Short News

ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಗೆದ್ದು ಬೀಗಿದ ಬಿಜೆಪಿ

ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಗೆದ್ದು ಬೀಗಿದ ಬಿಜೆಪಿ

ಮುಸ್ಲಿಂ ಬಾಹುಲ್ಯವಿರುವ ಪ್ರದೇಶಗಳಲ್ಲಿನ ಹಿಂದೂ ಮತಗಳ ಧ್ರುವೀಕರಣವು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಹೆಚ್ಚು ಮತಗಳನ್ನು ಪಡೆದುಕೊಳ್ಳಲು ಬಿಜೆಪಿಗೆ ನೆರವಾಗಿದೆ. ಕರ್ನಾಟಕದಲ್ಲಿ 33ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದೆ. ಹಿಂದೂ ಮತಗಳ ಧ್ರುವೀಕರಣವು ಬಿಜೆಪಿ ಪರವಾಗಿ ಕೆಲಸ ಮಾಡಿರುವುದಲ್ಲದೆ,ಈ ಭಾಗಗಳಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಹೋಗಿದ್ದು ಕೂಡ ಬಿಜೆಪಿ ಗಮನಾರ್ಹ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಳ್ಳುವುದಕ್ಕೆ ಕಾರಣ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ 2013ರಲ್ಲಿ 19ಸ್ಥಾನಗಳಲ್ಲಿ ಗೆದ್ದಿದ್ದರೆ, ಈ ಬಾರಿ ಸಂಖ್ಯೆ 15ಕ್ಕೆ ಇಳಿದಿದೆ.
ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ನಿಯೋಜಿತ ಮುಖ್ಯಮಂತ್ರಿಯಾಗಿರುವ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ನಿಜ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರನ್ನು ಅಹ್ವಾನಿಸಿದ್ದಾರೆ.ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ರಜನೀಕಾಂತ್‌ ಒತ್ತಾಯಿಸಿರುವುದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ ಕರ್ನಾಟಕಕ್ಕೆ ಒಮ್ಮೆ ಭೇಟಿ ಕೊಡಿ. ಆಗ ನಿಮಗೆ ಇಲ್ಲಿನ ಸಂಪೂರ್ಣ ಚಿತ್ರಣ ಸಿಗಲಿದೆ ಎಂದಿದ್ದಾರೆ.
'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

ಶರಣ್ ನಟಿಸಿರುವ 'Rambo 2' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುಗರಿಗೆ ಸಖತ್ ಖುಷಿ ಕೊಡುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೇ ಚಿತ್ರತಂಡ ಪ್ರೇಕ್ಷಕರ ಮುಖದಲ್ಲಿ ಸಂತಸವನ್ನು ಮೂಡಿಸುತ್ತದೆ. ಕಾರಣ 'Rambo 2' ಸಿನಿಮಾವನ್ನು ನಟ, ನಿರ್ದೇಶಕ ಕಾಶೀನಾಥ್ ಅವರಿಗೆ ಸಮರ್ಪಣೆ ಮಾಡಲಾಗಿದೆ. 'Rambo 2' ಚಿತ್ರವನ್ನು ಕಾಶೀನಾಥ್ ಅವರಿಗೆ ಡೆಡಿಕೇಟ್ ಮಾಡಲಾಗಿದೆ. ಚಿತ್ರದ ಪ್ರಾರಂಭದಲ್ಲಿ ಬರುವ ಟೈಟಲ್ ಕಾರ್ಡ್ ನಲ್ಲಿ ಕಾಶೀನಾಥ್ ಕ್ಯಾಮರಾ ಹಿಡಿದ ಫೋಟೋವೊಂದು ತೆರೆ ಮೇಲೆ ಮೂಡುತ್ತದೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಇದನ್ನು ನೋಡಿಯೇ ಖುಷಿ ಆಗುತ್ತದೆ.
ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕರ್ನಾಟಕದ ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ದೆಹಲಿಯಲ್ಲಿ ಇಂದು ಭೇಟಿ ಆದರು. ಜೆಡಿಎಸ್ ಪಕ್ಷವು ಬಿಎಸ್‌ಪಿ ಜೊತೆ ಚುನಾವಣಾ ಪೂರ್ವವೇ ಮೈತ್ರಿ ಮಾಡಿಕೊಂಡಿತ್ತು, ಮಾಯಾವತಿ ಅವರು ಚುನಾವಣೆ ಸಮಯದಲ್ಲಿ ಮೂರು ಬಾರಿ ರಾಜ್ಯಕ್ಕೆ ಬಂದು ಜೆಡಿಎಸ್‌ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಮಾಯಾವತಿ ಅವರನ್ನು ಭೇಟಿ ಆದ ಕುಮಾರಸ್ವಾಮಿ ಅವರು, ಸಚಿವ ಸಂಪುಟ ರಚನೆ, ಗೆದ್ದ ಏಕೈಕ ಬಿಎಸ್‌ಪಿ ಶಾಸಕನಿಗೆ ಕೊಡತಕ್ಕ ಸಚಿವ ಸ್ಥಾನ, ಸರ್ಕಾರ ರಚನೆ ಮತ್ತು ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.