೆ.
ಬ್ಯಾಂಕಿಗೆ ಮತ್ತೋರ್ವನಿಂದ 389 ಕೋಟಿ ಪಂಗನಾಮ

ಬ್ಯಾಂಕಿಗೆ ಮತ್ತೋರ್ವನಿಂದ 389 ಕೋಟಿ ಪಂಗನಾಮ


ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 389.85 ಕೋಟಿ ರೂಪಾಯಿ ವಂಚಿಸಿದ ಮತ್ತೋರ್ವ ವಜ್ರದ ರಫ್ತುದಾರನ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ದ್ವಾರ್ಕಾ ದಾಸ್ ಸೇಠ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಮೇಲೆ ಕೇಸ್ ದಾಖಲಿಸಿಲಾಗಿದೆ. ಆರು ತಿಂಗಳ ಹಿಂದೆಯೇ ಬ್ಯಾಂಕ್ ಈ ಸಂಬಂಧ ಸಿಬಿಐಗೆ ದೂರು ನೀಡಿತ್ತು. ಆದರೆ ಪ್ರಕರಣ ದಾಖಲಿಸಿಕೊಳ್ಳದ ಸಿಬಿಐ ಈಗ ಕಂಪನಿ ಮತ್ತು ಕಂಪನಿ ನಿರ್ದೇಶಕರಾದ ಸಭ್ಯಾ ಸೇಠ್, ರೀತಾ ಸೇಠ್, ಕೃಷ್ಣ ಕುಮಾರ್ ಸಿಂಗ್, ರವಿ ಸಿಂಗ್ ಮತ್ತು ಮತ್ತೊಂದು ಕಂಪನಿ ದ್ವಾರ್ಕಾ ದಾಸ್ ಸೇಠ್ ಎಸ್ಇಝಡ್ ಕಾರ್ಪೊರೇಷನ್ ವಿರುದ್ಧವೂ ದೂರು ದಾಖಲಿಸಿದೆ.

'ಮಂಗಳೂರು ದಕ್ಷಿಣ'ದಲ್ಲಿ ಸಿಪಿಐಎಂ ಪ್ರಚಾರ ಆರಂಭ

'ಮಂಗಳೂರು ದಕ್ಷಿಣ'ದಲ್ಲಿ ಸಿಪಿಐಎಂ ಪ್ರಚಾರ ಆರಂಭ


ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈ ಬಾರಿ ಸಿಪಿಐಎಂ ತೀರ್ಮಾನಿಸಿದೆ. ಮಂಗಳೂರು , ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಹಾಗು ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರಗಳಿಂದ ಸಿಪಿಐಎಂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಸಿಪಿಐಎಂ ಅಭ್ಯರ್ಥಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇಲ್ಲಿ ಸಿಪಿಐಎಂ ಪಕ್ಷದ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಈಗಾಗಲೇ ಪ್ರಚಾರಕ್ಕೆ ಧುಮುಕಿದ್ದಾರೆ.

ಗೂಗಲ್‌ನ ಹೊಸ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಚಾಟಿಂಗ್ ವ್ಯವಸ್ಥೆ ಹೇಗೆ ಬದಲಾಗುತ್ತದೆ ಗೊತ್ತಾ!

ಗೂಗಲ್‌ನ ಹೊಸ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಚಾಟಿಂಗ್ ವ್ಯವಸ್ಥೆ ಹೇಗೆ ಬದಲಾಗುತ್ತದೆ ಗೊತ್ತಾ!

ಗೂಗಲ್ ಇದೀಗ ಕೃತಕ ಬುದ್ದಿಮತ್ತೆಯನ್ನು ತನ್ನ ಎಲ್ಲ ಸೇವೆಗಳಲ್ಲಿಯೂ ಅಳವಡಿಸಲು ಮುಂದಾಗಿದ್ದು, ಇ-ಮೇಲ್‌ಗೆ ಉತ್ತರ ನೀಡುವುದು ಕಷ್ಟ ಎನ್ನುವವರಿಗೆ ಸ್ನೇಹಿತರ ಜತೆ ಚಾಟ್ ಮಾಡುತ್ತಾ ಸುಸ್ತಾದವರಿಗೆ. 'ರಿಪ್ಲೈ' ಎಂಬ ಹೆಸರಿನ ಹೊಸ ಕಾರ್ಯವಿಧಾನ ತರಲು ಮುಂದಾಗಿದೆ. ಇ-ಮೇಲ್‌ಗಳಿಗೆ ರಿಫ್ಲೈ ಮಾಡಲು ಮರೆತರೆ, ಮೊಬೈಲ್‌ನಲ್ಲಿ ಸಂದೇಶ ಟೈಪ್ ಮಾಡುವುದು ಕಷ್ಟ ಎನ್ನುವವರಿಗೆ, ಚಾಟ್ ಮಾಡುತ್ತಾ ಸುಸ್ತಾಯಿತು ಎಂದಾದರೆ ಇದಕ್ಕೆ ‘ರಿಪ್ಲೈ' ಎಂಬ ಹೆಸರಿನ ಹೊಸ ಕಾರ್ಯವಿಧಾನ ಸಹಾಯ ಮಾಡಬಲ್ಲದು.! ಕೃತಕ ಬುದ್ಧಿಮತ್ತೆ (AI)ಯಿಂದ ಕಾರ್ಯ ನಿರ್ವಹಿಸುವ ಈ ಕಾರ್ಯವಿಧಾನವನ್ನು ನಿರ್ಮಿಸುವ ಕಾರ್ಯವನ್ನು ಗೂಗಲ್ ಆರಂಭಿಸಿದೆ.