Short News

ಅಗಸ್ಟ್ ಕೊನೆ ವಾರ ಕರ್ನಾಟಕ ಬಂದ್ ಗೆ ಕರೆ

ಅಗಸ್ಟ್ ಕೊನೆ ವಾರ ಕರ್ನಾಟಕ ಬಂದ್ ಗೆ ಕರೆ

ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಆಗಸ್ಟ್ ಕೊನೆ ವಾರದಲ್ಲಿ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ವಾಟಾಳ್ ಉತ್ತರ ಕರ್ನಾಟಕ ಇಬ್ಬಾಗ ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತಿರುವವರ ವಿರುದ್ದ ಕಿಡಿಕಾರಿದರು. ಉತ್ತರ ಕರ್ನಾಟಕ ಎರಡು ಭಾಗ ಮಾಡೊದಕ್ಕೆ ಇದು ಹುಡುಗಾಟವಾ? ಯಾವುದೇ ಕಾರಣಕ್ಕೂ ರಾಜ್ಯವನ್ನು ಎರಡು ಭಾಗವಾಗಲು ಅವಕಾಶ ಕೊಡುವುದಿಲ್ಲ ಎಂದರು. ಕನ್ನಡ ಒಕ್ಕೂಟದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿದೆ ಎಂದರು.
ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಶೀರೂರು ಮಠವನ್ನು ಇಂದಿನಿಂದ ಮೂರು ದಿನಗಳ ಕಾಲ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಮೂರು ದಿನಗಳ ಕಾಲ ಮಠಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಶೀರೂರು ಶ್ರೀಗಳ ಸಾವು ಅಸಹಜ ಎಂಬ ಅನುಮಾನ ವ್ಯಕ್ತಪಡಿಸಿ ಅವರ ಪೂರ್ವಾಶ್ರಮದ ಸಹೋದರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕೆಂದು ಪೊಲೀಸರು ಮೂರು ದಿನಗಳ ಕಾಲ ಶೀರೂರು ಮಠವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲಾ ಎಸ್‌ಪಿ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದು, ಮಠದ ತನಿಖೆಯ ಜೊತೆಗೆ ಶೀರೂರು ಶ್ರೀಗಳ ಆಪ್ತೇಷ್ಟರ ವಿಚಾರಣೆ ಸಹ ನಾಳೆಯಿಂದ ನಡೆಯಲಿದೆ.
ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿಗೆ ಶಿವಸೇನಾ ಬೆಂಬಲ

ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿಗೆ ಶಿವಸೇನಾ ಬೆಂಬಲ

ಲೋಕಸಭೆಯಲ್ಲಿ ಶುಕ್ರವಾರ ನಡೆಯಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಶಿವಸೇನಾ ಪ್ರಕಟಿಸಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ ವಿರುದ್ಧವಾಗಿ ಮತ ಚಲಾಯಿಸುವಂತೆ ಶಿವಸೇನಾ ತನ್ನ ಎಲ್ಲ ಸಂಸದರಿಗೆ ವಿಪ್ ಜಾರಿ ಮಾಡಿದೆ. ಇದಕ್ಕೂ ಮುನ್ನ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಮಾತನಾಡಿದ್ದರು ಎನ್ನಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ4 ಸ್ಮಾರ್ಟ್‌ಫೋನ್‌ ಈಗ 9,490 ರೂ.ಗೆ ಲಭ್ಯ..!

ಬಿಡುಗಡೆಯಾಗಿ ಕೇವಲ ಒಂದು ತಿಂಗಳೂ ಕೂಡ ಕಳೆದಿಲ್ಲ. ಆಗಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಫೋನಿನ ಬೆಲೆಯಲ್ಲಿ ಬಾರೀ ಇಳಿಕೆ ಕಂಡುಬಂದಿದೆ. ಇದು ನಿಜಕ್ಕೂ ಸ್ಯಾಮ್ ಸಂಗ್ ಫೋನ್ ಇಷ್ಟ ಪಡುವ ಗ್ರಾಹಕರ ಪಾಲಿಗೆ ಸಿಹಿಸುದ್ದಿಯೇ ಸರಿ. ಸ್ಯಾಮ್ ಸಂಗ್ ಕಂಪೆನಿ ಕಳೆದ ತಿಂಗಳು ಎರಡು ಮಾಡೆಲ್ ನ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು. 2ಜಿಬಿ ಮೆಮೊರಿ/16ಜಿಬಿ ಸ್ಟೋರೇಜ್ ಮತ್ತು 3ಜಿಬಿ ಮೆಮೊರಿ/ 32ಜಿಬಿ ಸ್ಟೋರೇಜ್ ಕ್ರಮವಾಗಿ ಇದರ ಬೆಲೆ 9,990 ರುಪಾಯಿ ಮತ್ತು 11,990 ರುಪಾಯಿ ಆಗಿತ್ತು. ಈ ಸ್ಮಾರ್ಟ್ ಫೋನ್ 5.5-ಇಂಚಿನ ಹೆಚ್ ಡಿ ಸೂಪರ್ AMOLED ಡಿಸ್ಪ್ಲೇ ಹೊಂದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more