Short News

ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ಸಿಗರೇ 'ಬಂಗಾರ'ದ ಮನುಷ್ಯರು!

ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ಸಿಗರೇ 'ಬಂಗಾರ'ದ ಮನುಷ್ಯರು!

2013 ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಅಂದು ಮತದಾರರು ಮಿಶ್ರ ಪ್ರತಿಕ್ರಿಯೆ ತೋರಿದ್ದರು. ಆದ್ರೆ, ಈ ಬಾರಿಯ ಚುನಾವಣೆಯಲ್ಲಿ ಹಾಗಾಗಿಲ್ಲ. ಕೋಲಾರ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿದ್ದಾರೆ. ಕಳೆದ ಬಾರಿ ಪಕ್ಷೇತರನಾಗಿ ಗೆದ್ದಿದ್ದ ವರ್ತೂರು ಪ್ರಕಾಶ್ ಈ ಬಾರಿ ಕೋಲಾರದಲ್ಲಿ ಮಕಾಡೆ ಮಲಗಿದ್ದಾರೆ. ಕೋಲಾರದ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಉಳಿದ ಎರಡು ಕ್ಷೇತ್ರಗಳಲ್ಲಿ ಒಂದು ಜೆಡಿಎಸ್ ಪಾಲಾದರೆ, ಮತ್ತೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದಾರೆ.
ಲಂಡನ್ ಯುವರಾಜನ ಮದುವೆಯಲ್ಲಿ ಮಿಂಚಿದ ಪಿಗ್ಗಿ, ಪಿಗ್ಗಿಯ ಲ್ಯಾವೆಂಡರ್ ಲುಕ್ ಗೆ ಫಿದಾ ಆದ ಜನತೆ

ಲಂಡನ್ ಯುವರಾಜನ ಮದುವೆಯಲ್ಲಿ ಮಿಂಚಿದ ಪಿಗ್ಗಿ, ಪಿಗ್ಗಿಯ ಲ್ಯಾವೆಂಡರ್ ಲುಕ್ ಗೆ ಫಿದಾ ಆದ ಜನತೆ

ಲಂಡನ್ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕಲೆ ವಿಶ್ವದ ಪ್ರತಿಷ್ಟಿತ ಗಣ್ಯರು ಭಾಗವಹಿಸಿದ್ದರು. ಹಾಲಿವುಡ್, ಬಾಲಿವುಡ್ ನ ಹಲವು ಮಂದಿ ನರೆದಿದ್ದರು. ಅದ್ರಲ್ಲಿ ಭಾರತದ ನಟಿ ಪ್ರಿಯಾಂಕ ಚೋಪ್ರಾ ಕೂಡಾ ಒಬ್ಬರು. ಥೇಮ್ಸ್ ನದಿ ಥಟದಲ್ಲಿ ನಡೆದ ಮದುವೆಗೆ ಪ್ರಿಯಾಂಕ ಚೋಪ್ರಾ ಲ್ಯಾವೆಂಡರ್ ಕಲರ್ ಸ್ಕರ್ಟ್, ಅದೇ ಬಣ್ಣದ ಬ್ಲೇಜರ್ ಧರಿಸಿ, ಹಾಲಿವುಡ್ ನ ತನ್ನ ಕೋ ಸ್ಟಾರ್ ಜೊತೆ ಆಗಮಿಸಿದ್ರು. ಈ ಫೋಟೋಗಳನ್ನು ಪಿಗ್ಗಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಟಿ-20 ಟೂರ್ನಿಯ 56 ನೇ ಪಂದ್ಯ: ಪಂಜಾಬ್  ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

ಟಿ-20 ಟೂರ್ನಿಯ 56 ನೇ ಪಂದ್ಯ: ಪಂಜಾಬ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಐಪಿಎಲ್ 11ನ ಲೀಗ್‌ ಹಂತದ ಕೊನೆಯ ಪಂದ್ಯ ಇದಾಗಿದ್ದು ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಲು ಪಂಜಾಬ್‌ ತಂಡವು ಭಾರಿ ಅಂತರದಲ್ಲಿ ಗೆಲುವು ಸಾಧಿಸಲೇ ಬೇಕಿದೆ. ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಚೆನ್ನೈ ತಂಡ, ಕಳೆದ ಪಂದ್ಯದಲ್ಲಿ ಸೋಲನ್ನಪ್ಪಿರುವ ಕಾರಣ ಈ ಪಂದ್ಯ ಗೆದ್ದು ಗೆಲುವಿನ ಹಾದಿ ಮರಳುವ ಪ್ರಯತ್ನದಲ್ಲಿದೆ.
ಶಾಮನೂರು ಶಿವಶಂಕರಪ್ಪಗೆ ಡಿಸಿಎಂ ಸ್ಥಾನ ನೀಡಿ: ವೀರಶೈವ ಮಹಾಸಭಾ

ಶಾಮನೂರು ಶಿವಶಂಕರಪ್ಪಗೆ ಡಿಸಿಎಂ ಸ್ಥಾನ ನೀಡಿ: ವೀರಶೈವ ಮಹಾಸಭಾ

ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ. ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಪತ್ರ ಬರೆದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರಲ್ಲಿ ಬೇರೆ ಸಮುದಾಯಗಳಿಗಿಂತಲೂ ಹೆಚ್ಚು ಜನ ವೀರಶೈವ-ಲಿಂಗಾಯತ ಸಮುದಾಯದ ಶಾಸಕರು ಗೆದ್ದಿದ್ದು, ನಮ್ಮ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿಸ ಸ್ಥಾನ ಕೊಡಬೇಕು ಎಂದು ಪತ್ರಮುಖೇನ ಒತ್ತಾಯಿಸಲಾಗಿದೆ.